Skip to main content
ವಿಡಿಯೋ
1/2
politics

ಮೂರು ದಿನಗಳಲ್ಲಿ ಮುಕ್ತಾಯವಾಗಲಿದೆಯಾ ಸಮೀಕ್ಷೆ - ಏನ್‌ ಹೇಳ್ತಾರೆ ಸಿಎಂ ಸಿದ್ದರಾಮಯ್ಯ?

By Shravanthi R
ಮೂರು ದಿನಗಳಲ್ಲಿ ಮುಕ್ತಾಯವಾಗಲಿದೆಯಾ ಸಮೀಕ್ಷೆ - ಏನ್‌ ಹೇಳ್ತಾರೆ ಸಿಎಂ ಸಿದ್ದರಾಮಯ್ಯ?

ರಾಜ್ಯದಲ್ಲಿನ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಕ್ರಿಯೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಮೂರು ಕೋಟಿ ಜನರ ಹಾಗೂ 80 ಲಕ್ಷ ಮನೆಗಳ ಡೇಟಾ ಸಂಗ್ರಹಗೊಂಡಿದ್ದು, ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ದಿನಾಂಕ ವಿಸ್ತರಣಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಶುರುವಾಗಿರೋ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಪ್ರಕ್ರಿಯೆ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆ ಕೊನೆಗೊಳ್ಳಲು ಇನ್ನು ಮೂರು ದಿನಗಳು ಬಾಕಿ ಇರುವ ವೇಳೆ ಜಾತಿ ಗಣತಿ ಸಮೀಕ್ಷೆಯು ಪೂರ್ಣಗೊಳ್ಳದಿದ್ದರೆ ಇನ್ನೂ ಅವಧಿಯನ್ನು ವಿಸ್ತರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಮೀಕ್ಷೆಯು ತೃಪ್ತಿ ತಂದಿದ್ದು, ಮೂರು ದಿನಗಳಲ್ಲಿ ಮುಕ್ತಾಯಗೊಳ್ಳದಿದ್ದರೆ ದಿನಾಂಕ ವಿಸ್ತರಿಸಲಾಗುವುದು ಎಂದು ಇಂದು ಮೈಸೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. 

ಈ ವರೆಗೂ ಮೂರು ಕೋಟಿ ಜನರು ಹಾಗೂ 80 ಲಕ್ಷ ಮನೆಗಳ ಸರ್ವೇ ಆಗಿದೆ. ಇದು ಜಾತಿಗಣತಿಯಲ್ಲದೇ ಜನರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿಯಾಗಿದೆ ಎಂದಿದ್ದಾರೆ. ಈ ಮೂಲಕ ರಾಜ್ಯದ ಜನರ ಜೀವನ ಮಟ್ಟ ಹೇಗಿದೆ ಎನ್ನುವ ಮುನ್ನೋಟವನ್ನು ನೀಡಿಲಿದೆ. ಈ ಆಧಾರದ ಮೇಲೆ ಸರ್ಕಾರದ ಯೋಜನೆಗಳನ್ನು ರೂಪಿಸಲು ಅನುಕೂಲಕಾರಿ. ಮೂರು ದಿನಗಳಲ್ಲಿ ಸಮೀಕ್ಷೆ ಮುಗಿಯದಿದ್ದರೆ ದಿನಾಂಕ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. iQOO Z10R 5G (Moonstone, 8GB RAM, 256GB Storage) | 32MP 4K Selfie Camera | Quad-Curved AMOLED Display | Dimensity 7400 Processor with 750K+ AnTuTu

ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ದ ಕಿಡಿ - 

ಇದೇ ವೇಳೆ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರ ಹೇಳಿಕೆ ವಿರುದ್ದ ತಿರುಗುಬಾಣ ಬಿಟ್ಟಂತೆ, ಅವರು ಆರ್‌ಎಸ್‌ಎಸ್‌ನ ಕೈಗೊಂಬೆಯೆಂದು ಟೀಕಿಸಿದ್ದಾರೆ. ಕೇಂದ್ರ ಸರ್ಕಾರದ ಜಿಎಸ್‌ಟಿ ಇಳಿಕೆ ಕುರಿತು, ಇದು ಕೇಂದ್ರ ಸರ್ಕಾರದ ಹೊಸ ನಾಟಕ ಎಂದಿದ್ದಾರೆ. ಅವರೇ ಬೆಲೆ ಏರಿಸುವರು. ಅವರೇ ಬೆಲೆ ತಗ್ಗಿಸುವರು. ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಡ್ರಾಮಾ ಇದು ಎಂದು ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮ್ಯಾಂಚೆಸ್ಟರ್‌ನಲ್ಲಿ ಭಯೋತ್ಪಾದಕ ದಾಳಿ: ಉಗ್ರತ್ವ ಖಂಡಿಸಿದ ಭಾರತ, ಪೊಲೀಸ್ ತನಿಖೆ ಚುರುಕು