Skip to main content
ವಿಡಿಯೋ
1/2
crime

ಹಾಸನದಲ್ಲಿ ನಿಗೂಢ ಸ್ಫೋಟ ದಂಪತಿ ಸಾವು: 14 ತಿಂಗಳ ಮಗು ಅನಾಥ..!!

By Pavitra Ganapathi Baradavalli
ಹಾಸನದಲ್ಲಿ ನಿಗೂಢ ಸ್ಫೋಟ ದಂಪತಿ ಸಾವು: 14 ತಿಂಗಳ ಮಗು ಅನಾಥ..!!

 ಎರೆಡು ದಿನಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಅನುಮಾಸ್ಪದ ರೀತಿಯಲ್ಲಿ ಎರೆಡು ಸಿಲಿಂಡರ್‌ಗಳು ಸ್ಫೋಟಗೊಂಡು ದಂಪತಿಗಳಿಬ್ಬರು ಗಾಯಗೊಂಡಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಹಳೇ ಆಲೂರು ಪಟ್ಟಣದಲ್ಲಿ ನಿಗೂಢ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದರು.

ಹಾಸನ: ಎರೆಡು ದಿನಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಅನುಮಾಸ್ಪದ ರೀತಿಯಲ್ಲಿ ಎರೆಡು ಸಿಲಿಂಡರ್‌ಗಳು ಸ್ಫೋಟಗೊಂಡು ದಂಪತಿಗಳಿಬ್ಬರು ಗಾಯಗೊಂಡಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈ ಘಟನೆ ಹಾಸನ ಜಿಲ್ಲೆಯ ಹಳೇ ಆಲೂರು ಪಟ್ಟಣದಲ್ಲಿ ನಿಗೂಢ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದರು.
ಇದನ್ನೂ ಓದಿ: ಆರ್‌ಬಿಐ ರೆಪೋ ದರ 5.5% ಸ್ಥಿರ, ಹಣದುಬ್ಬರ 2.6%, ಜಿಡಿಪಿ 6.8%...ಆರ್ಥಿಕ ಸ್ಥಿರತೆಗೆ ಸೂಚನೆ!


32 ವರ್ಷದ ಸುದರ್ಶನ್, 27 ವರ್ಷದ ಕಾವ್ಯ  ದಂಪತಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ಹಿಮ್ಸ್ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ರಾತ್ರಿಯೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಝೀರೋ ಟ್ರಾಫಿಕ್ನಲ್ಲಿ ರವಾನೆ ಮಾಡಲಾಗಿತ್ತು.ಇದನ್ನೂ ಓದಿ:ಅಮೆರಿಕಾ ಟ್ರಂಪ್‌ ಸರ್ಕಾರ ಶಟ್‌ಡೌನ್‌ - ಸರ್ಕಾರಿ ಸೇವೆಗಳು ಸ್ಥಗಿತ, ಕ್ರೈಸಿಸ್‌ನಿಂದ ಜನಜೀವನಕ್ಕೆ ಹೊಡೆತ.!

ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ದಂಪತಿಗೆ ಒಂದು 14 ತಿಂಗಳ ಮಗು ಇತ್ತು ಈಗ ಅದು ಅನಾಥವಾಗಿದೆ.ಈ ಮಧ್ಯೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ರಾತ್ರಿ 8:30 ಸಮಯದಲ್ಲಿ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಮನೆಯಲ್ಲಿದ್ದ ಎರಡು ಸಿಲಿಂಡರ್ಸ್ಫೋಟಗೊಂಡಿತ್ತು.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?


ಜೊತೆಗೆ ಮನೆಯಲ್ಲಿ ಗೀಸರ್ಸಹ ಇತ್ತು ಇದರಿಂದ ಸ್ಫೋಟ ಸಂಭವಿಸಿರಬಹುದಾ ಎಂಬುದನ್ನು ಶಂಕಿಸಲಾಗಿತ್ತು. ಆದರೆ ಸಿಡಿಮದ್ದು ತಯಾರಿಕೆ ಮಾಡುತ್ತಿದ್ದ ಮದ್ದು ಸ್ಫೋಟಗೊಂಡು ದುರಂತ ನಡೆದಿರುವುದು ಗೊತ್ತಾಗಿದೆ.

ಮನೆಯಲ್ಲಿ ಸಿಡಿಮದ್ದನ್ನು ತಯಾರಿಸುತ್ತಿದ್ದರು. ಅದಕ್ಕಾಗಿ ಮದ್ದನ್ನು ಸಂಗ್ರಹಿಸಿದ್ದರು. ಆಕಸ್ಮಿಕವಾಗಿ ಬೆಂಕಿ ತಗುಲಿ ಸ್ಫೋಟಗೊಂಡಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.SGF11 Women's Kanjivaram Pure Soft Silk Saree With Unstitched Blouse Piece