Skip to main content
ವಿಡಿಯೋ
1/2
politics

ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ ರಣದೀಪ್‌ ಸುರ್ಜೇವಾಲ..!!

By Pavitra Ganapathi Baradavalli
ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ ರಣದೀಪ್‌ ಸುರ್ಜೇವಾಲ..!!

ಮೊನ್ನೆಯಷ್ಟೇ ಖರ್ಗೆಯವರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆಯವರು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವಾಪಸ್‌ ಮನೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಸ್ವತಃ ಖರ್ಗೆ ನಿವಾಸಕ್ಕೆ ಭೇಟಿ ಕೊಟ್ಟ ಸುರ್ಜೇವಾಲ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯವನ್ನು ಮತ್ತು ಅವರ ಸದ್ಯದ ಸ್ಥಿತಿಗತಿಯ ಕುರಿತು ವಿಚಾರಣೆ ನಡೆಸಿದ್ದಾರೆ

ಬೆಂಗಳೂರು: ಮೊನ್ನೆಯಷ್ಟೇ ಖರ್ಗೆಯವರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆಯವರು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವಾಪಸ್‌ ಮನೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಸ್ವತಃ ಖರ್ಗೆ ನಿವಾಸಕ್ಕೆ ಭೇಟಿ ಕೊಟ್ಟ ಸುರ್ಜೇವಾಲ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯವನ್ನು ಮತ್ತು ಅವರ ಸದ್ಯದ ಸ್ಥಿತಿಗತಿಯ ಕುರಿತು ವಿಚಾರಣೆ ನಡೆಸಿದ್ದಾರೆ.ಇದನ್ನೂ ಓದಿ: ಆಪರೇಷನ್ ಸಿಂದೂರ್ ದಾಳಿಯಲ್ಲಿ 4-5 ಪಾಕ್‌ F-16 ಫೈಟರ್ ಜೆಟ್‌ ಧ್ವಂಸ: IAF ಚೀಫ್‌ ಎ.ಪಿ. ಸಿಂಗ್ ಹೇಳಿಕೆ


ಬೆಂಗಳೂರಿನಲ್ಲಿರುವ ಸದಾಶಿವನಗರದ ನಿವಾಸಕ್ಕೆ ಸ್ವತಃ ಸುರ್ಜೇವಾಲ ಅವರೇ ಬಂದು ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಸುರ್ಜೇವಾಲ ಖರ್ಗೆ ನಿವಾಸಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ಎನ್‌.ಎ ಹ್ಯಾರೀಸ್‌ ಅವರು ಸುರ್ಜೇವಾಲಗೆ ಸಾಥ್‌ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಬದಲಾವಣೆ ಸಾಲದು, ಕಾಂಗ್ರೆಸ್ ಅಧಿಕಾರ ತೊರೆಯಬೇಕು: ಸಿ.ಟಿ. ರವಿ..!


ಉಸಿರಾಟದ ತೊಂದರೆಯಿಂದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೈದ್ಯರು ತಪಾಸಣೆ ಮಾಡಿ ಪೇಸ್‌ ಮೇಕರ್‌ ಅಳವಡಿಸಬೇಕು ಎಂದು ತಿಳಿಸಿದ್ದರು. ಆ ರೀತಿಯ ಎಲ್ಲಾ ಚಿಕಿತ್ಸೆಗಳನ್ನು ಮುಗಿಸಿ ಮನೆಗೆ ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಲು ಕಾಂಗ್ರೆಸ್‌ ನಾಯಕರ ದಂಡೆ ಹರಿದು ಅವರ ಮನೆಯ ಕಡೆಗೆ ಬರುತ್ತಿದೆ. ಹಲವಾರು ನಾಯಕರು ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿಯನ್ನು ಕೊಟ್ಟು ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಹೋಗುತ್ತಿದ್ದಾರೆ.
SWORNOF Women's Patola Silk Saree With Unstitched Boluse Piece