ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಒಂದು ಹಂತ ತಲುಪಿದೆ. ಇಂದಿನಿಂದ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರ ನಿವಾಸಕ್ಕೆ ಸಮೀಕ್ಷೆ ಮಾಡುವ ವ್ಯಕ್ತಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಅವರಿಗೆ ಕೇಳಲಾದ ಪ್ರಶ್ನೆಗೆ ತಾಳ್ಮೆಯಿಂದಲೇ ಉತ್ತರಿಸಿದ ಅವರು ಇನ್ನೂ ಹಲವು ಪ್ರಶ್ನೆಗಳಿಗೆ ಗರಂ ಆಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.
ಈ ಮೂಲಕ ಸ್ವತಃ ಅವರು ಸಹ ಸಮೀಕ್ಷೆ ಪ್ರಕ್ರಿಯೆಗೆ ಒಳಗಾದರು ಎನ್ನಲಾಗಿದೆ. ಸಮೀಕ್ಷೆಯ ಕುರಿತು ಶಿಕ್ಷಕರು ಪ್ರಶ್ನಿಸಿದ್ದಾರೆ. ಅವರೆಲ್ಲರ ಪ್ರಶ್ನೆಗಳಿಗೆ ಉತ್ತರಿಸಲು ಸುಸ್ತಾದ ಡಿಸಿಎಂ, ತಮ್ಮದೇ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯ ಕುರಿತು ಚಕಾರವೆತ್ತಿದ್ದಾರೆ ಎನ್ನಲಾಗಿದೆ. ತಮ್ಮ ಟ್ವಿಟರ್ ಖಾತೆಯಲ್ಲಿಯೂ ಈ ಬಗ್ಗೆ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವ ಬಗ್ಗೆ ತಿಳಿಸಿಕೊಟ್ಟಿರುವರು ಎನ್ನಲಾಗಿದೆ. Mi 33W SonicCharge 2.0 USB Charger for Cellular Phones, White
ಡಿಕೆಶಿಯವರ ಮುಂದಿಡಲಾದ ಪ್ರಶ್ನೆಗಳು -
ಜನ್ಮ ಜಿಲ್ಲೆ ಬೆಂಗಳೂರು ದಕ್ಷಿಣ, ಎಂಕಾಂ ಓದಿದ್ದೇನೆ. ಉದ್ಯೋಗದ ಕಾಲಂಗೆ ಕೃಷಿ ಅಂತ ಹಾಕಿ ಎಂದ ನಂತರ ಸ್ವಉದ್ಯೋಗ ಪಬ್ಲಿಕ್ ಸರ್ವೆಂಟ್ ಎಂದು ಬರೆದುಕೊಳ್ಳಿ ಎಂದರು ಎನ್ನಲಾಗಿದೆ. ಧರ್ಮ - ಹಿಂದೂ; ಜಾತಿ - ಒಕ್ಕಲಿಗ ಗೌಡ; ಶಾಲೆಯಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದೇನೆ. 31 ನೇ ವಯಸ್ಸಿಗೆ ಮದುವೆಯಾಗಿದ್ದೇನೆ. ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಮೀಸಲಾತಿಯನ್ನು ಪಡೆದಿಲ್ಲ. ಕುಲ ಕಸುಬು ಕೃಷಿ ಸಾಗುವಳಿ. ಆದಾಯದ ಬಗ್ಗೆ ದೊಡ್ಡ ಸ್ಲಾಬ್ ಹಾಕಿ ಎನ್ನುವ ಮೂಲಕ ವಿವಿಧ ಪ್ರಶ್ನೆಗಳಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.
ಚಿನ್ನದ ಕುರಿತ ಪ್ರಶ್ನೆಗೆ ಡಿಸಿಎಂ ಗರಂ -
ಜ್ಯುವೆಲ್ಲರಿ ಇದೆಯಾ ಎನ್ನಲಾದ ಪ್ರಶ್ನೆಗೆ ಪರ್ಸನಲ್ ಡೀಟೆಲ್ಸ್‌ಗೆ ಹೋಗಬಾರದು. ಅವರ ಪತ್ನಿ ಉಷಾ ಶಿವಕುಮಾರ್ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಇದೇ ವೇಳೆ ತಮಾಷೆಯಾಗಿಯೂ ಅವರು ಉತ್ತರಿಸಿದ್ದಾರೆ. ಒಟ್ಟಾರೆ, ಸಿಂಪಲ್ ಆಗಿ ಸಮೀಕ್ಷೆ ನಡೆಸಿ ಎಂದಿರುವ ಅವರು, ಆರ್ಥಿಕ ಸಾಮಾಜಿಕ ಮಾಹಿತಿ ಕಲೆಹಾಕಿ ಸಾಕು ಎಂದರು. ನಮ್ಮನೇಲೆ ಒಂದು ಗಂಟೆ ಮಾಡಿದಿರಿ. ಸಮಯದ ವ್ಯಯ ಮಾಡದೇ, ಜನರನ್ನು ಗಾಬರಿಪಡಿಸಬೇಡಿ. ಶೈಕ್ಷಣಿಕ ಹಾಗೂ ಜನಸಂಖ್ಯೆ ಮಾಹಿತಿ ವಿವರ ಮೊದಲು ಕೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ - ಗಿನ್ನಿಸ್ ದಾಖಲೆ ಹಿಂದಿಕ್ಕಿದ ಪ್ರಾಜೆಕ್ಟ್ ಹಿಮಾಂಕ್.!