Skip to main content
ವಿಡಿಯೋ
1/2
local

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ನಟೋರಿಯಸ್‌ ಸರಗಳ್ಳನ ಬಂಧನ…!!

By Pavitra Ganapathi Baradavalli
ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ನಟೋರಿಯಸ್‌ ಸರಗಳ್ಳನ ಬಂಧನ…!!

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಸರಗಳ್ಳನ ಬಂಧನವಾಗಿದೆ. ಇಷ್ಟು ದಿನ ಬೆಂಗಳೂರಿನಲ್ಲಿ ಭಯಾನಕ ರೀತಿಯಲ್ಲಿ ಮಹಿಳೆಯರು ಹಾಕಿಕೊಂಡಿರುವಂಥ ಚಿನ್ನದ ಸರಗಳನ್ನು ಎಗರಿಸಿಕೊಂಡು ಮಾಯವಾಗುತ್ತಿದ್ದ ಕೆಂಗೇರಿ ಮೂಲದ ಪ್ರವೀಣ್‌ ಎಂಬ ಸರಗಳ್ಳನನ್ನು ಈಗ ಗಿರಿನಗರ ಪೊಲೀಸರು ಬಂಧಸಿದ್ದಾರೆ.

ಬೆಂಗಳೂರು: ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಸರಗಳ್ಳನ ಬಂಧನವಾಗಿದೆ. ಇಷ್ಟು ದಿನ ಬೆಂಗಳೂರಿನಲ್ಲಿ ಭಯಾನಕ ರೀತಿಯಲ್ಲಿ ಮಹಿಳೆಯರು ಹಾಕಿಕೊಂಡಿರುವಂಥ ಚಿನ್ನದ ಸರಗಳನ್ನು ಎಗರಿಸಿಕೊಂಡು ಮಾಯವಾಗುತ್ತಿದ್ದ ಕೆಂಗೇರಿ ಮೂಲದ ಪ್ರವೀಣ್‌ ಎಂಬ ಸರಗಳ್ಳನನ್ನು ಈಗ ಗಿರಿನಗರ ಪೊಲೀಸರು ಬಂಧಸಿದ್ದಾರೆ. ಸೆಪ್ಟೆಂಬರ್‌ 13 ರ ರಾತ್ರಿ ಐದು ಕಡೆ ಸರಗಳ್ಳತನವನ್ನು ಮಾಡಿದ್ದರು ಈ ಖದೀಮರು.ಇದನ್ನೂ ಓದಿ: ಆರ್‌ಎಸ್‌ಎಸ್ ಶತಮಾನೋತ್ಸವ ನಾಣ್ಯ ಬಿಡುಗಡೆ: ಸ್ಟಾಲಿನ್ ಖಂಡನೆ; ಭಾರತವನ್ನು ಈ ದಯನೀಯ ಸ್ಥಿತಿಯಿಂದ ರಕ್ಷಿಸಬೇಕು


ಗಿರಿನಗರ, ಹನುಮಂತ ನಗರ ಕೋಣನಕುಂಟೆಯಲ್ಲಿ ಮಹಿಳೆಯರ ಕುತ್ತಿಗೆಗೆ ಲಾಂಗ್‌ ಇಟ್ಟು ಸರಗಳ್ಳತನ ಮಾಡ್ತಿದ್ರು. ಈಗ ಸರಗಳ್ಳರ ಗ್ಯಾಂಗ್‌ನಲ್ಲಿ ಪ್ರವೀಣ್‌ ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಯೋಗಾನಂದ ಎಸ್ಕೇಪ್‌ ಆಗಿದ್ದಾನೆ. ಇವರಿಬ್ಬರ ಪರಿಚಯ ಸೆಂಟ್ರಲ್‌ ಜೈಲಿನಲ್ಲಿ ಆಗಿತ್ತು ಎನ್ನುವ ವಿಷಯ ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನ ಮೂಲಸೌಕರ್ಯ ವಿವಾದ: ನಾರಾ ಲೋಕೇಶ್-ಪ್ರಿಯಾಂಕ್ ಖರ್ಗೆ ಟ್ವೀಟ್ ಯುದ್ಧ!


ಜೈಲಿನಿಂದ ಬಿಡುಗಡೆಯಾದ ಬಳಿಕವೂ ಈ ಪ್ರವೀಣ್‌ ಯೋಗಾನಂದ್‌ ಇಬ್ಬರೂ ಸೇರಿ ಸರಗಳ್ಳತನವನ್ನು ಪುನಃ ಮುಂದುವರೆಸಿದ್ದರು. ಸದ್ಯ ರಾಮನಗರ ಮೂಲದ ಯೋಗಾನಂದ್‌ಗಾಗಿ ಹುಡುಕಾಟವನ್ನು ಪೊಲೀಸರು ಮುಂದುವರೆಸಿದ್ದಾರೆ. ಇಬ್ಬರು ಕಳ್ಳರು ಎಷ್ಟು ಖತರ್ನಾಕ್‌ ಇದ್ರು ಎಂದರೆ ಒಬ್ಬಂಟಿ ಮಹಿಳೆ ಯಾರಾದರೂ ರೋಡ್‌ನಲ್ಲಿ ಓಡಾಟ ನಡೆಸ್ತಾ ಇರೋರು ಸಿಕ್ಕಿದ್ರೆ ಸಾಕು ಅಂತವರ ಕುತ್ತಿಗೆಗೆ ಲಾಂಗ್‌ ಇಟ್ಟು ಹೆದರಿಸಿ ಅವರಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಈಗ ಆ ಇಬ್ಬರಲ್ಲಿ ಪ್ರವೀಣ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
SWORNOF Women's Patola Silk Saree With Unstitched Boluse Piece