ಯಾದಗಿರಿ: ಇನ್ನೂ ಪ್ರವಾಹದ ಹೊಡೆತಕ್ಕೆ ಭೀಮಾ ನದಿಗೆ ಅಳವಡಿಸಲಾಗಿದ್ದ ಕ್ರಸ್ಟ್ ಗೇಟ್ ಮುರಿದುಹೋಗಿದೆ. ಪ್ರವಾಹ ಹೆಚ್ಚಾಗಿ ನೀರಿನ ರಭಸಕ್ಕೆ ಭೀಮಾ ನದಿಗೆ ಅಳವಡನೆ ಮಾಡಲಾಗಿದ್ದ ಬ್ಯಾರೇಜ್ ಕ್ರಸ್ಟ್ ಗೇಟ್ ಈಗ ಕುಸಿದು ಬಿದ್ದಿದೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣ್ಣಗಿ ಬಳಿ ಇರುವ ಬ್ಯಾರೇಜ್ ಇದಾಗಿದ್ದು, ಇದನ್ನು ಏಳು ವರ್ಷದ ಹಿಂದೆ ಈ ಕ್ರಸ್ಟ್ ಗೇಟ್ ಅನ್ನು ಅಳವಡಿಕೆಯನ್ನು ಮಾಡಲಾಗಿತ್ತು.ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಸಿಎಂ ಹೊಸ ಮನೆ ಗೃಹ ಪ್ರವೇಶ, ಮೈಸೂರಿನಲ್ಲಿ ಸಿಎಂ ಹೇಳಿಕೆ…!!
ಆದರೆ ಈಗ ಬಂದಿರುವ ಪ್ರವಾಹ ಕ್ರಸ್ಟ್ ಗೇಟ್ ಅನ್ನು ತನ್ನೊಳಗೆ ಮುಳುಗಿಸಿಕೊಂಡು ಹೋಗಿದೆ. ಮ್ಯಾನ್ಯುಯಲ್ ಗೇಟ್ ತೆಗೆದುಹಾಕಿ ಹೈಡ್ರಾಲಿಕ್ ಗೇಟ್ ಅನ್ನು ಅಳವಡಿಸಲಾಗಿತ್ತು. ಬ್ಯಾರೇಜ್ 24 ಗೇಟ್‌ಗಳ ಪೈಕಿ ಈಗ 14ನೇ ಗೇಟ್ ಈಗ ಕುಸಿದುಬಿದ್ದಿದೆ. ಗೇಟ್ ಮೆಲೆತ್ತುವ ಕೇಬಲ್ ಕಟ್ ಆಗಿದ್ದರಿಂದ ಈ ಅವಘಡ ಸಂಭವಸಿದೆ ಎನ್ನಲಾಗುತ್ತಿದೆ. ಎರೆಡು ದಿನಗಳಿಂದ ಬಿಟ್ಟು ಬಿಡದೇ ಮಳೆ ಏನು ಸುರಿಯುತ್ತದೆ ಆ ಮಳೆಗೆ ಭೀಮಾ ನದಿ ತುಂಬಿ ಹರಿಯುತ್ತಿದೆ.ಇದನ್ನೂ ಓದಿ: ಶಿವಮೊಗ್ಗದಲ್ಲಿ ದಸರಾ 2025ರ ಭವ್ಯ ಆಚರಣೆ: JDS ನ ಶಿವಮೊಗ್ಗ ನಗರಾಧ್ಯಕ್ಷರಾದ ದೀಪಕ್ ಸಿಂಗ್ ಸೇರಿ ಗಣ್ಯರು ಭಾಗಿ
ಈ ಗೇಟ್‌ನ ಒಟ್ಟು ಅಳತೆ ಅಗಲ 15 ಮೀಟರ್ ಇದ್ದು ಉದ್ದ 8 ಮೀಟರ್ ಇದೆ ಎಂಬುದು ತಿಳಿದುಬಂದಿದೆ. ಕಳೆದ ಎರೆಡು ಮೂರು ದಿನಗಳಿಂದ ಮಳೆ ಇರುವ ಪರಿಣಾಮ ಹೆಚ್ಚಾದ ಪ್ರಮಾಣದ ನೀರು ಬಂದ ಹಿನ್ನೆಲೆ ಕ್ರಸ್ಟ್ ಗೇಟ್ ಮೇಲೆತ್ತುವಾಗ ಕ್ರಸ್ಟ್ ಗೇಟ್‌ಗೆ ಅಳವಡನೆ ಮಾಡಲಾಗಿದ್ದ, ಕಬ್ಬಿಣದ ಕೇಬಲ್ ಕಟ್ ಆಗಿ ಈ ಘಟನೆ ಸಂಭವಿಸಿದೆ.SWORNOF Women's Patola Silk Saree With Unstitched Boluse Piece