Skip to main content
ವಿಡಿಯೋ
1/2
general

ಬೆಳಗಾವಿಯಲ್ಲಿ 'ಐ ಲವ್ ಮೊಹಮ್ಮದ್' ಘೋಷಣೆ...ಉರುಸ್ ಮೆರವಣಿಗೆ ವೇಳೆ ಕಲ್ಲು ತೂರಾಟ!

By Vinutha U
ಬೆಳಗಾವಿಯಲ್ಲಿ 'ಐ ಲವ್ ಮೊಹಮ್ಮದ್' ಘೋಷಣೆ...ಉರುಸ್ ಮೆರವಣಿಗೆ ವೇಳೆ ಕಲ್ಲು ತೂರಾಟ!

ಬೆಳಗಾವಿಯ ಖಡೇಬಜಾರ್‌ನಲ್ಲಿ ಮಾಬುಸುಬಾನಿ ಉರುಸ್ ಮೆರವಣಿಗೆ ವೇಳೆ ಯುವಕರು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಘರ್ಷಣೆ ನಡೆಯಿತು. ಪೊಲೀಸ್ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ಬೆಳಗಾವಿಯ ಖಡೇಬಜಾರ್‌ನ ಖಡಕ್‌ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ನಡೆದ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ವೇಳೆ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಮನೆಗಳ ಮೇಲೆ ಕಲ್ಲು ತೂರಾಟ, ಬೀದಿಗಳಲ್ಲಿ ಜನರ ಆತಂಕ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಈ ಘಟನೆಯ ತೀವ್ರತೆಯನ್ನು ತೋರಿಸಿದೆ.

ಪ್ರತಿ ವರ್ಷದಂತೆ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ನಡೆಯುತ್ತಿತ್ತು. ಆದರೆ, ಈ ಬಾರಿ ಮೆರವಣಿಗೆ ಖಡಕ್‌ ಗಲ್ಲಿ ಮೂಲಕ ಸಾಗಿದೆ. ಈ ಸಂದರ್ಭದಲ್ಲಿ ಕೆಲವು ಯುವಕರು 'ಐ ಲವ್ ಮೊಹಮ್ಮದ್' ಘೋಷಣೆ ಕೂಗಿದ್ದು, ಸ್ಥಳೀಯ ಹಿಂದೂಗಳ ಆಕ್ಷೇಪಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕಲ್ಲು ತೂರಾಟ ನಡೆದಿದ್ದು, ಕೆಲವರು ತಲ್ವಾರ್ ಪ್ರದರ್ಶಿಸಿ ಗೂಂಡಾವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. Karatcart Traditional Gold Plated Green Stone Laxmi Mata Temple Jewellery Set for Women

ಸಾಮಾನ್ಯವಾಗಿ ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿ ಮೂಲಕ ಸಾಗುತ್ತಿದ್ದ ಉರುಸ್ ಮೆರವಣಿಗೆ ಈ ಬಾರಿ ಪೊಲೀಸರ ಅನುಮತಿಯಿಲ್ಲದೆ ಮರಾಠಿ ಸಮುದಾಯದವರು ಹೆಚ್ಚಿರುವ ಖಡಕ್ ಗಲ್ಲಿಯಲ್ಲಿ ಸಾಗಿದೆ. ಇದು ಹಿಂದೂಗಳ ಆಕ್ರೋಶಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ನನ್ನ ಹಾಗೂ ಮೋದಿ ಸಂಬಂಧ ಗಟ್ಟಿಯಾಗಿದೆ...ನೆರೆ ಪರಿಹಾರಕ್ಕೆ ಒತ್ತಾಯಿಸುತ್ತೇನೆ- ಹೆಚ್.ಡಿ.ದೇವೇಗೌಡ ..!

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಮತ್ತು ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಖಡಕ್‌ ಗಲ್ಲಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.