Skip to main content
ವಿಡಿಯೋ
1/2
general

ಅಕ್ಟೋಬರ್ 1ರಿಂದ ಚಿನ್ನ ಸಾಲದಲ್ಲಿ ಬಹುಮುಖ ಬದಲಾವಣೆಗಳು: RBI ಯ ಹೊಸ ನಿಯಮಗಳು

By Vinutha U
ಅಕ್ಟೋಬರ್ 1ರಿಂದ ಚಿನ್ನ ಸಾಲದಲ್ಲಿ ಬಹುಮುಖ ಬದಲಾವಣೆಗಳು: RBI ಯ ಹೊಸ ನಿಯಮಗಳು

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಲವು ಹಣಕಾಸು ಕ್ರಮಗಳು ಮತ್ತು ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ. ಇವು ಜನಸಾಮಾನ್ಯರಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆಗಳವರೆಗೆ ಪರಿಣಾಮ ಬೀರಲಿವೆ. ಚಿನ್ನದ ಅಡಮಾನ ಸಾಲ, ಚಿನ್ನವನ್ನೇ ಸಾಲವಾಗಿ ನೀಡುವ ಕ್ರಮ ಸೇರಿದಂತೆ ಕೆಲವು ಬದಲಾವಣೆಗಳ ಪಟ್ಟಿ ಇಲ್ಲಿದೆ:

ಅಕ್ಟೋಬರ್‌ನಲ್ಲಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಕೆಲವು ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಚೆಕ್ ಕ್ಲಿಯರಿಂಗ್ ವ್ಯವಸ್ಥೆಯನ್ನು ವೇಗವಾಗಿಸಲಾಗುತ್ತಿದೆ, ಬ್ಯಾಂಕ್ ಬಡ್ಡಿದರದಲ್ಲಿ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ, ಮತ್ತು ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ವ್ಯವಸ್ಥೆಯ ದುರ್ಬಳಕೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಲವು ಹಣಕಾಸು ಕ್ರಮಗಳು ಮತ್ತು ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ. ಇವು ಜನಸಾಮಾನ್ಯರಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆಗಳವರೆಗೆ ಪರಿಣಾಮ ಬೀರಲಿವೆ. ಚಿನ್ನದ ಅಡಮಾನ ಸಾಲ, ಚಿನ್ನವನ್ನೇ ಸಾಲವಾಗಿ ನೀಡುವ ಕ್ರಮ ಸೇರಿದಂತೆ ಕೆಲವು ಬದಲಾವಣೆಗಳ ಪಟ್ಟಿ ಇಲ್ಲಿದೆ:


ಫ್ಲೋಟಿಂಗ್ ರೇಟ್ ಸಾಲಗಳಲ್ಲಿ ಮೂರು ವರ್ಷದವರೆಗೆ ಬಡ್ಡಿದರ ಬದಲಾವಣೆಗೆ ಅವಕಾಶವಿರಲಿಲ್ಲ. ಆದರೆ, ಆರ್‌ಬಿಐ ಈಗ ಈ ನಿಯಮವನ್ನು ಸಡಿಲಗೊಳಿಸಿದೆ. ಬ್ಯಾಂಕ್‌ಗಳು ಮೂರು ವರ್ಷಕ್ಕಿಂತ ಮುಂಚೆಯೇ ಫ್ಲೋಟಿಂಗ್ ರೇಟ್ ನಿರ್ಧರಿಸಲು ಸ್ವತಂತ್ರವಾಗಿರುತ್ತವೆ. ಜೊತೆಗೆ, ಗ್ರಾಹಕರು ಫಿಕ್ಸೆಡ್ ಬಡ್ಡಿದರದಿಂದ ಫ್ಲೋಟಿಂಗ್ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳುವ ಅವಕಾಶವನ್ನು ಆರ್‌ಬಿಐ ಒದಗಿಸಿದೆ.
JM LOOKS Slingback Heels for Women Pointed Toe Stiletto High Heels Stretch Slip on Backless Fashion Comfortable Dress Pumps Shoes


ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು ಆಭರಣ ವ್ಯಾಪಾರಿಗಳಿಗೆ ಸಾಲ ನೀಡುವ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ. ಅಕ್ಟೋಬರ್ 4ರಿಂದ ಚೆಕ್ ಕ್ಲಿಯರಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಜಾರಿಗೆ ಬರಲಿದೆ. ಸದ್ಯ, ಬ್ಯಾಚ್ ಆಧಾರದ ಮೇಲೆ ಚೆಕ್ ಕ್ಲಿಯರೆನ್ಸ್ ಆಗುತ್ತದೆ, ಇದರಿಂದ ಹಣವು ಖಾತೆಗೆ ಜಮಾ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೊಸ ನಿಯಮದಡಿ, ನಿರಂತರ ಚೆಕ್ ಕ್ಲಿಯರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ, ಇದರಿಂದ ಚೆಕ್‌ಗಳು ತ್ವರಿತವಾಗಿ ಕ್ಲಿಯರ್ ಆಗಲಿವೆ.


ಒಡವೆ ವ್ಯಾಪಾರಿಗಳಿಗೆ ಬ್ಯಾಂಕ್‌ಗಳು ಚಿನ್ನವನ್ನೇ ಸಾಲವಾಗಿ ನೀಡುತ್ತವೆ. ಈ ಸಾಲವನ್ನು ಮರುಪಾವತಿ ಮಾಡಲು ಈಗಿನ 180 ದಿನಗಳ ಕಾಲಾವಕಾಶವನ್ನು ಆರ್‌ಬಿಐ 270 ದಿನಗಳಿಗೆ ವಿಸ್ತರಿಸಿದೆ. ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ನವೀಕರಿಸಲು ವಾರದ ಕ್ರೆಡಿಟ್ ಇನ್ಫಾರ್ಮೇಶನ್ ರಿಪೋರ್ಟಿಂಗ್ ವ್ಯವಸ್ಥೆಯನ್ನು ಆರ್‌ಬಿಐ ಜಾರಿಗೆ ತರಲಿದೆ. ಇದರಿಂದ ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಹೆಚ್ಚು ನಿಖರವಾಗಿರುತ್ತದೆ.
ಬೆಂಗಳೂರು: ಮಹಿಳೆಯ ಖಾಸಗಿ ವೀಡಿಯೊದಿಂದ ಬ್ಲಾಕ್‌ಮೇಲ್‌ ಮಾಡಿದ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು…!!


ಆನ್‌ಲೈನ್ ರೈಲ್ವೆ ಟಿಕೆಟ್ ಬುಕಿಂಗ್‌ಗೆ ಆಧಾರ್ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಏಜೆಂಟ್‌ಗಳು ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ದುರ್ಬಳಕೆ ಮಾಡದಂತೆ ತಡೆಯಲು ಐಆರ್‌ಸಿಟಿಸಿ ಈ ಕ್ರಮ ಕೈಗೊಂಡಿದೆ.