Skip to main content
ವಿಡಿಯೋ
1/2
webstory

ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ - ಗಿನ್ನಿಸ್ ದಾಖಲೆ ಹಿಂದಿಕ್ಕಿದ ಪ್ರಾಜೆಕ್ಟ್‌ ಹಿಮಾಂಕ್‌.!

By Shravanthi R
ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ - ಗಿನ್ನಿಸ್ ದಾಖಲೆ ಹಿಂದಿಕ್ಕಿದ ಪ್ರಾಜೆಕ್ಟ್‌ ಹಿಮಾಂಕ್‌.!

ಲಡಾಖ್‌ನ ಮಿಗ್ ಲಾ ಪಾಸ್‌ನಲ್ಲಿ ಪ್ರಾಜೆಕ್ಟ್ ಹಿಮಾಂಕ್ ನಿರ್ಮಿಸಿರುವ 19,400 ಅಡಿ ಎತ್ತರದ ಹೊಸ ಮೋಟಾರು ರಸ್ತೆ, ಉಮ್ಲಿಂಗ್ ಲಾ ದಾಖಲೆ ಮುರಿದು ವಿಶ್ವದ ಅತಿ ಎತ್ತರದ ರಸ್ತೆ ಎಂಬ ಹೆಸರು ಪಡೆದಿದೆ ಎನ್ನಲಾಗಿದೆ.

ಲಡಾಖ್‌ನ ಲಿಕಾರು-ಮಿಗ್ ಲಾ-ಫುಕ್ಚೆ ರಸ್ತೆಯಲ್ಲಿ ಮೋಟಾರು ರಸ್ತೆ ಪ್ರಾಜೆಕ್ಟ್‌ ಹಿಮಾಂಕ್‌ ಐತಿಹಾಸಿಕ ಗಿನ್ನಿಸ್‌ ದಾಖಲೆಯ ಉಮ್ಲಿಂಗ್‌ ಲಾ (19,024) ಹಿಂದಿಕ್ಕಿದೆ. ಇಲ್ಲಿನ ಮಿಗ್‌ ಲಾ ಪಾಸ್‌ (19,400) ಈ ದಾಖಲೆಯನ್ನು ಮುರಿದು ಇತಿಹಾಸಕ್ಕೆ ಸೇರ್ಪಡೆಗೊಂಡಿದೆ. ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಎಂಬ ಹೆಗ್ಗಳಿಕೆ ಪಡೆದು ಇತಿಹಾಸ ನಿರ್ಮಿಸಿದ, ಪ್ರಾಜೆಕ್ಟ್ ಹಿಮಾಂಕ್ ಹೆಸರಿನ ವಿಶ್ವದ ಅತಿ ಎತ್ತರದ ಮೋಟಾರೆಬಲ್ ರಸ್ತೆ ನಿರ್ಮಾಣಗೊಳ್ಳಲು ಎರಡು ವರ್ಷಗಳ ಹಿಂದೆ ಯೋಜನೆ ರೂಪಿಸಲಾಗಿದ್ದು, ಬಾರ್ಡರ್ ರೋಡ್ಸ್ ಆರ್ಗನೈಜೇಷನ್ (BRO) ಈ ಸಾಧನೆಗೆ ಅಡಿಪಾಯ ಹಾಕಿದೆ. 

ಬಾರ್ಡರ್ ರೋಡ್ಸ್ ಆರ್ಗನೈಜೇಷನ್ ಈ ಮೂಲಕ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ ಎನ್ನಲಾಗಿದೆ. ಈ ರಸ್ತೆಯು ಮಹತ್ವಕಾರಿ ಯೋಜನೆಯಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಯೋಜನೆ ಕೈಗೊಂಡು ಸಂಪೂರ್ಣಗೊಳಿಸಿರುವಲ್ಲಿ ಲಡಾಕ್ ಭಾರತದ ಪ್ರಥಮ ಪ್ರದೇಶವಾಗಿ ಹೆಸರುಪಡೆದಿದೆ. ಇಲ್ಲಿನ ಮಿಗ್ ಲಾ ಪಾಸ್‌ನಲ್ಲಿ (19,400 ಅಡಿ) ವಿಶ್ವದ ಅತಿ ಎತ್ತರದ ವಾಹನ ಚಲಾಯಿಸಬಹುದಾದ ರಸ್ತೆಯನ್ನು ನಿರ್ಮಿಸುವ ಜೊತೆಗೆ, ಅಲ್ಲಿನದೇ ಉಮ್ಲಿಂಗ್ ಲಾದಲ್ಲಿ (19,024 ಅಡಿ) ಗಿನ್ನಿಸ್‌ ದಾಖಲೆಯನ್ನು ಸರಿದಟ್ಟಿದೆ ಎನ್ನಲಾಗಿದೆ.

ಈ ಪಟ್ಟ ಹೊಂದಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಲಿದೆ ಎನ್ನಲಾಗಿದೆ. ಇದರಿಂದ ಪ್ರವಾಸೋದ್ಯಮ ಹಾಗೂ ಹಳ್ಳಿಗಳ ಉತ್ತೇಜನಕ್ಕಾಗಿ; ರಸ್ತೆಯು ಪಕ್ಕದ ಹಳ್ಳಿಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗುವ ಆಶಯ ಹಾಗೂ ಉನ್ನತಿಯನ್ನು ಪ್ರೋತ್ಸಾಹಿಸಲಿದೆ ಎನ್ನಲಾಗಿದೆ.  realme NARZO 80 Lite 4G (Beach Gold, 6GB+128GB) | 6300mAh Segment's Biggest Battery | 7.94mm Slim Design | 300% Ultra Volume | Pulse Light: 9 Colors, 5 Glow Modes | Ai Assist

ಇದರ ಸಲುವಾಗಿ BRO ನ ಅಧಿಕಾರಿಗಳು, ಇಂಜಿನಿಯರ್‌ಗಳೆಲ್ಲರ ಸಮರ್ಪಣೆ ಚೈತನ್ಯವನ್ನು ಅಭಿನಂದಿಸಲಾಗಿದೆ. ಭಾರತೀಯ ಸೇನೆಯು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ತಿಳಿಸಿದ್ದು, ಈ ಮಾರ್ಗವು ಮುಂಬರುವ ದಿನಗಳಲ್ಲಿ, ಶಸ್ತ್ರಪಡೆಗಳ ವಾಸ್ತವಿಕ ನಿಯಂತ್ರಣ ರೇಖೆಗೆ ಪ್ರವೇಶವನ್ನು ಸುಗಮಗೊಳಿಸುವ ಉದ್ದೇಶವನ್ನು ಪೂರೈಸಲಿದೆ ಎನ್ನಲಾಗಿದೆ. ಇದೊಂದು ಸಹಾಯಕಾರಿ ಫೀಡರ್ ರಸ್ತೆಯಾಗಿದೆ. ಇದರರ್ಥ ಪ್ರಯಾಣದ ಸಮಯ ಕಡಿಮೆ ಮಾಡುವುದೆನ್ನಲಾಗಿದೆ. ಇದನ್ನೂ ಓದಿ: ಡಿಜಿಟಲ್ ಸ್ವಾವಲಂಬಿ: ಶಿಕ್ಷಣ ಇಲಾಖೆಯಲ್ಲಿ Zoho Office Suite ಅಳವಡಿಕೆ, ಹಾಗೆಂದರೇನು? ಇಲ್ಲಿದೆ ಮಾಹಿತಿ