Skip to main content
ವಿಡಿಯೋ
1/2
crime

ಬೆಂಗಳೂರಿನಲ್ಲಿ ಪತ್ನಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ!

By Pavitra Ganapathi Baradavalli
ಬೆಂಗಳೂರಿನಲ್ಲಿ ಪತ್ನಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ!

ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಭಯಾನಕ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯ ನರ್ಸ್ ಮಂಜು ಅವರನ್ನು ಕೊಂದ ನಂತರ, ಪತಿ ಧರ್ಮಶಿಲಾಂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಭಯಾನಕ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯ ನರ್ಸ್ ಮಂಜು ಅವರನ್ನು ಕೊಂದ ನಂತರ, ಪತಿ ಧರ್ಮಶಿಲಾಂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಕಲ್ಲಕುರುಚ್ಚಿಯರಾಗಿದ್ದ ಮಂಜು ಮತ್ತು ಧರ್ಮಶಿಲಾಂ ಅವರಿಗೆ 3 ವರ್ಷಗಳ ಹಿಂದೆ ಮದುವೆಯಾಗಿತ್ತು.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?  


ಆದರೆ ಮಕ್ಕಳಿರಲಿಲ್ಲ. ಮದುವೆಯ ನಂತರ ದುಬೈನಲ್ಲಿ ಮೆಸ್ತ್ರಿ ಕೆಲಸ ಮಾಡುತ್ತಿದ್ದ ಧರ್ಮಶಿಲಾಂ, ಒಂದು ತಿಂಗಳ ಹಿಂದೆ ದುಬೈ ಬಿಟ್ಟು ಬೆಂಗಳೂರಿಗೆ ಬಂದು ಮೆಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಮಂಜು ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಉಲ್ಲಾಳ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಆಕೆ ತಂದೆಯೊಂದಿಗೆ ವಾಸಿಸುತ್ತಿದ್ದರು.ನಿನ್ನೆ ಮಧ್ಯಾಹ್ನ ಗಂಡ-ಹೆಂಡತಿ ನಡುವೆ ಮನೆ ಹಾಲ್‌ನಲ್ಲಿ ಗಲಾಟೆಯಾಗಿದೆ. ಆಗ ಹೆಂಡತಿಗೆ 7 ರಿಂದ 8 ಬಾರಿ ಚಾಕುವಿನಿಂದ ಚುಚ್ಚಿದ್ದ ಧರ್ಮಶಿಲಾಂ.
ಇದನ್ನೂ ಓದಿ: ಸ್ವಾಮಿ ಚೈತನ್ಯಾನಂದ ಮೇಲೆ ಲೈಂಗಿಕ ಕಿರುಕುಳ ಆರೋಪ: 40 ದಿನಗಳಲ್ಲಿ 13 ಹೋಟೆಲ್ ಬದಲಿಸಿದ ಖತರ್ನಾಕ್‌ ಸ್ವಾಮೀ!


ಚುಚ್ಚಿದ ನಂತರ ಹಾಲ್‌ನಲ್ಲಿದ್ದ ಪ್ಯಾನ್‌ಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡರು.ಸಂಬಂಧಿಕರ ಮನೆಗೆ ಹೋಗಿದ್ದ ಮಂಜು ತಂದೆ ಪೆರಿಯಾಸ್ವಾಮಿ ಸಂಜೆ ಮರಳಿ ಬಂದರು. ಎಷ್ಟೇ ಬಾಗಿಲು ಬಡಿದರೂ ತೆಗೆದಿರಲಿಲ್ಲ. ಒನರ್ ಬಳಿ ಡ್ಯೂಬ್ಲಿಕೇಟ್ ಕೀ ತಂದು ಬಾಗಿಲು ತೆರೆಯುತ್ತಾರೆ. ಆಗ ಹಾಲ್‌ನಲ್ಲಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಪೆರಿಯಾಸ್ವಾಮಿ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ ಇನ್ನೂ ತನಿಖೆ ನಡೆಯುತ್ತಿದೆ.
SWORNOF Women's kanjivaram banarasi silk saree for Patola festival Wedding silk with rich pallu Design sarees for women with blouse piece