ವಾಷಿಂಗ್ಟನ್: ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಸುರಕ್ಷತೆ ಮತ್ತು ಸಂಶೋಧನಾ ಸ್ಟಾರ್ಟಪ್ ಕಂಪನಿಯಾದ ಆಂಥ್ರೊಪಿಕ್‌ನ ಹೊಸ ಮುಖ್ಯ ತಂತ್ರಜ್ಞಾನ ಅಧಿಕಾರಿ ಸಿಟಿಒ ಆಗಿ ಬಾಗಲಕೋಟೆ ಮೂಲದ ರಾಹುಲ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್‌ಐಟಿ ಖಾಸಗಿ ವಿಶ್ವವಿದ್ಯಾಲಯದಲ್ಲಿ 1998ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ರಾಹುಲ್, ನಂತರ ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ.ಇದನ್ನೂ ಓದಿ:ಕಾಂತಾರ- ಚಾಪ್ಟರ್ 1: ಬಾಕ್ಸ್ ಆಫೀಸ್ ಕಲೆಕ್ಷನ್ ಡೇ 3: ₹160 ಕೋಟಿ ಗಡಿ ದಾಟಿದ ರಿಷಭ್ ಚಿತ್ರ
ಮೈಕ್ರೋಸಾಫ್ಟ್, ಒರಾಕಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಇವರು, ಇತ್ತೀಚಿಗೆ ಫಿನ್‌ಟೆಕ್ ಸಂಸ್ಥೆ ಸ್ಟ್ರೈಪ್‌ನಲ್ಲಿ ಸಿಟಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಆಂಥ್ರೊಪಿಕ್‌ನಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕಳೆದ ವರ್ಷ ಆಂಥ್ರೊಪಿಕ್ ಕಂಪನಿಯ ಮೌಲ್ಯ 183 ಬಿಲಿಯನ್ ಡಾಲರ್ ತಲುಪಿತ್ತು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಪಾಟೀಲ್, ನನ್ನ ತಂದೆ ಬಾಗಲಕೋಟೆಯವರು, ತಾಯಿ ರಾಯಚೂರಿನವರು.ಇದನ್ನೂ ಓದಿ:ಕಾಂತಾರ ಚಾಪ್ಟರ್ 1ಗೆ ವಿಶೇಷ ಗೌರವ ಅರ್ಪಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ....197 ಟಿಕೆಟ್‌ಗಳು ಬುಕ್!
ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಬಾಲ್ಡ್ವಿನ್ ಪ್ರೌಢಶಾಲೆ, ಸೇಂಟ್ ಜೋಸೆಫ್ ಕಾಲೇಜು ಮತ್ತು ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದೇನೆ. ತಂತ್ರಜ್ಞಾನ ಕ್ಷೇತ್ರಕ್ಕೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದೇನೆ. ಈಗ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ, ಎಂದು ಹೇಳಿದ್ದಾರೆ.C J Enterprise Womens Pure Banarasi Soft Silk Saree Kanjivaram Style Sarees With Blouse Piece For Wedding (KeriGola-51)