ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳಲ್ಲಿ ಮಲ್ಲಮ್ಮ ಎಲ್ಲರ ಗಮನ ಸೆಳೆದಿದ್ದಾರೆ. ಉತ್ತರ ಕರ್ನಾಟಕದ ಈ ಪ್ರತಿಭೆ, ತಮ್ಮ ಮಾತಿನ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿದ್ದ ಮಲ್ಲಮ್ಮ, ಈಗ ದೊಡ್ಮನೆಯ ಭಾಗವಾಗಿರುವುದು ವಿಶೇಷವಾಗಿದೆ.
ಮನೆ ಜೀವನ ಅವರಿಗೆ ಸವಾಲಾಗಿ ಪರಿಣಮಿಸಿದ್ದು, ಮತ್ತೊಂದೆಡೆ ಅವರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಗಿಲ್ಲಿ ನಟನ ಜೊತೆಗಿನ ಅವರ ಸಂಭಾಷಣೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು 'ಒಂಟಿ' ಮತ್ತು 'ಜಂಟಿ' ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂಟಿ ಸ್ಪರ್ಧಿಗಳು ಒಬ್ಬರೇ ಆಡಬೇಕಾದರೆ, ಜಂಟಿ ಸ್ಪರ್ಧಿಗಳು ಜೋಡಿಯಾಗಿ ಆಡಬೇಕಿದೆ. ಮಲ್ಲಮ್ಮ, ಅಶ್ವಿನಿ ಗೌಡ, ಕಾಕ್ರೋಚ್ ಸುಧಿ ಸೇರಿದಂತೆ ಒಟ್ಟು ಆರು ಮಂದಿ ಒಂಟಿ ಸ್ಪರ್ಧಿಗಳಾಗಿದ್ದಾರೆ. ಉಳಿದ ಹನ್ನೆರಡು ಮಂದಿ ಜಂಟಿಗಳಾಗಿ ಆಡುತ್ತಿದ್ದಾರೆ.Seiko Analog Black Dial Men's Watch-SSC573P1 Stainless Steel, Black Strap
ಈ ವಿಭಜನೆಯಲ್ಲಿ ಒಂದು ಟ್ವಿಸ್ಟ್ ಇದೆ. ಒಂಟಿ ಸ್ಪರ್ಧಿಗಳಿಗೆ ಪ್ರತ್ಯೇಕ ಆಹಾರ ವ್ಯವಸ್ಥೆ ಇದ್ದು, ಇದನ್ನು ಜಂಟಿ ಸ್ಪರ್ಧಿಗಳು ಬಳಸುವಂತಿಲ್ಲ. ಅಷ್ಟೇ ಅಲ್ಲದೆ, ಒಂಟಿ ಸ್ಪರ್ಧಿಗಳು ಮನೆಯ ಯಾವುದೇ ಕೆಲಸ ಮಾಡುವ ಅಗತ್ಯವಿಲ್ಲ. ಮನೆಯ ಎಲ್ಲ ಕೆಲಸಗಳ ಸಂಪೂರ್ಣ ಜವಾಬ್ದಾರಿ ಜಂಟಿ ಸ್ಪರ್ಧಿಗಳಿಗೇ ವಹಿಸಲಾಗಿದೆ.
ಒಂದು ಪ್ರಸಂಗದಲ್ಲಿ, ಗಿಲ್ಲಿ ನಟ "ಗಂಟಲು ಉರಿಯುತ್ತಿದೆ, ಸ್ವಲ್ಪ ಜ್ಯೂಸ್ ಕೊಡಿ ಮಲ್ಲಮ್ಮ" ಎಂದು ಕೇಳಿದರು. ಅದಕ್ಕೆ ಮಲ್ಲಮ್ಮ, "ಈ ಜ್ಯೂಸ್ ಕೊಡೋ ಹಾಗಿಲ್ಲ. ನಿಮ್ಮದು ನಮಗೆ ಕೊಡಂಗಿಲ್ಲ, ನಮ್ಮದು ನಿಮಗೆ ಕೊಡಂಗಿಲ್ಲ. ಬೇಕಿದ್ರೆ ಹೊರಗೆ ಹೋದ ಮೇಲೆ ಸಿಗೋಣ, ಆಗ ಕೊಡಿಸ್ತೀನಿ" ಎಂದು ಬುದ್ಧಿವಂತಿಕೆಯಿಂದ ಉತ್ತರಿಸಿದರು.ದರ್ಶನ್ ಜೈಲು ಅರ್ಜಿ ವಿಚಾರಣೆ: ಹೆಚ್ಚುವರಿ ದಿಂಬು-ಹಾಸಿಗೆ ತೀರ್ಪು ಅಕ್ಟೋಬರ್ 9ಕ್ಕೆ ಮುಂದೂಡಿಕೆ..!
ಮಲ್ಲಮ್ಮನ ಈ ಜಾಣತನಕ್ಕೆ ಮನೆಯವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. "ಅವರು ಸ್ಮಾರ್ಟ್ ಇದ್ದಾರೆ" ಎಂದು ಅಭಿಪ್ರಾಯಪಟ್ಟರು. ಮಲ್ಲಮ್ಮ ಅವರಿಗೆ ಬಿಗ್ ಬಾಸ್ ನೀಡುವ ಕೆಲವು ಆದೇಶಗಳು ಅರ್ಥವಾಗುತ್ತಿಲ್ಲ. ಆದರೆ, ಅವುಗಳನ್ನು ಅರ್ಥ ಮಾಡಿಕೊಂಡು ಮುನ್ನಡೆದರೆ ಅವರು ಹೆಚ್ಚು ಕಾಲ ಉಳಿಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.