Skip to main content
ವಿಡಿಯೋ
1/2
politics

ನನ್ನ ಹಾಗೂ ಮೋದಿ ಸಂಬಂಧ ಗಟ್ಟಿಯಾಗಿದೆ...ನೆರೆ ಪರಿಹಾರಕ್ಕೆ ಒತ್ತಾಯಿಸುತ್ತೇನೆ- ಹೆಚ್.ಡಿ.ದೇವೇಗೌಡ ..!

By Sushmitha R
ನನ್ನ ಹಾಗೂ ಮೋದಿ ಸಂಬಂಧ ಗಟ್ಟಿಯಾಗಿದೆ...ನೆರೆ ಪರಿಹಾರಕ್ಕೆ ಒತ್ತಾಯಿಸುತ್ತೇನೆ- ಹೆಚ್.ಡಿ.ದೇವೇಗೌಡ  ..!

ಹೆಚ್.ಡಿ.ದೇವೇಗೌಡರು ಬಿಜೆಪಿ ಜೊತೆಗಿನ ಮೈತ್ರಿ ಶಾಶ್ವತ ಎಂದು ತಿಳಿಸಿ, ಉತ್ತರ ಕರ್ನಾಟಕ ಪ್ರವಾಹ ಪರಿಹಾರದಿಗಾಗಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಬಾಂಧವ್ಯ 10 ವರ್ಷಗಳಷ್ಟು ಹಳೆಯದು, ಅದನ್ನು ಯಾರಿಂದಲೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.ಇದನ್ನು ಓದಿ :ವಿಂಡೋಸ್ 10 ಗೆ ಯಾವುದೇ ಅಪ್ಡೇಟ್ ಬರಲ್ಲ: ಮೈಕ್ರೋಸಾಫ್ಟ್‌ನಿಂದ ಬಹುದೊಡ್ಡ ನಿರ್ಧಾರ..!

ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ನಗರದ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.Hisense 164 cm (65 inches) U7Q Series 4K Ultra HD Smart QLED Mini LED TV 65U7Q (Black)

ಸ್ಥಳೀಯ ಸಂಸ್ಥೆ ಚುನಾವಣೆ ಅಥವಾ ವಿಧಾನಸಭಾ ಚುನಾವಣೆ ಯಾವುದೇ ಇರಲಿ, ಈ ಮೈತ್ರಿ ಗಟ್ಟಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿ ಪರಿಹಾರಕ್ಕೆ ಒತ್ತಾಯಿಸುವುದಾಗಿ ದೇವೇಗೌಡರು ತಿಳಿಸಿದ್ದಾರೆ.

ರಾಜ್ಯದಲ್ಲಿನ ಪ್ರವಾಹದಿಂದ ಅನೇಕ ಹಳ್ಳಿಗಳು, ರಸ್ತೆಗಳು, ಸೇತುವೆಗಳು ಮತ್ತು ಮನೆಗಳಿಗೆ ಹಾನಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇಂತಹ ಭೀಕರ ಅತಿವೃಷ್ಟಿ ಮೊದಲ ಬಾರಿಗೆ ಸಂಭವಿಸಿದೆ ಎಂದು ದೇವೇಗೌಡರು ಹೇಳಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಧಿಕಾರಿಗಳು ಮತ್ತು ಸಚಿವರುಗಳಿಗೆ ಸರ್ಕಾರ ನಿರ್ದೇಶನ ನೀಡಬೇಕೆಂದು ಅವರು ಒತ್ತಾಯಿಸಿದರು. ಇದನ್ನು ಓದಿ:ಪಾಕ್‌ ಗೆ ಭಯೋತ್ಪಾದನೆ ನಿಲ್ಲಿಸಿ, ಇಲ್ಲ ಭೂಪಟದಲ್ಲಿ ಉಳಿಯಲು ಆಗಲ್ಲ: ಜನರಲ್ ದ್ವಿವೇದಿಯ ಧಮಕಿ..!

ತಾವು ಸ್ವತಃ ಪ್ರವಾಹ ಪೀಡಿತ ಪ್ರದೇಶಗಳ ನಾಲ್ಕಾರು ಕಡೆ ವೀಕ್ಷಣೆ ನಡೆಸಿ, ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ. ನಂತರ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಕುಮಾರಸ್ವಾಮಿ ಈಗಾಗಲೇ ಪತ್ರ ಬರೆದಿದ್ದು, ಪ್ರಧಾನಿ ಮೋದಿ ಅವರು ಕಾರ್ಯನಿರತರಾಗಿರುವುದರಿಂದ, ತಾವು ದೆಹಲಿಗೆ ಹೋಗಿ ಅವರನ್ನು ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯಿಸುವುದಾಗಿ ದೇವೇಗೌಡರು ತಿಳಿಸಿದ್ದಾರೆ.ಇದನ್ನು ಓದಿ:ಐ ಲವ್‌ ಮೋದಿ ಎಂದರೆ ಸರಿ.. ಐ ಲವ್‌ ಮೊಹಮ್ಮದ್ ಎಂದರೆ ತಪ್ಪಾ..? ಓವೈಸಿ ಅವರಿಂದ ಸರ್ಕಾರಕ್ಕೆ ಗುಂಡಿನಂತಹ ಪ್ರಶ್ನೆ!"