Skip to main content
ವಿಡಿಯೋ
1/2
health

ಕರ್ನಾಟಕದಲ್ಲೂ ಕೆಮ್ಮಿನ ಸಿರಪ್‌ ಮೇಲೆ ಕಟ್ಟುನಿಟ್ಟಿನ ನಿಗಾ: ಸಚಿವ ದಿನೇಶ್‌ ಗುಂಡೂರಾವ್‌

By Gireesh Vasishta
ಕರ್ನಾಟಕದಲ್ಲೂ ಕೆಮ್ಮಿನ ಸಿರಪ್‌ ಮೇಲೆ ಕಟ್ಟುನಿಟ್ಟಿನ ನಿಗಾ: ಸಚಿವ ದಿನೇಶ್‌ ಗುಂಡೂರಾವ್‌

ಪುಟ್ಟ ಮಕ್ಕಳಿಗೆ ಕೆಮ್ಮು ಬಂದರೆ ಸಾಕು ವೈದ್ಯರು ಸಿಹಿಯಾದ ಸಿರಪ್ ಅನ್ನು ಬರೆದುಕೊಡುತ್ತಾರೆ. ಮಕ್ಕಳು ಇಂಜೆಕ್ಷನ್‌ಗೆ ಭಯಪಡುವ ಕಾರಣ ಸಿರಪನ್ನು ಸುಲಭವಾಗಿ ಸೇವಿಸುತ್ತಾರೆ. ಆದರೆ ಇತ್ತೀಚೆಗೆ ನಡೆದ ಘಟನೆಯಲ್ಲಿ ಸಿರಪ್ನಿಂದ ಹಲವಾರು ಮಕ್ಕಳು ಸಾವಿಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶದಲ್ಲಿ ಕಟ್ಟೆಚ್ಚರವಹಿಸುವಂತೆ ಕರ್ನಾಟಕ ಸರ್ಕಾರದ ಆರೋಗ್ಯಮಂತ್ರಿಯಾಗಿರುವ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಬೆಂಗಳೂರು: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕೆಲವು ಬೇರೆ ರಾಜ್ಯದಲ್ಲಿ ಕೆಮ್ಮಿನ ಸಿರಪ್‌ನಿಂದ ಮಕ್ಕಳು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೆಮ್ಮಿನ ಸಿರಪ್‌ಗಳ ಮೇಲೆ ನಿಗಾ ಇಡುವಂತೆ ರಾಜ್ಯದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆಯನ್ನು ನೀಡಿದ್ದಾರೆ.

ಪುಟ್ಟ ಮಕ್ಕಳಿಗೆ ಕೆಮ್ಮು ಬಂದರೆ ಸಾಕು ವೈದ್ಯರು ಸಿಹಿಯಾದ ಸಿರಪ್ ಅನ್ನು ಬರೆದುಕೊಡುತ್ತಾರೆ. ಮಕ್ಕಳು ಇಂಜೆಕ್ಷನ್‌ಗೆ ಭಯಪಡುವ ಕಾರಣ ಸಿರಪನ್ನು ಸುಲಭವಾಗಿ ಸೇವಿಸುತ್ತಾರೆ. ಆದರೆ ಇತ್ತೀಚೆಗೆ ನಡೆದ ಘಟನೆಯಲ್ಲಿ ಸಿರಪ್ನಿಂದ ಹಲವಾರು ಮಕ್ಕಳು ಸಾವಿಗೀಡಾಗಿದ್ದಾರೆ. ನಿಟ್ಟಿನಲ್ಲಿ ಕರ್ನಾಟಕ ಪ್ರದೇಶದಲ್ಲಿ ಕಟ್ಟೆಚ್ಚರವಹಿಸುವಂತೆ ಕರ್ನಾಟಕ ಸರ್ಕಾರದ ಆರೋಗ್ಯಮಂತ್ರಿಯಾಗಿರುವ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.ಇದನ್ನು ಓದಿ: KRS ಡ್ಯಾಮ್ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಶಾಸಕ K.N ರಾಜಣ್ಣ ಹೇಳಿಕೆ

ಸಿರಪ್‌ಗಳು ಹೆಚ್ಚಾಗಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಸಿರಪ್ಗಳನ್ನು ತಯಾರು ಮಾಡಿ ಅದನ್ನು ಮೆಡಿಕಲ್ ಸ್ಟೋರ್ಗಳಿಗೆ ರವಾನೆ ಮಾಡುತ್ತಿರುವುದು ಕಂಡುಬಂದಿದ್ದು ಅದರ ಬಗ್ಗೆ ತನಿಖೆ ನಡೆಸಬೇಕಿದೆ. ಹಾಗೆ ನಾನು ವೈದ್ಯ ಎಂದು ಹೇಳಿಕೊಂಡು ಕೆಲವೊಂದು ಕಡೆ ನೇಮ್ ಬೋರ್ಡ್ ಹಾಕಿಕೊಂಡು ನಕಲಿ ವೈದ್ಯರು ಕುಳಿತುಕೊಂಡಿದ್ದಾರೆ. ಹಣದ ಆಸೆಗಾಗಿ ಅಥವಾ ಹೆಚ್ಚಿನ ಪರ್ಸೆಂಟೇಜ್ ಅಥವಾ ಕಮಿಷನ್ ಆಸೆಗೆ ಬಿದ್ದು ಸಿರಪ್ಗಳನ್ನು ಮಕ್ಕಳ ಕೆಮ್ಮಿಗೆ ಬರೆದು ಅವರ ಹೊಟ್ಟೆ ಸೇರುವಂತೆ ಮಾಡುತ್ತಿದ್ದಾರೆ. ಇದರ ಬಗ್ಗೆ ಪೋಷಕರು ಸಹ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದಿದ್ದಾರೆ.BULLMER Trendy Clothing Set with Shirt & Pants Co-ords for Men

ರಾಜ್ಯದಲ್ಲಿ ಔಷಧ ತಯಾರಿಕ ಕಂಪನಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಜತೆಗೆ ಔಷಧಿಗಳ ಪರೀಕ್ಷೆ ಮತ್ತು ತಪಾಸಣೆ ಅತ್ಯಂತ ಕಟ್ಟುನಿಟ್ಟಾಗಿ ನಡೆಯುತ್ತದೆ. ಆದರೆ, ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದ ಸಚಿವರು, ಕರ್ನಾಟಕದ ಮಾದರಿಯನ್ನೇ ಎಲ್ಲಾ ರಾಜ್ಯಗಳಿಗೆ ಅಳವಡಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎಂದರು. ಎಚ್ಚರಿಕೆಯಿಂದ ಔಷಧಿಗಳನ್ನು ಬಳಸಲು ಸೂಚಿಸಲಾಗಿದೆ ಎಂದು ಹೇಳಿದರು.