ಕರೂರು ಕಾಲ್ತುಳಿತ ಪ್ರಕರಣದಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ನಟ ವಿಜಯ್ ವಿರುದ್ಧ ಮದ್ರಾಸ್ ಹೈಕೋರ್ಟ್ ಆಕ್ರೋಶಗೊಂಡಿದೆ. ದುರಂತದ ಸಂದರ್ಭದಲ್ಲಿ ಪಕ್ಷವು ತೋರಿದ ನಿರ್ಲಕ್ಷ್ಯ ಹಾಗೂ ನಿರ್ವಹಿಸಿದ ರೀತಿಗೆ ಕೋರ್ಟ್ ಅಸಮಾಧಾನ ತೋರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ನೂ ತನಿಖೆ ಆರಂಭಿಕ ಹಂತದಲ್ಲಿರುವಾಗಲೇ ಸಿಬಿಐ ತನಿಖೆಗಾಗಿ ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕೋರ್ಟ್ ನಿರಾಕರಣೆ ತೋರಿದೆ.
ನಟ ಹಾಗೂ ರಾಜಕಾರಣಿ ವಿಜಯ್ ಅವರು ರಾಜಕೀಯ ರ್ಯಾಲಿ ನಡೆಸಿದ ಸಂದರ್ಭದಲ್ಲಿ ಸಂಭವಿಸಿದ 40 ಕ್ಕೂ ಹೆಚ್ಚು ಜನರ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ಕೆ ವಹಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ್ದು; ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಿಚಾರಣೆ ನಡೆಸಿದ ಬಳಿಕ ಮುಂದುವರೆದ ತನಿಖೆಗೆ ಅವಕಾಶ ನೀಡಲು ವಂಚಿಸಿತು ಎನ್ನಲಾಗಿದೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಪ್ರಕರಣದ ತನಿಖೆ ಆರಂಭಿಕ ಹಂತದಲ್ಲಿರುವ ನಡುವೆ ಉನ್ನತ ಆದೇಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ನ್ಯಾಯಾಲಯಗಳನ್ನು ರಾಜಕೀಯ ವೇದಿಕೆಗಳನ್ನಾಗಿ ಮಾಡಬೇಡಿ ಎಂದು ಬೇಸರ ವ್ಯಕ್ತಪಡಿಸಿದೆ. ಘಟನೆ ಕುರಿತು ತಮಿಳುನಾಡು ಪೊಲೀಸರ ತನಿಖೆಯು ಆರಂಭದಲ್ಲಿರುವಾಗಲೇ ಸಿಬಿಐ ತನಿಖೆ ಕೋರಿದ ಅರ್ಜಿದಾರರು, ತನಿಖೆ ಇನ್ನು ಆರಂಭಿಕ ಹಂತದಲ್ಲಿದೆ ಎಂದು ನ್ಯಾಯಾಲಯ ಎಚ್ಚರಿಸಿತು. iPhone 16 128 GB: 5G Mobile Phone with Camera Control, A18 Chip and a Big Boost in Battery Life. Works with AirPods; Teal
ನ್ಯಾಯಮೂರ್ತಿಗಳಾದ ಎಂ ದಂಡಪಾಣಿ ಮತ್ತು ಎಂ ಜ್ಯೋತಿರಾಮನ್ ಅವರ ನ್ಯಾಯಪೀಠವು ಈ ಸ್ಪಷ್ಟನೆ ನೀಡಿದೆ. ಕಾಲ್ತುಳಿತದಲ್ಲಿ ಬಲಿಯಾದ ಕುಟುಂಬಸ್ಥರು ನ್ಯಾಯಾಲಯಕ್ಕೆ ಬಂದರೆ ನಾವು ಅವರನ್ನು ರಕ್ಷಿಸುತ್ತೇವೆ. ನ್ಯಾಯಾಲಯವನ್ನು ರಾಜಕೀಯ ಕ್ಷೇತ್ರವೆಂದು ಪರಿಗಣಿಸಬೇಡಿ. ರ್ಯಾಲಿ ನಡೆಸುವ ಬಗ್ಗೆ ಕೋರ್ಟ್ ಅಲ್ಲಿನ ಸರ್ಕಾರ ಹಾಗೂ ಪೋಲಿಸ್ ಅಧಿಕಾರಿಗಳನ್ನು ಪ್ರಶ್ನಿಸಿತು. ಇದಕ್ಕೆ ಸರ್ಕಾರ ಪರ ವಕೀಲರು ಉತ್ತರಿಸಲು ಕೊಂಚ ಸಮಯ ತೆಗೆದುಕೊಂಡರು ಎನ್ನಲಾಗಿದೆ.
ರಾಜಕೀಯ ರ್ಯಾಲಿಗಳು ಅಥವಾ ಸಭೆ ನಡೆದ; ಗೊತ್ತುಪಡಿಸಿದ ಸ್ಥಳಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ನ್ಯಾಯಾಲಯವು ನಿರ್ದೇಶನ ನೀಡಿತು. ಈ ಕುರಿತಂತೆ, ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ ಎನ್ನಲಾಗಿದೆ. ಪರಿಹಾರ ಹೆಚ್ಚಿಸುವ ಬಗ್ಗೆ ಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ವಿಚಾರಣೆಯನ್ನು ಅಕ್ಟೋಬರ್ 18 ಕ್ಕೆ ಮುಂದೂಡಲಾಗಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಮೂರು ದಿನಗಳಲ್ಲಿ ಮುಕ್ತಾಯವಾಗಲಿದೆಯಾ ಸಮೀಕ್ಷೆ - ಏನ್ ಹೇಳ್ತಾರೆ ಸಿಎಂ ಸಿದ್ದರಾಮಯ್ಯ?