ಅಲಹಾಬಾದ್ ಹೈಕೋರ್ಟ್ ತೀರ್ಪಿನ ಪ್ರಕಾರ, ವಿವಾಹ ಜಾಲತಾಣ ಶಾದಿ ಡಾಟ್ ಕಾಮ್ ಬಳಕೆದಾರರ ಕೃತ್ಯಗಳಿಗೆ ಜವಾಬ್ದಾರನಲ್ಲ ಎಂದು ಸ್ಪಷ್ಟಪಡಿಸಿದೆ [ಅನುಪಮ್ ಮಿತ್ತಲ್ ಮತ್ತು ತೆಲಂಗಾಣ, ಉತ್ತರ ಪ್ರದೇಶ ಸರ್ಕಾರಗಳ ನಡುವಣ ಪ್ರಕರಣ].
ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯಡಿ ಶಾದಿ ಡಾಟ್ ಕಾಮ್ ಕೇವಲ ಮಧ್ಯಸ್ಥ ವೇದಿಕೆಯಾಗಿದ್ದು, ಇದಕ್ಕೆ ಜವಾಬ್ದಾರಿಯಿಂದ ವಿನಾಯಿತಿ ಇದೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಮದನ್ ಪಾಲ್ ಸಿಂಗ್ ಅವರ ವಿಭಾಗೀಯ ಪೀಠ ತಿಳಿಸಿದೆ. 2022ರಲ್ಲಿ, ಶಾದಿ ಡಾಟ್ ಕಾಮ್ ಬಳಕೆದಾರರ ವಿವರಗಳನ್ನು ಸರಿಯಾಗಿ ಪರಿಶೀಲಿಸದಿರುವುದರಿಂದ ಜಾಲತಾಣವು ಅಶ್ಲೀಲತೆಯ ಪ್ರಚಾರಕ್ಕೆ ಬಳಕೆಯಾಗುತ್ತಿದೆ ಎಂದು ಆರೋಪಿಸಿ, ಅನುಪಮ್ ಮಿತ್ತಲ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಐಟಿ ಕಾಯಿದೆಯ ಸೆಕ್ಷನ್ 67ರ ಅಡಿ ದೂರು ದಾಖಲಾಗಿತ್ತು. ದಸರಾ ಬಳಿಕ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ...ಗೈರು ಹಾಜರಾದ್ರೆ ಕಠಿಣ ಕ್ರಮ!
ಒಬ್ಬ ಮಹಿಳೆಯ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ, ಬೆದರಿಕೆ ಒಡ್ಡಿ ಸುಲಿಗೆಗೆ ಯತ್ನಿಸಲಾಗಿದೆ ಎಂದು ಆಕೆ ದೂರಿದ್ದರು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿತ್ತಲ್ ಮತ್ತು ಜಾಲತಾಣದ ಗ್ರಾಹಕ ಸೇವಾ ಕೇಂದ್ರ ತಮ್ಮ ದೂರಿಗೆ ಸ್ಪಂದಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದರು. JM LOOKS Slingback Heels for Women Pointed Toe Stiletto High Heels Stretch Slip on Backless Fashion Comfortable Dress Pumps Shoes
ಸೆಪ್ಟೆಂಬರ್ 23ರಂದು ನೀಡಿದ ತೀರ್ಪಿನಲ್ಲಿ, ಬಳಕೆದಾರರ ವಿವರಗಳ ಪರಿಶೀಲನೆಗೆ ಸಂಬಂಧಿಸಿದಂತೆ ಮಧ್ಯಸ್ಥ ವೇದಿಕೆಯಾದ ಶಾದಿ ಡಾಟ್ ಕಾಮ್ ಜವಾಬ್ದಾರನಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. "ದೂರುಗಳು ಬಂದ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಐಟಿ ಕಾಯಿದೆಯ ಸೆಕ್ಷನ್ 79 (1) ಮತ್ತು (2) ಅಡಿ ಜಾಲತಾಣವನ್ನು ನಡೆಸುತ್ತಿರುವ ಕಂಪನಿಯು ರಕ್ಷಣೆ ಪಡೆದಿದ್ದು, ಯಾವುದೇ ಕುಮ್ಮಕ್ಕು ನೀಡಿಲ್ಲ" ಎಂದು ನ್ಯಾಯಾಲಯ ತಿಳಿಸಿದೆ.