Skip to main content
ವಿಡಿಯೋ
1/2
politics

KRS ಡ್ಯಾಮ್ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಶಾಸಕ K.N ರಾಜಣ್ಣ ಹೇಳಿಕೆ

By Gireesh Vasishta
KRS ಡ್ಯಾಮ್ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಶಾಸಕ K.N ರಾಜಣ್ಣ ಹೇಳಿಕೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಡ್ಯಾಮ್‌ಅನ್ನು ಸಂಪೂರ್ಣ ಮಾಡುವಾಗ ಹಣಕಾಸಿನ ತೊಂದರೆಯಾಯಿತು ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರುತ್ತಾರೆ ಎಂದರು. ಆದರೆ ಅದೇ ಟಿಪ್ಪು ನಾಲ್ಕು ಯುದ್ಧ ಮಾಡುತ್ತಾನೆ. ಮೂರನೇ ಯುದ್ಧದಲ್ಲಿ ಸೋತು ಬಿಡುತ್ತಾನೆ ಬ್ರಿಟಿಷರು ಯುದ್ಧದ ಖರ್ಚು ಮೂರು ಕೋಟಿ 30 ಲಕ್ಷವನ್ನು ಕೇಳುತ್ತಾರೆ. ಆಗ ವಿಧಿ ಇಲ್ಲದೆ ಟಿಪ್ಪು ಅವನ ಮಕ್ಕಳನ್ನು ಅಡ ಇಡುತ್ತಾನೆ ಎಂದರು.

ತುಮಕೂರು: KRS ಡ್ಯಾಮ್ ಕಟ್ಟಲು ಅಡಿಗಲ್ಲು ಹಾಕಿದ್ದೆ ಟಿಪ್ಪು ಸುಲ್ತಾನ್ ಎಂಬ ಹೇಳಿಕೆಯನ್ನು ರಾಜಣ್ಣ ನೀಡಿದ್ದಾರೆ. ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಅವರು ನಾನು ಓದಿರುವ ಪ್ರಕಾರ ಕನ್ನಂಬಾಡಿ ಕಟ್ಟೆಯನ್ನು ಪ್ರಾರಂಭ ಮಾಡಿದ್ದೆ ಟಿಪ್ಪು ನಂತರ ನಾಲ್ವಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಂಪೂರ್ಣವಾಯಿತು ಎಂದಿದ್ದಾರೆ.Fflirtygo Men Graphic Print Cotton T-Shirt & Short Set for Men/Boys

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಡ್ಯಾಮ್‌ಅನ್ನು ಸಂಪೂರ್ಣ ಮಾಡುವಾಗ ಹಣಕಾಸಿನ ತೊಂದರೆಯಾಯಿತು ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರುತ್ತಾರೆ ಎಂದರು. ಆದರೆ ಅದೇ ಟಿಪ್ಪು ನಾಲ್ಕು ಯುದ್ಧ ಮಾಡುತ್ತಾನೆ. ಮೂರನೇ ಯುದ್ಧದಲ್ಲಿ ಸೋತು ಬಿಡುತ್ತಾನೆ ಬ್ರಿಟಿಷರು ಯುದ್ಧದ ಖರ್ಚು ಮೂರು ಕೋಟಿ 30 ಲಕ್ಷವನ್ನು ಕೇಳುತ್ತಾರೆ. ಆಗ ವಿಧಿ ಇಲ್ಲದೆ ಟಿಪ್ಪು ಅವನ ಮಕ್ಕಳನ್ನು ಅಡ ಇಡುತ್ತಾನೆ ಎಂದರು. ಇದನ್ನು ಓದಿ: ಕರೂರ್‌ ಕಾಲ್ತುಳಿತ ಪ್ರಕರಣ: ಸ್ಥಳದಿಂದ ನಾಪತ್ತೆಯಾದ ವಿಜಯ್‌ & TVK ನಾಯಕರಿಗೆ ಮದ್ರಾಸ್‌ ಹೈಕೋರ್ಟ್‌ ತರಾಟೆ


ನಾಲ್ಕನೇ ಮೈಸೂರು ಯುದ್ಧದಲ್ಲಿ ಮೀರ್‌ಸಾಧಿಕ್ ಇಂದ ಸೋತು ಹೋಗುತ್ತಾನೆ ಸಾಧಿಕ್ ದ್ರೋಹ ಮಾಡದೆ ಇದ್ದಿದ್ದರೆ, ಶಸ್ತ್ರಗಾರ ಡ್ಯಾಮೇಜ್ ಆಗದೆ ಇದ್ದಿದ್ದರೆ ಟಿಪ್ಪು ಸೋಲುತ್ತಿರಲಿಲ್ಲ ಎಂದರು. ನಮ್ಮ ರಾಜ್ಯದಲ್ಲಿ ರೇಷ್ಮೆ ಬರಲು ಟಿಪ್ಪು ಕಾರಣ. ಪರ್ಶಿಯಾದಿಂದ ಕಡ್ಡಿ ತಂದಿದ್ದೆ ಟಿಪ್ಪು, ರಾಮನಗರದ ಎಲ್ಲಾ ಕಡೆ ಮುಸ್ಲಿಂಮರು ಹೆಚ್ಚು ರೇಷ್ಮೆ ಕೃಷಿ ಮಾಡುತ್ತಾರೆ ಎಂದರು.

ಟಿಪ್ಪು ಆನೆಗೆ ಕಣ್ಣು ಹೋದಾಗ ನಂಜುಂಡೇಶ್ವರನಿಗೆ ಹರಕೆ ಮಾಡಿಕೊಳ್ಳುತ್ತಾನೆ. ಹರಕೆ ಮಾಡಿಕೊಂಡಾಗ ಆನೆಗೆ ಕಣ್ಣು ಬರುತ್ತದೆ. ನಂತರ ದೇವರಿಗೆ ಪಚ್ಚೆಯನ್ನು ದಾನವಾಗಿ ನೀಡುತ್ತಾನೆ ಎಂದರು. ಹೀಗೆ ಟಿಪ್ಪು ಸುಲ್ತಾನ್ ಹಲವಾರು ಒಳ್ಳೆ ಕೆಲಸವನ್ನು ಮಾಡಿದ್ದಾನೆ ಇತಿಹಾಸವನ್ನು ತಿರುಚಬಾರದು ಎಂದು ಅವರು ಹೇಳಿದ್ದಾರೆ