Skip to main content
ವಿಡಿಯೋ
1/2
globalnews

ಸರ್‌ ಕ್ರೀಕ್‌ ವಿವಾದ ಹಿನ್ನಲೆ - ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದೇನು?

By Shravanthi R
ಸರ್‌ ಕ್ರೀಕ್‌ ವಿವಾದ ಹಿನ್ನಲೆ - ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದೇನು?

ಆಪರೇಷನ್‌ ಸಿಂಧೂರಲ್ಲಿ ಭಾರತೀಯ ಸೇನೆಯನ್ನ ಶ್ಲಾಘಿಸಿ, ಪಾಕ್‌ ಸೇನೆಯ ಒಳನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಹೇಳಿದ ರಕ್ಷಣಾ ಸಚಿವರು, ಪಾಕ್‌ನ ಯಾವುದೇ ದುಸ್ಸಾಹಸವನ್ನು ಭಾರತ ತಾಳುವುದಿಲ್ಲ ಎಂದು ಎಚ್ಚರಿಸಿದರಲ್ಲದೇ, ಸರ್‌ ಕ್ರೀಕ್‌ ಪ್ರದೇಶದ ವಿವಾದ ಬಗ್ಗೆ ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.

ವಿಜಯದಶಮಿಯಂದು ಭಾರತ ರಕ್ಷಣಾ ಸಚಿವರು, ಪಾಕಿಸ್ತಾನಕ್ಕೆ ಎಚ್ಚರಿಕೆ ಸೂಚಿಸಿದ್ದಾರೆ. ಗುಜರಾತ್‌ನ ಭುಜ್‌ ವಲಯದಲ್ಲಿ ದಸರಾ ಪ್ರಯುಕ್ತ ಶಸ್ತ್ರ ಪೂಜೆ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ತಮ್ಮ ಫೈನಲ್‌ ವಾರ್ನಿಂಗ್‌ ನೀಡಿದ್ದಾರೆ ಎನ್ನಲಾಗಿದೆ. ಸರ್‌ ಕ್ರೀಕ್‌ ಪ್ರದೇಶದಲ್ಲಿ ಪಾಕ್‌ ಸೇನೆ ಹುಟ್ಟುಹಾಕಿರುವ ವಿವಾದಕ್ಕೆ ಪ್ರತಿಯಾಗಿ ಕೇಂದ್ರ ಸಚಿವರು ಮಾತಿನ ತಿರುಗೇಟು ನೀಡಿದ್ದಾರೆ ಎಂದು ವರದಿಯಾಗಿದೆ. 

ಪಾಕಿಸ್ತಾನವು ಭಾರತೀಯ ಸೇನೆಯೊಟ್ಟಿಗೆ ನಡೆಸಿರುವ ಉದ್ವಿಗ್ನತೆ ಕುರಿತು ಅವರ ಪ್ರಸ್ತಾಪಿಸಿ ಮಾತನಾಡುವ ವೇಳೆ ಸರ್‌ ಕ್ರೀಕ್‌ ಪ್ರದೇಶವನ್ನು ಸ್ಮರಿಸಿದರು. ಪಾಕ್‌ ಮೇಲೆ ನಡೆಸಿದ ಆಪರೇಷನ್‌ ಸಿಂಧೂರದ ಕಾರ್ಯಾಚರಣೆಯ ಎಲ್ಲಾ ಉದ್ದೇಶಗಳನ್ನು ಪೂರೈಸಿದೆ. ಭಾರತೀಯ ಸೇನೆಯು ಪಾಕ್‌ ಒಟ್ಟಿಗೆ ಪರಿಸ್ಥಿತಿ ಉಲ್ಬಣಗೊಳಿಸುವ ಉದ್ದೇಶವಿರಲಿಲ್ಲ ಎಂದವರು ನುಡಿದಿದ್ದಾರೆ. 

ಆಪರೇಷನ್‌ ಸಿಂಧೂರದ ವೇಳೆ ಪಾಕ್‌ ಸೇನೆಯು ಲೇಹ್‌ನಿಂದ ಸರ್‌ ಕ್ರೀಕ್‌ವರೆಗೂ ಒಳನುಸುಳಲು ಯತ್ನ ನಡೆಸಿ ವಿಫಲಗೊಂಡಿತು. ಇದೇ ವೇಳೆ ಭಾರತವು ತನ್ನ ಸಂಯಮ ಪ್ರದರ್ಶಿಸಿತು. ಇದು ಭಾರತದ ಮೂರು ಸೇನೆಗಳು ಜೊತೆಗೂಡಿ ಸವಾಲನ್ನು ಯಶಸ್ವಿಯಾಗಿ ಎದುರಿಸಿದ ಪರಿಯಾಗಿದೆ, ಪ್ರತಿದಾಳಿಯನ್ನು ಇಡಿ ಜಗತ್ತಿನ ಮುಂದೆ ಭಾರತವು ತೋರಿದೆ ಎಂದು ಅವರು ಬಣ್ಣಿಸಿದರು ಎಂದು ವರದಿಯಾಗಿದೆ. 

ಈ ಉದ್ದೇಶವಾಗಿ ಮಾತನಾಡಿದ ಸಿಂಗ್‌, ಯಾವುದೇ ದುಸ್ಸಾಹಸವು ಪಾಕ್‌ ಇತಿಹಾಸ ಮತ್ತು ಭೌಗೋಳಿಕತೆಯನ್ನು ಬದಲಿಸುವಷ್ಟು ಬಲವಾದ ಪ್ರತಿಕ್ರಿಯೆಗೆ ಕಾರಣವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಅವರು ಭಾರತೀಯ ಸೇನೆಯನ್ನು, ಸೈನಿಕರನ್ನು ಹುರಿದುಂಬಿಸಿದ್ದಾರೆ ಎನ್ನಲಾಗಿದೆ. iQOO Z10R 5G (Aquamarine, 8GB RAM, 128GB Storage) | 32MP 4K Selfie Camera | Quad-Curved AMOLED Display | Dimensity 7400 Processor with 750K+ AnTuTu

ಏನಿದು ಸರ್‌ ಕ್ರೀಕ್‌ ( Sir Creek) - 

ಕಾಶ್ಮೀರಾದ ವ್ಯಾಜ್ಯವು ನಮಗೆಲ್ಲಾ ಗೊತ್ತಿರುವುದೇ ಆಗಿದೆ. ಇದು ಕೂಡ ಇತಿಹಾಸದಲ್ಲಿ ದಾಖಲಿರುವ ಒಂದು ವಿವಾದಾತ್ಮಕ ಪ್ರದೇಶವಾಗಿದೆ. ಗಡಿ ವಿವಾದವಾದ ಸರ್‌ ಕ್ರೀಕ್‌ ಗುಜರಾತ್‌ನ ಕಛ್‌ ಭಾಗದಲ್ಲಿದೆ. ಪಶ್ಚಿಮ ತಟದಲ್ಲಿ ಏರ್ಪಟ್ಟಿರುವ ಇದೊಂದು ನೈಸರ್ಗಿಕ ಕೊರಕಲು. ಭೂಮಿಯಲ್ಲಿ ಕಡಲ್ಕೊರೆತದಿಂದ ಸಂದಿಯಂತಿರುವ ಒಂದು ಕೊರಕಲು ಭಾಗವಾಗಿದೆ. ಇದು 1908 ರಿಂದಲೂ ಪಾಕ್‌ಗೆ ಸೇರಬೇಕೆಂದು ಕಿತ್ತಾಟವಿದೆ. ಪಾಕ್‌ ಇಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಲು ಇಂದಿಗೂ ಸಾಧ್ಯವಾಗಿಲ್ಲ. 

96 ಕಿ. ಮೀ ಉದ್ದದ ಪಾಕ್‌ ಮತ್ತು ಗುಜರಾತ್‌ನ ನಡುವಿನ ಈ ಪ್ರದೇಶದಲ್ಲಿ ಗಡಿ ವ್ಯಾಖ್ಯಾನದ ಗೊಂದಲವಿದ್ದು, ತಟಸ್ಥವೆಂದು ಗುರುತಿಸಲಾಗಿರುವ ಈ ಪ್ರದೇಶವನ್ನು ರಣ್‌ ಆಫ್‌ ಕಛ್‌ ಎಂದೂ ಕರೆಯಲಾಗುವುದು. ಅರಬ್ಬೀ ಸಮುದ್ರ ಹಾಗೂ ಪಾಕ್‌ ಸಿಂಧ್‌ ಪ್ರಾಂತ್ಯದ ಮಧ್ಯೆಯಲ್ಲಿ ಕ್ರಮಿಸಿರುವ ಈ ಪ್ರದೇಶವು ಮೀನುಗಾರಿಕೆ, ಅನಿಲ ಹಾಗೂ ತೈಲ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ. ಇದರ ಮೇಲೆ ಪಾಕ್‌ ಕಣ್ಣು ಬಿದ್ದಿರುವುದು ಇನ್ನೂ ಇತ್ಯರ್ಥಗೊಂಡಿಲ್ಲ. ಇದನ್ನೂ ಓದಿ: ಲಡಾಕ್‌ ಪ್ರತಿಭಟನೆ - ಬಂಧನ ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸೋನಮ್‌ ವಾಂಗ್‌ಚುಕ್‌ ಪತ್ನಿ.!