ಬೆಂಗಳೂರು: ಕೇಂದ್ರ ಸಚಿವ ವಿ. ಸೋಮಣ್ಣ (V. Somanna) ಅವರ ವಿಜಯನಗರದ ನಿವಾಸದಲ್ಲಿ ಜಾತಿಗಣತಿ ಸರ್ವೇ (Caste Census) ನಡೆಸಲಾಗಿದೆ. ಸರ್ವೇಗಾಗಿ ಆಗಮಿಸಿದ ಸಿಬ್ಬಂದಿಗೆ ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.ಸರ್ವೇ ಸಂದರ್ಭದಲ್ಲಿ ಸೋಮಣ್ಣ, ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಸರ್ವೇ ಮಾಡುವುದೆಂದು ಹೇಳಿದ್ದೀರಿ. ಈ ರಾಜ್ಯದಲ್ಲಿ ಎಷ್ಟೋ ಜನ ಎಬ್ಬೆಟ್ಟು ಇದ್ದಾರೆ, ಅವರು ಹೇಗೆ ಆನ್‌ಲೈನ್‌ನಲ್ಲಿ ಸರ್ವೇ ಮಾಡಿಸಿಕೊಳ್ಳುತ್ತಾರೆ? ಈ ವಿಷಯವನ್ನು ನೀವು ಸರ್ಕಾರಕ್ಕೆ ತಿಳಿಸಬೇಕಿಲ್ಲವೇ? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ಭಾರತ vs ಪಾಕಿಸ್ತಾನ: ICC ಮಹಿಳಾ ವಿಶ್ವಕಪ್ 2025: ಇಂದಿನ ಪಂದ್ಯದ ಮಾಹಿತಿ ಹೀಗಿದೆ
ಕೇಂದ್ರ ಸರ್ಕಾರ ಮುಂದೆ ಗಣತಿ ನಡೆಸುತ್ತದೆ, ಅದನ್ನು ಹೇಗೆ ಮಾಡುತ್ತದೆ ಎಂಬುದನ್ನು ನೋಡಿ. ಆಗಲೂ ನೀವೇ ಸರ್ವೇ ಮಾಡಬೇಕಾಗುತ್ತದೆ. ಇಷ್ಟೆಲ್ಲಾ ಪ್ರಶ್ನೆಗಳು ಬೇಕೇ? ಈ ವಿಷಯಗಳನ್ನು ಸರ್ಕಾರಕ್ಕೆ ತಿಳಿಸಬೇಕಿಲ್ಲವೇ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್‌ಗಳಂತೆ ಕೆಲಸ ಮಾಡಬಾರದು, ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಸೋಮಣ್ಣ ಮುಂದುವರಿದು, ಸಿದ್ದರಾಮಯ್ಯ ಅವರಿಗೆ ಜಾತಿಯ ಲೆಕ್ಕಾಚಾರ ಬೇಕು, ಅದಕ್ಕಾಗಿಯೇ ಈ ಸರ್ವೇ ನಡೆಸುತ್ತಿದ್ದಾರೆ. ಒಂಬತ್ತು ಜನ ಸಿಬ್ಬಂದಿ ಯಾಕೆ ಬಂದಿದ್ದೀರಿ? ಉಪಜಾತಿ ಯಾವುದು ಎಂದು ಕೇಳಿದಾಗ, ಇದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಎಂದೇ ಬರೆದುಕೊಳ್ಳಿ, ಎಂದು ತಿಳಿಸಿದ್ದಾರೆ.ಇದನ್ನೂ ಓದಿ:KRS ಡ್ಯಾಮ್ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಶಾಸಕ K.N ರಾಜಣ್ಣ ಹೇಳಿಕೆ
ಇಡೀ ದೇಶದಲ್ಲಿ ಸಿದ್ದರಾಮಯ್ಯ ಜಾತಿ ಎಂದೇ ದಾಖಲಿಸಿಕೊಳ್ಳಿ. ಮದುವೆಯಾದಾಗ ಎಷ್ಟು ವರ್ಷ ಎಂಬ ಪ್ರಶ್ನೆಗೆ, ಇದೆಲ್ಲ ಯಾಕೆ? ದುರಂತ! ನಮ್ಮ ಅಪ್ಪ-ಅಮ್ಮನದನ್ನೂ ಕೇಳಬೇಕೇ? 26 ಎಂದು ಬರೆದುಕೊಳ್ಳಿ. ಇದು ಸಿದ್ದರಾಮಯ್ಯನವರು ವೋಟಿಗಾಗಿ ಮಾಡುತ್ತಿರುವ ಕೆಲಸ. ಯಾರೋ ಅವಿವೇಕಿಗಳು ಹೇಳಿದ್ದಕ್ಕೆ ಇದನ್ನು ಮಾಡುತ್ತಿದ್ದಾರೆ. ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಹೆಸರನ್ನೇ ದಾಖಲಿಸಿಕೊಳ್ಳಿ, ಎಂದು ಸೋಮಣ್ಣ ಗರಂ ಆಗಿದ್ದಾರೆ. ಉತ್ತರ ಕೊಡಲಾಗದ ಪ್ರಶ್ನೆಗಳನ್ನೆಲ್ಲ ಯಾಕೆ ಕೇಳುತ್ತೀರಿ? ಯಾರೋ ತಲೆಕೆಟ್ಟವರು ಈ ಪ್ರಶ್ನೆಗಳನ್ನು ರೂಪಿಸಿದ್ದಾರೆ. ವೃತ್ತಿಯ ಬಗ್ಗೆ ಕೇಳಿದಾಗ, ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಯಾವ ಗ್ರೂಪ್ ಎಂದು ಬರೆಯುತ್ತೀರಿ? ಎಂದು ಪ್ರತಿಯೊಂದು ಪ್ರಶ್ನೆಗೂ ಸಿದ್ದರಾಮಯ್ಯನವರ ಹೆಸರನ್ನೇ ಪ್ರಸ್ತಾಪಿಸಿ, ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.C J Enterprise Womens Pure Banarasi Soft Silk Saree Kanjivaram Style Sarees With Blouse Piece For Wedding (KeriGola-51)