Skip to main content
ವಿಡಿಯೋ
1/2
cinema

ಮದುವೆ ನಂತರ ಎರಡೆ ತಿಂಗಳಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದೆ: ಧನಶ್ರೀ ಸ್ಫೋಟಕ ಹೇಳಿಕೆ

By Gireesh Vasishta
ಮದುವೆ ನಂತರ ಎರಡೆ ತಿಂಗಳಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದೆ: ಧನಶ್ರೀ ಸ್ಫೋಟಕ ಹೇಳಿಕೆ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಧನಶ್ರೀ ಅವರ ಮಧ್ಯೆ ಬಿರುಕು ಉಂಟಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ವಿಚ್ಛೇದನಕ್ಕೆ ಸರಿಯಾದ ಕಾರಣ ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಚಹಲ್‌ಗೆ ಮನಸಾದಾಗ ಚಹಲ್ ಕೆಲವೊಂದು ಹೇಳಿಕೆಗಳನ್ನು ಅವರ ಮಾಜಿ ಪತ್ನಿಯ ವಿರುದ್ಧ ನೀಡಿದರೆ, ಮಾಜಿ ಪತ್ನಿಯಾದ ಧನಶ್ರೀ ಕೂಡ ಚಹಲ್‌ನ ವಿರುದ್ಧ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಇಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಿದೆ.

ಮದುವೆ ಎಂಬುದು ಸ್ವರ್ಗದಲ್ಲಿ ನಿರ್ಣಯವಾಗುವಂತಹ ವಿಚಾರ ಎಂದು ಎಲ್ಲರೂ ನಂಬುತ್ತಾರೆ. ಆದರೆ ಇತ್ತೀಚೆಗೆ ಕೆಲವೊಂದು ವಿವಾಹಗಳನ್ನು ನೋಡಿದರೆ ಅದು ನಿಜವೇ ಎಂಬ ಅನುಮಾನ ಎಲ್ಲರಿಗೂ ಕಾಡುತ್ತದೆ.

ಏಕೆಂದರೆ ಚಿಕ್ಕ ಚಿಕ್ಕ ವಿಷಯಗಳಿಗೂ ಸಹ ಮನಸ್ತಾಪ ಉಂಟಾಗಿ ಕೊನೆಗೆ ನ್ಯಾಯಾಲಯದ ಮೆಟ್ಟಿಲನ್ನು ಹತ್ತುತ್ತಾರೆ. ಮದುವೆ ನಡೆಯುವ ಸಂದರ್ಭದಲ್ಲಿ ಅತಿ ವೈಭೋಗದಿಂದ ಆಗುವ ಜೋಡಿಗಳು ಮದುವೆಯ ನಂತರ ನಿರಾಶಾದಾಯಕವಾದ ಜೀವನವನ್ನು ನಡೆಸುತ್ತಾರೆ. ನಂತರ ಬೇರೆ ಡಿವೋರ್ಸ್‌ ಪಡೆದು ಬೇರೆಯಾಗಿ ಜೀವನ ನಡೆಸುತ್ತಾರೆ. ವಿಚಾರದಲ್ಲಿ ಸಾಮಾನ್ಯ ಜನರಿಗೆ ಆಗುವ ಅನುಭವವೇ ಸೆಲೆಬ್ರಿಟಿಗಳಿಗೂ ಆಗುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.ಇದನ್ನು ಓದಿ: ಆರೋಪಿ ದರ್ಶನ್‌ ಜೈಲು ಸೌಕರ್ಯ ಅರ್ಜಿ ವಿಚಾರಣೆ ಇಂದು; ಪಲ್ಲಂಗ ಕೊಡಿ ಅಂದರೆ ಪಲ್ಲಂಗ ಕೊಡಲು ಅವಕಾಶ ಇಲ್ಲ: SPP ವಾದ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಧನಶ್ರೀ ಅವರ ಮಧ್ಯೆ ಬಿರುಕು ಉಂಟಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ವಿಚ್ಛೇದನಕ್ಕೆ ಸರಿಯಾದ ಕಾರಣ ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಚಹಲ್‌ಗೆ ಮನಸಾದಾಗ ಚಹಲ್ ಕೆಲವೊಂದು ಹೇಳಿಕೆಗಳನ್ನು ಅವರ ಮಾಜಿ ಪತ್ನಿಯ ವಿರುದ್ಧ ನೀಡಿದರೆ, ಮಾಜಿ ಪತ್ನಿಯಾದ ಧನಶ್ರೀ ಕೂಡ ಚಹಲ್‌ನ ವಿರುದ್ಧ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಇಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಿದೆ.Monte Carlo Mens Solid Lace Up Genuine Leather Casual Shoes (201803FW)

ಇತ್ತೀಚೆಗೆ ಅಮೆಜಾನ್‌ನ ಒಂದು ಕಾರ್ಯಕ್ರಮದಲ್ಲಿ ಧನಶ್ರೀ ಒಂದು ಹೇಳಿಕೆಯನ್ನು ನೀಡಿದ್ದು, ಹೇಳಿಕೆಯು ಬಾರಿ ಸಂಚಲನ ಮೂಡಿಸಿದೆ ಅದರಲ್ಲಿ ಅವರು ಹೇಳಿರುವ ರೀತಿ ಚಹಲ್ ಇಂದಲೇ ತಪ್ಪಾಗಿದೆ ಎನ್ನುವ ಅಭಿಪ್ರಾಯ ಮೂಡುತ್ತಿದೆ.

“ನಾನು ಮದುವೆಯಾದ 2 ತಿಂಗಳಲ್ಲಿ ಚಹಲ್‌ರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದೆ” ಎಂದು ಹೇಳಿದ್ದಾರೆ ಆದರೆ ಯಾವ ವಿಚಾರ ಎಂದು ಸ್ಪಷ್ಟತೆ ನೀಡಿಲ್ಲ.  ಎಲ್ಲರೂ ಅಂದುಕೊಳ್ಳುವಂತೆ ಅದು ಯಾವುದೋ ಅಕ್ರಮ ಸಂಬಂಧ ವಿಚಾರಕ್ಕೆ ಸಂಬಂಧಪಟ್ಟ ಎನ್ನುವ ಮಾಹಿತಿ ಓಡಾಡುತ್ತಿದೆ. ಆದರೆ ಇದು ಎಷ್ಟು ಸರಿ ಎಷ್ಟು ತಪ್ಪು ಎಂಬುದು ಇನ್ನು ನಿಗೂಢವೇ ಸರಿ. ಆದರೂ ಈ ಸ್ಟಾರ್ ಜೋಡಿ, ಬೇರೆ ಬೇರೆಯಾಗಿದ್ದು ಕ್ರಿಕೆಟ್ ಅಭಿಮಾನಿಗಳ ಮತ್ತು ಚಹಲ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ.