Skip to main content
ವಿಡಿಯೋ
1/3
politics

ಆಪರೇಷನ್ ಸಿಂದೂರ್ ದಾಳಿಯಲ್ಲಿ 4-5 ಪಾಕ್‌ F-16 ಫೈಟರ್ ಜೆಟ್‌ ಧ್ವಂಸ: IAF ಚೀಫ್‌ ಎ.ಪಿ. ಸಿಂಗ್ ಹೇಳಿಕೆ

By Gireesh Vasishta
ಆಪರೇಷನ್ ಸಿಂದೂರ್ ದಾಳಿಯಲ್ಲಿ 4-5 ಪಾಕ್‌ F-16 ಫೈಟರ್ ಜೆಟ್‌ ಧ್ವಂಸ: IAF ಚೀಫ್‌ ಎ.ಪಿ. ಸಿಂಗ್ ಹೇಳಿಕೆ

ಬಹುಶಃ ಅಮೆರಿಕ ನಿರ್ಮಿತ ಎಫ್-16 ಯುದ್ದ ವಿಮಾನಗಳಾಗಿರಬಹುದು ಎಂದು ದೃಢಪಡಿಸಿದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆರಂಭವಾದ ಈ ಕಾರ್ಯಾಚರಣೆಯು, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ, ರಾಡಾರ್‌ಗಳು ಮತ್ತು ಕಮಾಂಡ್ ರಚನೆಗಳನ್ನು ನಾಶಪಡಿಸಿದೆ ಎಂದು ಹೇಳಿದರು.

ನವದೆಹಲಿ, ಅಕ್ಟೋಬರ್ 3, 2025: 93ನೇ ಭಾರತೀಯ ವಾಯುಪಡೆ ದಿನದಂದು, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂದೂರ್‌ನ ಭಾರತದ ನಿಖರ ದಾಳಿಗಳು ಪಾಕಿಸ್ತಾನದ 4-5 ಯುದ್ಧ ವಿಮಾನಗಳನ್ನು ಹೊಡೆದುಹಾಕಿದೆ ಎಂದಿದ್ದಾರೆ.

ಬಹುಶಃ ಅಮೆರಿಕ ನಿರ್ಮಿತ ಎಫ್-16 ಯುದ್ದ ವಿಮಾನಗಳಾಗಿರಬಹುದು ಎಂದು ದೃಢಪಡಿಸಿದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆರಂಭವಾದ ಈ ಕಾರ್ಯಾಚರಣೆಯು, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ, ರಾಡಾರ್‌ಗಳು ಮತ್ತು ಕಮಾಂಡ್ ರಚನೆಗಳನ್ನು ನಾಶಪಡಿಸಿದೆ ಎಂದು ಹೇಳಿದರು.
Levi's Men's Slim Fit Mid Rise 511 Mid-Rise Jeans

ವಿಶೇಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸಿಎಂ ಸಿಂಗ್, ದಾಳಿಯ ವಿನಾಶಕಾರಿ ಪರಿಣಾಮವನ್ನು ವಿವರಿಸಿದರು: "ನಾವು ಅವರ ಹಲವಾರು ವಿಮಾನ ನೆಲೆಗಳು ಮತ್ತು ಅದರ ಬೇಸ್‌ ಮೇಲೆ ದಾಳಿ ಮಾಡಿದೆವು... ನಾಲ್ಕು ಕಡೆ ರಾಡಾರ್‌ಗಳು, ಎರಡು ಕಡೆ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳು, ಎರಡು ಕಡೆ ರನ್‌ವೇಗಳಿಗೆ ಹಾನಿ, ಮೂರು ಹ್ಯಾಂಗರ್‌ಗಳು... ಒಂದು ಸಿ-130 ಶ್ರೇಣಿಯ ವಿಮಾನ ಮತ್ತು ಕನಿಷ್ಠ 4 ರಿಂದ 5 ಯುದ್ಧವಿಮಾನಗಳನ್ನು ನಾಶಪಡಿಸಿದ್ದಾಗಿ ತಿಳಿಸಿದರು.ಇದನ್ನು ಓದಿ: ಭಾರತದ ನಷ್ಟವನ್ನು ಸರಿದೂಗಿಸಲು ರಷ್ಯಾ ಹೆಚ್ಚಿನ ಉತ್ಪನ್ನಗಳ ಆಮದು ಮಾಡಿಕೊಳ್ಳಲಿದೆ: ಪುಟಿನ್

ಜೈಷ್-ಎ-ಮೊಹಮ್ಮದ್‌ನ ಬಹವಲ್‌ಪುರ್ ಪ್ರಧಾನ ಕಚೇರಿ ಮತ್ತು ಲಷ್ಕರ್-ಎ-ತೈಬಾದ ಮುರಿದ್ಕೆ ಬೇಸ್ ಸೇರಿದಂತೆ ಯಾವುದೇ ನಾಗರಿಕ ಹಾನಿಯಿಲ್ಲದೇ ದಾಳಿಗಳು ನಡೆದವು ಎಂದು ಒತ್ತಿ ಹೇಳಿದರು.

ಪ್ರಮುಖ ಸಂಪನ್ಮೂಲಗಳ ಧ್ವಂಸ: ಜಾಕೋಬಾಬಾದ್ ಮತ್ತು ಭೋಲಾರಿ ಬೇಸ್‌ಗಳಲ್ಲಿ 4-5 ಎಫ್-16 ಮತ್ತು ಒಂದು ಜೆಎಫ್-17 ನೆಲದ ಮೇಲೆ ಧ್ವಂಸ; ಒಂದು AWACS ಮತ್ತು ಒಂದು ಸಿ-130 ಸಾರಿಗೆ ವಿಮಾನವು ಹ್ಯಾಂಗರ್‌ಗಳಲ್ಲಿ ಹಾನಿಗೊಳಗಾಯಿತು.

ಒಟ್ಟಾರೆ ಇಂಡಿಯಾ, ಪಾಕಿಸ್ತಾನ ಏಷ್ಯಾ ಕಪ್‌ನ ಕ್ರಿಕೆಟ್ ಮ್ಯಾಚ್ ಸಮಯದಲ್ಲಿ ಪಾಕಿಸ್ತಾನದ ಮೇಲಿನ ದಾಳಿಯ ಕುರಿತು ಸಾಕಷ್ಟು ವಿಡಂಬನಾತ್ಮಕ ಸನ್ನೆಗಳನ್ನು ಪಾಕ್‌ ಕ್ರಿಕೆಟಿಗರು ಮಾಡಿದ್ದರು. ಇದರಿಂದ ಈ ಚರ್ಚೆ ವ್ಯಾಪಕವಾಗಿತ್ತು ಈ ಎಲ್ಲಾ ಚಿತ್ರಣಗಳಿಗೂ ಪೂರ್ಣ ವಿರಾಮ ಹಾಕಿದಂತೆ ಎ.ಪಿ. ಸಿಂಗ್ ಅವರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.