ಕೋಲಾರ, ಅಕ್ಟೋಬರ್ 3: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದ್ದು, ರೋಗಿಗಳ ಜೀವದೊಡನೆ ಆಟವಾಡುತ್ತಿರುವ ಘಟನೆಗಳು ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಿಗಲ್ಲೂರು ಗ್ರಾಮದಲ್ಲಿ ನಡೆದ ದುರ್ಘಟನೆಯೊಂದರಲ್ಲಿ 8 ವರ್ಷದ ಬಾಲಕಿಯೊಬ್ಬಳು ನಕಲಿ ವೈದ್ಯರು ನೀಡಿದ ಇಂಜೆಕ್ಷನ್ನಿಂದ ಸಾವನ್ನಪ್ಪಿದ್ದಾಳೆ. ಈ ಘಟನೆಗೆ ಸಂಬಂಧಿಸಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಿಗಲ್ಲೂರು ಗ್ರಾಮದ 8 ವರ್ಷದ ಬಾಲಕಿಯೊಬ್ಬಳು ತೀವ್ರ ಜ್ವರದಿಂದ ಬಳಲುತ್ತಿರುವಾಗ, ಪೋಷಕರು ಆಕೆಯನ್ನು ಸಂತೆಹಳ್ಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಕ್ಲಿನಿಕ್ನಲ್ಲಿ ಬಾಲಕಿಗೆ ನೀಡಲಾದ ಇಂಜೆಕ್ಷನ್ನಿಂದ ಆಕೆ ತೀವ್ರ ಅಸ್ವಸ್ಥಳಾದಳು. ತಕ್ಷಣವೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು. ಚಿಕಿತ್ಸೆ ನೀಡಿದವರು ಯಾವುದೇ ರೀತಿಯ ವೈದ್ಯಕೀಯ ಪದವಿಯಿಲ್ಲದ ನಕಲಿ ವೈದ್ಯರಾಗಿದ್ದರು ಎಂದು ತಿಳಿದು ಕೋಪಗೊಂಡಿದ್ದಾರೆ, ತಪ್ಪಾದ ಇಂಜೆಕ್ಷನ್ನಿಂದಲೇ ಬಾಲಕಿಯ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪೋಷಕರ ಒತ್ತಾಯ.. ಕೋಲಾರ ಜಿಲ್ಲೆಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ತಹಶೀಲ್ದಾರರು ಮೂರು ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ, ಸೂಕ್ತ ದಾಖಲೆಗಳಿಲ್ಲದ ಕಾರಣ ಅವುಗಳನ್ನು ಮುಚ್ಚಿದ್ದರು. ಬೆಂಗಳೂರಿನ ಕೋರಮಂಗಲದಲ್ಲಿ ಆಯುರ್ವೇದ ಪದವಿ ಪಡೆದಿದ್ದ ವೈದ್ಯರೊಬ್ಬರು ಕಳೆದ 10 ವರ್ಷಗಳಿಂದ ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಘಟನೆಯೂ ಬೆಳಕಿಗೆ ಬಂದಿತ್ತು. ಇದೇ ರೀತಿ, ಚರ್ಮ ಶಾಸ್ತ್ರದ ಬಗ್ಗೆ ಯಾವುದೇ ತರಬೇತಿ ಇಲ್ಲದವರು ಬ್ಯೂಟಿ ಟ್ರೀಟ್ಮೆಂಟ್ ನೀಡುತ್ತಿದ್ದರು. ಇಸಿಎಂಎಸ್ ಯೋಜನೆಯಿಂದ 1.41 ಲಕ್ಷ ಉದ್ಯೋಗ ನಿರೀಕ್ಷೆ, 10 ಲಕ್ಷ ಕೋಟಿ ಉತ್ಪಾದನೆ ಗುರಿ
ಬೆಂಗಳೂರು, ಕಲಬುರಗಿ, ಬೆಳಗಾವಿ ಸೇರಿದಂತೆ ರಾಜ್ಯದಾದ್ಯಂತ 100ಕ್ಕೂ ಹೆಚ್ಚು ನಕಲಿ ವೈದ್ಯರ ಹೆಸರುಗಳು ಬಯಲಿಗೆ ಬಂದಿದ್ದವು. ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ದಂಡ ವಿಧಿಸಲಾಗಿತ್ತು ಹಾಗೂ ಕೆಲವು ಕ್ಲಿನಿಕ್ಗಳಿಗೆ ಬೀಗ ಹಾಕಲಾಗಿತ್ತು. ನಕಲಿ ವೈದ್ಯರ ಈ ಕೃತ್ಯಗಳಿಂದ ಜನರ ಜೀವಕ್ಕೆ ಉಂಟಾಗಿರುವ ಅಪಾಯವು ಗಂಭೀರ ಸಮಸ್ಯೆಯಾಗಿದ್ದು, ಇಂತಹ ಘಟನೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳ ಅಗತ್ಯವಿದೆ.