Skip to main content
ವಿಡಿಯೋ
1/2
technology

ಡಿಜಿಟಲ್ ಸ್ವಾವಲಂಬಿ: ಶಿಕ್ಷಣ ಇಲಾಖೆಯಲ್ಲಿ Zoho Office Suite ಅಳವಡಿಕೆ, ಹಾಗೆಂದರೇನು? ಇಲ್ಲಿದೆ ಮಾಹಿತಿ

By Shravanthi R
ಡಿಜಿಟಲ್ ಸ್ವಾವಲಂಬಿ: ಶಿಕ್ಷಣ ಇಲಾಖೆಯಲ್ಲಿ Zoho Office Suite ಅಳವಡಿಕೆ, ಹಾಗೆಂದರೇನು? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರವು, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕೃತ ದಾಖಲೆಗಳು, ಸ್ಪ್ರೆಡ್‌ಶೀಟ್ಸ್‌ ಮತ್ತು ಪ್ರೆಸೆಂಟೇಷನ್ಸ್‌ಗಳನ್ನು ಜೋಹೋ ಆಫೀಸ್ ಸೂಟ್ ಬಳಸಿ ನಿರ್ವಹಿಸಲು ನಿರ್ದೇಶಿಸಲಾಗಿದೆ.

ಸ್ವದೇಶಿ ಭಾರತದ ಕನಸಿಗೆ ಅನುಗುಣವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು, ಎಲ್ಲಾ ತಂತ್ರಜ್ಞಾನ ಹಾಗೂ ದಾಖಲೆ ಸಂಬಂಧಿತ ಕಾರ್ಯಗಳಿಗೆ ಜೋಹೋ ಆಫೀಸ್‌ ಸೂಟ್‌ ಬಳಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಅದರಂತೆ ಶಿಕ್ಷಣ ಸಚಿವಾಲಯ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಇದು ಆತ್ಮ ನಿರ್ಭರ ಭಾರತ ಆಂದೋಲನದ ಹೆಜ್ಜೆಗೆ ಬೆಸುಗೆಯಾಗಿ, ಮತ್ತೊಂದು ಹೆಜ್ಜೆಯಾಗಲಿದೆ ಎನ್ನಲಾಗಿದೆ. 

ಜೋಹೋದ ಸ್ಥಳೀಯ ಉತ್ಪಾದಕ ಪರಿಕರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವದೇಶಿ ತಂತ್ರಜ್ಞಾನ ಹಾಗೂ ಡಿಜಿಟಲ್‌ ಸಾರ್ವಭೌಮತ್ವಕ್ಕೆ ಸಾಥಿಯಾಗಲಿದೆ. ಸ್ವಾವಲಂಬಿ ಭವಿಷ್ಯವನ್ನು ಬಲಪಡಿಸಲು ಈ ಹೆಜ್ಜೆಯು ನಾವೀನ್ಯತೆಯ ಸಂಕೇತವಾಗಲಿದೆ. ನಮ್ಮ ಡೇಟಾವನ್ನು ಸುರಕ್ಷಿತ ಹಾಗೂ ಸಬಲೀಕರಣಗೊಳಿಸುವ ಮೂಲಕ ವಿದೇಶಿ ಸಾಫ್ಟ್‌ವೇರ್‌ಗಳ ಅವಲಂಬನೆಯನ್ನು ಕಡಿತಗೊಳಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆಯ ತನ್ನ ಅಧಿಕೃತ ಸುತ್ತೋಲೆಯಲ್ಲಿ ತಿಳಿಸಿದೆ. 

ಅರಟ್ಟೈ ಆಪ್‌ ನಿಂದ, ಬಹಳಷ್ಟು ಜನರು ಜೋಹೋದಾ ಯೋಜನಾಫಲಕಾರಿಯ ಪ್ರಯೋಜನ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಈ ಮೂಲಕ ಸಚಿವಾಲಯದ ಎಲ್ಲಾ ಸಿಬ್ಬಂದಿಗೆ ಅಧಿಕೃತ ದಾಖಲೆಗಳು, ಸ್ಪ್ರೆಡ್‌ಶೀಟ್‌ಗಳು, ಪ್ರಸ್ತುತಿ (ಪ್ರೆಸೆಂಟೆಷನ್ಸ್‌) ಗಳು; ಇನ್ನಿತರೆ ಡಾಕ್ಯುಮೆಂಟ್‌ಗಳನ್ನು Zoho Office Suite ಬಳಸಿಕೊಂಡು ರಚಿಸಲು, ಸಂಪಾದಿಸಲು ಹಾಗೂ ಹಂಚಿಕೊಳ್ಳಲು ನಿರ್ಧರಿಸಿದೆ. ಮುಖ್ಯವಾಗಿ ಇದುವೆ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮೇಲ್‌ನಿಂದ ಸಂಯೋಜಿತಗೊಂಡಿದೆ ಎನ್ನಲಾಗಿದೆ. iQOO Z10x 5G (Titanium, 8GB RAM, 256GB Storage) | 6500 mAh Large Capacity Battery | Dimensity 7300 Processor | Military-Grade Durability

ಜೋಹೋ ಆಫೀಸ್‌ ಸೂಟ್‌ ಎಂದರೇನು?

ಜೋಹೋ ಕಾರ್ಪೊರೇಷನ್‌ನ ಶ್ರೀಧರ್‌ ವೆಂಬು ನೇತೃತ್ವವಹಿಸಿರುವ ಮತ್ತು ಅವರು ಅಭಿವೃದ್ದಿಪಡಿಸಿರುವ ಇದೊಂದು ಆನ್‌ಲೈನ್‌ ವರ್ಕ್‌ಸ್ಪೇಸ್‌ ಆಗಿದೆ. ಮೈಕ್ರೋಸಾಫ್ಟ್ ಆಫೀಸ್ ಅಥವಾ ಗೂಗಲ್ ವರ್ಕ್‌ಸ್ಪೇಸ್‌ನಂತೆಯೇ ಕ್ಲೌಡ್-ಆಧಾರಿತ ಹಾಗೂ ಬಿಸಿನೆಸ್‌ ಅಪ್ಲಿಕೇಶನ್‌ಗಳ ಸಂಗ್ರಹವೆನ್ನಲಾಗಿದೆ. ಇದು ವರ್ಡ್ ಪ್ರೊಸೆಸರ್ (ರೈಟರ್), ಸ್ಪ್ರೆಡ್‌ಶೀಟ್ ಪ್ರೋಗ್ರಾಂ (ಶೀಟ್), ಮತ್ತು ಪ್ರೆಸೆಂಟೇಷನ್‌ (ಸ್ಲೈಡ್‌ ಶೋ) ನಂತಹ ಪ್ರಮುಖ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಇದರ ಬಳಕೆದಾರರಿಗೆ ದಾಖಲೆಗಳನ್ನು ರಚಿಸಲು, ಸಂಪಾದಿಸಲು ಮತ್ತು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಮಲ್ಲಿಕಾರ್ಜುನ್‌ ಖರ್ಗೆ ಆರೋಗ್ಯ ಚೇತರಿಕೆಗೆ ವಿಶ್ರಾಂತಿ ಸಲಹೆ: ಪಕ್ಷಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ - ಕೆ. ಸಿ. ವೇಣುಗೋಪಾಲ್‌