ಸರ್ಕಾರಿ ವಕೀಲರು ಮತ್ತು ದರ್ಶನ್ ಪರ ವಕೀಲರ ನಡುವೆ ತೀವ್ರ ವಾದ-ಪ್ರತಿವಾದ ನಡೆದ ಬಳಿಕ ನ್ಯಾಯಾಲಯ ತೀರ್ಪು ಮುಂದೂಡಿದೆ.
ಬೆಂಗಳೂರು, ಸೆಪ್ಟೆಂಬರ್ 30, 2025: ನಟ ದರ್ಶನ್ ಸಲ್ಲಿಸಿದ್ದ ಹೆಚ್ಚುವರಿ ದಿಂಬು ಮತ್ತು ಹಾಸಿಗೆ ಕೋರಿಕೆ ಅರ್ಜಿಯ ತೀರ್ಪನ್ನು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯವು ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.Seiko Analog Black Dial Men's Watch-SSC573P1 Stainless Steel, Black Strap
ಜೈಲು ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ಈ ವೇಳೆ ಸರ್ಕಾರಿ ವಕೀಲರು ಮತ್ತು ದರ್ಶನ್ ಪರ ವಕೀಲರ ನಡುವೆ ತೀವ್ರ ವಾಗ್ವಾದ ನಡೆಯಿತು.ಇದನ್ನು ಓದಿ:ಆರೋಪಿ ದರ್ಶನ್ ಜೈಲು ಸೌಕರ್ಯ ಅರ್ಜಿ ವಿಚಾರಣೆ ಇಂದು; ಪಲ್ಲಂಗ ಕೊಡಿ ಅಂದರೆ ಪಲ್ಲಂಗ ಕೊಡಲು ಅವಕಾಶ ಇಲ್ಲ: SPP ವಾದ
ಜೈಲು ಅಧಿಕಾರಿಗಳ ಪರವಾಗಿ ಎಸ್.ಪಿ.ಪಿ. ಪ್ರಸನ್ನಕುಮಾರ್ ವಾದ ಮಂಡಿಸಿದರೆ, ನಟ ದರ್ಶನ್ ಪರವಾಗಿ ವಕೀಲ ಸುನೀಲ್ ವಾದಿಸಿದರು. ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, 57ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ತೀರ್ಪನ್ನು ಅಕ್ಟೋಬರ್ 9ಕ್ಕೆ ಮುಂದೂಡಿದ್ದಾರೆ.