ಮೈಸೂರು: ಡಿಸೆಂಬರ್‌ನಲ್ಲಿ ಹೊಸಮನೆ ಗೃಹ ಪ್ರವೇಶ ಮಾಡುತ್ತೇನೆ ಅಂತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮನೆ ಕೆಲಸ ಬಹುತೇಕ ಪೂರ್ಣ ಆಗಿದೆ. ಈಗ ಇರುವ ಮನೆ ನನ್ನದಲ್ಲ ಮರಿಸ್ವಾಮಿ ಮನೆ ಅದು ಮರಿಸ್ವಾಮಿಯೇ ನನಗೆ ನನ್ನ ಮಗನಿಗೆ ಅನ್ನದಾತ. ಜೊತೆಗೆ ನನಗೆ, ನನ್ನ ಸ್ನೇಹಿತರಿಗೆ, ಮತ್ತು ಮಗನಿಗೆ ಊಟ ಹಾಕಿದ್ದಾರೆ. ಗೃಹ ಪ್ರವೇಶ ಆದ ನಂತರ ನಾನು ಹೊಸ ಮನೆಗೆ ಹೋಗುತ್ತೇನೆ ಎಂದು ಮೈಸೂರಿನಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ.ಇದನ್ನೂ ಓದಿ: ಮೂರು ದಿನಗಳಲ್ಲಿ ಮುಕ್ತಾಯವಾಗಲಿದೆಯಾ ಸಮೀಕ್ಷೆ - ಏನ್ ಹೇಳ್ತಾರೆ ಸಿಎಂ ಸಿದ್ದರಾಮಯ್ಯ?
ಈ ಮನೆ ಖಾಲಿ ಇಟ್ರೆ ಜನರ ಭೇಟಿಗೆ ಇದನ್ನು ಬಳಸಿಕೊಳ್ಳುತ್ತೇನೆ ಅದು ಮರಿಸ್ವಾಮಿಯವರು ಅನುಮತಿ ನೀಡಿದರೆ ಮಾತ್ರ ಎಂದಿದ್ದಾರೆ. ಇನ್ನೂ ಮನೆ ಗೃಹ ಪ್ರವೇಶಕ್ಕೆ ಸಂಬಂಧಿಸಿದಂತೆ ಮನೆಯ ಗೃಹ ಪ್ರವೇಶಕ್ಕೆ ಯಾರಿಗೂ ಆಹ್ವಾನ ನೀಡಲಾಗುವುದಿಲ್ಲ.ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ ರಣದೀಪ್ ಸುರ್ಜೇವಾಲ..!!
ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ಮಾಧ್ಯಮದವರಿಗೂ ಸಹ ಆಹ್ವಾನ ಇರುವುದಿಲ್ಲ ಇದು ಕೇವಲ ಕುಟುಂಬದ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು. ಮನೆಯ ಗೃಹ ಪ್ರವೇಶ ಎಂದು ತಿಳಿದು ಯಾರಾದರೂ ಆಗಮಿಸಿದರೆ ಅವರಿಗೂ ಪ್ರವೇಶವನ್ನು ನಿರ್ಬಂಧಿಸುವುದಾಗಿ ತಿಳಿಸಿದರು. ಇದು ಕೇವಲ ಕುಟುಂಬದವರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು.SWORNOF Women's Patola Silk Saree With Unstitched Boluse Piece