ಧರ್ಮಸ್ಥಳದ ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಹರಿಬಿಟ್ಟಿದ್ದ ಯ್ಯೂಟ್ಯೂಬರ್‌ಗಳಿಗೆ ಸಂಕಷ್ಟ ಇನ್ನೂ ಮುಗಿಯುವ ತರಹ ಕಾಣುತ್ತಿಲ್ಲ. ಈಗ ಸದ್ಯಕ್ಕೆ ವೀಡಿಯೋ ಮಾಡಿ ಎಲ್ಲೆಡೆ ಹರಿಬಿಟ್ಟಿದ್ದ ಯ್ಯೂಟ್ಯೂಬರ್‌ಗಳಿಗೆ ಎಸ್‌ಐಟಿ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ.ಇದನ್ನೂ ಓದಿ: ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ನಟೋರಿಯಸ್ ಸರಗಳ್ಳನ ಬಂಧನ…!!
ಯ್ಯೂಟ್ಯೂಬರ್ ಸಮೀರ್ ಸೇರಿ 5ಕ್ಕೂ ಹೆಚ್ಚು ಯ್ಯೂಟ್ಯೂಬರ್‌ಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಜೊತೆಗೆ ಎಲ್ಲಾ ಯ್ಯೂಟ್ಯೂಬರ್‌ಗಳು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಯ್ಯೂಟ್ಯೂಬರ್‌ಗಳಿಗೆ ಪ್ರಶ್ನಾವಳಿಗಳೊಂದಿಗೆ ಎಲ್ಲಾ ಸಿದ್ಧತೆಯನ್ನು ಎಸೈಟಿ ಅಧಿಕಾರಿಗಳು ಈಗಾಗಲೇ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯರಿಗೆ ಐದು ವರ್ಷ ಸಿಎಂ ಸ್ಥಾನ: ಪರಮೇಶ್ವರರ ಭರವಸೆ..!
ಮಾಸ್ಕ್ ಮ್ಯಾನ್ ಚಿನ್ನಯ್ಯ ಕೊಟ್ಟಿರುವ ಹೇಳಿಕೆಯನ್ನ ಆಧರಿಸಿ ಈಗ ಎಸ್‌ಐಟಿ ತನಿಖೆಯನ್ನು ನಡೆಸ್ತಾ ಇದೆ. ಯ್ಯೂಟ್ಯೂಬರ್ ಸಮೀರ್ ಸೇರಿ ಹಾಸನದ ಮೂಲದ ಅಭಿಷೇಕ್ ಎಂಬುವವರಿಗೂ ಎಸ್‌ಐಟಿ ನೋಟೀಸ್ ಅನ್ನೂ ಜಾರಿ ಮಾಡಿದೆ. ಈ ಯ್ಯೂಟ್ಯೂಬರ್‌ಗಳು ಕೆಲವು ಕಪೋಲ ಕಲ್ಪಿತ ವಿಷಯದ ಆಧಾರವಾಗಿ ಕೆಲವು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಯ್ಯೂಟ್ಯೂಬ್ ಖಾತೆಗಳಲ್ಲಿ ಕೆಲವು ವೀಡಿಯೋಗಳನ್ನು ಹಾಕಿಕೊಂಡಿದ್ದರು ಅವರ ಆಧಾರವಾಗಿ ಈಗ ಈ ಎಲ್ಲಾ ಐದು ಜನ ಯ್ಯೂಟ್ಯೂಬರ್‌ಗಳನ್ನು ವಿಚಾರಣೆಗೆ ಎಸ್‌ಐಟಿ ಅಧಿಕಾರಿಗಳು ಕರೆದಿದ್ದಾರೆ.SWORNOF Women's Patola Silk Saree With Unstitched Boluse Piece