ಮನಿಲಾ: ನಿನ್ನೆ ಫಿಲಿಪಿನ್ಸ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಎಂದರೆ 31 ಜನರು ಸಾವನ್ನಪ್ಪಿದ್ದಾರೆ. ಭೂಕಂಪದ ತೀವ್ರತೆಗೆ ಹಲವಾರು ಮನೆ ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ.
ತೀವ್ರ ಭೂಕಂಪದಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ಕಡಿತಗೊಂಡು ನಿವಾಸಿಗಳು ರಾತ್ರಿ ಪೂರಾ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ.ಇದನ್ನೂ ಓದಿ: ಬಿಹಾರ ಚುನಾವಣೆ: ಒಟ್ಟು ಮತದಾರರ ಸಂಖ್ಯೆಯಲ್ಲಿ 6% ಕಡಿತ ಒಟ್ಟು ಡಿಲೀಟ್ ಎಷ್ಟು?: SIR ನಿಂದ ಕ್ರಮ: ಮಾಹಿತಿ ಇಲ್ಲಿದೆ
ಐದು ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಸೆಬು ಪ್ರಾಂತ್ಯದಲ್ಲಿ ಸುಮಾರು 90,000 ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ನಗರವಾದ ಬೊಗೊದಿಂದ ಸುಮಾರು 19 ಕಿಲೋಮೀಟರ್ ಈಶಾನ್ಯಕ್ಕೆ ಇದರ ಪರಿಣಾಮ ತಟ್ಟಿದೆ.
ಬೊಗೊ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುಮಾರು 14 ನಿವಾಸಿಗಳು ಸಾವನ್ನಪ್ಪಿದ್ದಾರೆ. ಭೂಕುಸಿತದಿಂದಾಗಿ ಅನೇಕರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಗತಿಯ ಹಂತದಲ್ಲಿದೆ. ಮಾಹಿತಿಗಳ ಪ್ರಕಾರ ಬೊಗೊದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ದಸರಾ ಬಳಿಕ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ...ಗೈರು ಹಾಜರಾದ್ರೆ ಕಠಿಣ ಕ್ರಮ!
ಭೂಕಂಪದ ತೀವ್ರತೆಗೆ ಸುತ್ತಮುತ್ತಲಿನ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗಿದ್ದು, ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಗೊ ಬಳಿಯ ಮೆಡೆಲಿನ್ ಪಟ್ಟಣದಲ್ಲಿ ಮನೆಗಳ ಛಾವಣಿಗಳು ಮತ್ತು ಗೋಡೆಗಳು ಬಿದ್ದು 12 ಸಾವನ್ನಪ್ಪಿದ್ದಾರೆ. ಕೆಲವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.MANOHARI Women's Trendy Banarasi Woven Saree with Heavy Jacquard Work, Elegant Design, Silk Saree with Maching Lace Border Unstitched Blouse Piece for Weddings & Festive Occasions