Skip to main content
ವಿಡಿಯೋ
1/2
crime

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ತಿಪಂಜರ ಪತ್ತೆ..!

By Vinutha U
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ತಿಪಂಜರ ಪತ್ತೆ..!

ಅಸ್ತಿಪಂಜರವು ಪ್ಯಾಂಟ್ ಮತ್ತು ಶರ್ಟ್ ಧರಿಸಿ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಕೊತ್ತನೂರು ಪೊಲೀಸರು ಈ ಘಟನೆಯನ್ನು ಅಸಹಜ ಸಾವಿನ ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ. ಈ ಸಾವಿನ ಕಾರಣ ಹಾಗೂ ಅಸ್ತಿಪಂಜರದ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು, ಅ.4: ಬೆಂಗಳೂರಿನ ಕೊತ್ತನೂರು ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಅಪಾರ್ಟ್ಮೆಂಟ್‌ನಲ್ಲಿ ಅಸ್ತಿಪಂಜರವೊಂದು ಪತ್ತೆಯಾಗಿದ್ದು, ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ಈ ಅಸ್ತಿಪಂಜರ ಸುಮಾರು 7-8 ತಿಂಗಳ ಹಿಂದೆ ಸಾವನ್ನಪ್ಪಿರುವ ವ್ಯಕ್ತಿಯದ್ದು ಎಂದು ಶಂಕಿಸಲಾಗಿದೆ. ಕಟ್ಟಡಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಪ್ರಕರಣ ಇದ್ದ ಕಾರಣ, ಕಳೆದ 10 ವರ್ಷಗಳಿಂದ ಇಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆದಿರಲಿಲ್ಲ, ಇದರಿಂದ ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿತ್ತು.ಇದನ್ನು ಓದಿ: ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ - ಗಿನ್ನಿಸ್ ದಾಖಲೆ ಹಿಂದಿಕ್ಕಿದ ಪ್ರಾಜೆಕ್ಟ್‌ ಹಿಮಾಂಕ್‌.!

ಈ ಸ್ಥಳದಲ್ಲಿ ಕೆಲವು ಅಕ್ರಮ ಚಟುವಟಿಕೆಗಳೂ ನಡೆಯುತ್ತಿದ್ದವು ಎಂದು ಸ್ಥಳೀಯರು ಆರೋಪಿಸಿದ್ದಾರೆ.ನಿನ್ನೆ, ಶುಕ್ರವಾರ (ಅ.3) ಕಟ್ಟಡದ ಮಾಲೀಕರು ಮತ್ತು ಕಾರ್ಮಿಕರು ನಿರ್ಮಾಣ ಕಾಮಗಾರಿಯನ್ನು ಪುನರಾರಂಭಿಸಲು ಸ್ವಚ್ಛತಾ ಕಾರ್ಯಕ್ಕಾಗಿ ಬಂದಿದ್ದ ವೇಳೆ, ನಾಲ್ಕನೇ ಮಹಡಿಯಲ್ಲಿ ಈ ಅಸ್ತಿಪಂಜರ ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೊತ್ತನೂರು ಪೊಲೀಸರು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ANAYRA 925 Sterling Silver Floral Pendant Set for Women | Hallmark Certified Silver Pendant Set | Silver Jewellery for Women |Great for Gifting

ಅಸ್ತಿಪಂಜರವನ್ನು FSL (ಫಾರೆನ್ಸಿಕ್ ಸೈನ್ಸ್ ಲ್ಯಾಬ್)ಗೆ ಕಳುಹಿಸಲಾಗಿದ್ದು, ಇದು 35-40 ವರ್ಷ ವಯಸ್ಸಿನ ಗಂಡಸಿನದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಸ್ತಿಪಂಜರವು ಪ್ಯಾಂಟ್ ಮತ್ತು ಶರ್ಟ್ ಧರಿಸಿ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಕೊತ್ತನೂರು ಪೊಲೀಸರು ಈ ಘಟನೆಯನ್ನು ಅಸಹಜ ಸಾವಿನ ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ. ಈ ಸಾವಿನ ಕಾರಣ ಹಾಗೂ ಅಸ್ತಿಪಂಜರದ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.