ಛತ್ತೀಸ್‌ಗಢದ ರಾಯ್ಪುರದಲ್ಲಿ ಆಘಾತಕಾರಿ ಕೊಲೆ ಪ್ರಕರಣವೊಂದು ನಡೆದಿದೆ. 16 ವರ್ಷದ ಗರ್ಭಿಣಿ ಬಾಲಕಿಯೊಬ್ಬಳು ತನ್ನನ್ನು ಗರ್ಭಿಣಿಯಾಗಿಸಿದ 20 ವರ್ಷದ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾಳೆ. ಈ ಘಟನೆ ರಾಯ್ಪುರದ ಸ್ಟೇಷನ್ ರಸ್ತೆಯ ಲಾಡ್ಜ್‌ನಲ್ಲಿ ಸೆಪ್ಟೆಂಬರ್ 27ರಂದು ನಡೆದಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿಯ ಭೀಕರ ಕೊಲೆ ಪೊಲೀಸರು ಕೊಲೆಯಾದ ಯುವಕನನ್ನು ಬಿಹಾರ ಮೂಲದ ಮೊಹಮ್ಮದ್ ಸದ್ದಾಂ ಎಂದು ಗುರುತಿಸಿದ್ದಾರೆ. ಈತ ರಾಯ್ಪುರದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ, ಪ್ರಾಥಮಿಕ ತನಿಖೆಯ ಪ್ರಕಾರ, ಸದ್ದಾಂ ಮತ್ತು 16 ವರ್ಷದ ಆತನ ಗೆಳತಿ ಸೆಪ್ಟೆಂಬರ್ 27ರಂದು ಸ್ಟೇಷನ್ ರಸ್ತೆಯ ಲಾಡ್ಜ್‌ಗೆ ಬಂದಿದ್ದರು. ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ಕೊಠಡಿಯಿಂದ ಒಮ್ಮೆ ಹೊರಬಂದಿರುವುದು ಸೆರೆಯಾಗಿದೆ ಆದರೆ, ಸೆಪ್ಟೆಂಬರ್ 28ರಂದು ಬಾಲಕಿಯೊಬ್ಬಳೇ ಲಾಡ್ಜ್‌ನಿಂದ ಹೊರಗೆ ಹೋಗಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ZAVERI PEARLS Rose Gold Cubic Zirconia Contemporary Brass Necklace & Earring Set For Women-ZPFK21107
ಮರುದಿನ ಇಬ್ಬರೂ ಲಾಡ್ಜ್‌ಗೆ ವಾಪಸಾಗದಿದ್ದಾಗ, ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 29ರಂದು ಗಂಜ್ ಪೊಲೀಸರು ನಕಲಿ ಕೀ ಬಳಸಿ ಕೊಠಡಿಯ ಬಾಗಿಲು ತೆರೆದಾಗ, ಸದ್ದಾಂನ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತು. ಸದ್ದಾಂನ ಕುತ್ತಿಗೆ, ಬೆನ್ನು ಮತ್ತು ದೇಹದ ಇತರ ಭಾಗಗಳಲ್ಲಿ ಸುಮಾರು ಐದು ಚಾಕು ಇರಿತದ ಗಾಯಗಳಿದ್ದವು, ಘಟನಾ ಸ್ಥಳದ ಸ್ಥಿತಿ ಇಬ್ಬರ ನಡುವೆ ತೀವ್ರ ಜಗಳ ನಡೆದಿರುವುದನ್ನು ಸೂಚಿಸಿತು.
ಕೊಲೆಯ ನಂತರ, ಬಾಲಕಿ ಕೊಠಡಿಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ, ಬೀಗದ ಕೀಯನ್ನು ರೈಲ್ವೆ ಹಳಿಗಳ ಮೇಲೆ ಎಸೆದು ಬಿಲಾಸ್‌ಪುರಕ್ಕೆ ರೈಲಿನಲ್ಲಿ ಹೋಗಿದ್ದಾಳೆ ನಂತರ ಆಕೆ ತನ್ನ ಮನೆಗೆ ಹೋಗಿ, ತಾಯಿಗೆ ತಾನು ಮಾಡಿದ ಕೃತ್ಯವನ್ನು ತಿಳಿಸಿದ್ದಾಳೆ. ತಾಯಿ ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು, ಮಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿ ಪೊಲೀಸರಿಗೆ ತಿಳಿಸಿದ ಪ್ರಕಾರ, ತಾನು ಸದ್ದಾಂನಿಂದ ಗರ್ಭಿಣಿಯಾಗಿದ್ದಾಳೆ, ಮದುವೆಯ ವಿಷಯವಾಗಿ ಇಬ್ಬರ ನಡುವೆ ಹಲವಾರು ಭಾರೀ ವಿವಾದ ನಡೆದಿತ್ತು. ಲಾಡ್ಜ್‌ನಲ್ಲಿ ನಡೆದ ಜಗಳದ ವೇಳೆ ಸದ್ದಾಂ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಬಿಗ್‌ಬಾಸ್ ಕನ್ನಡ 12: ದೊಡ್ಮನೆಯಲ್ಲಿ ಮಲ್ಲಮ್ಮ ರಾಕ್...ಗಿಲ್ಲಿ ಶಾಕ್! ಅಷ್ಟಕ್ಕೂ ಆಗಿದ್ದೇನು?
ಜೀವಭಯದಿಂದ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸದ್ದಾಂ ನಿದ್ದೆಯಲ್ಲಿದ್ದಾಗ, ಆಕೆ ಚಾಕುವಿನಿಂದ ಆತನ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾಳೆ. ಕೊಲೆಯ ನಂತರ, ಆಕೆ ಸದ್ದಾಂನ ಫೋನ್‌ನ್ನು ತೆಗೆದುಕೊಂಡಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.
ಬಾಲಕಿ ಅಪ್ರಾಪ್ತೆಯಾಗಿರುವ ಕಾರಣ, ಬಿಲಾಸ್‌ಪುರ ಪೊಲೀಸರು ಆಕೆಯನ್ನು ವಿಚಾರಣೆಗಾಗಿ ರಾಯ್ಪುರದ ಗಂಜ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.