'ಕಾಂತಾರ: ಚಾಪ್ಟರ್ 1' ಬಿಗ್ ಬಜೆಟ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಗಳಿಕೆ ಕಂಡಿದೆ. ಅಕ್ಟೋಬರ್ 1ರ ಬುಧವಾರ ನಡೆದ ಪ್ರೀಮಿಯರ್ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗುರುವಾರ ಅಕ್ಟೋಬರ್ 2ರಂದು ಸಹ ಪ್ರದರ್ಶನಗಳು ಹೌಸ್‌ಫುಲ್ ಆಗಿದ್ದವು. ವೀಕೆಂಡ್‌ನಲ್ಲಿ ಚಿತ್ರಮಂದಿರಗಳಲ್ಲಿ ಸಿನೆಮಾ ಅಬ್ಬರಿಸಲಿದೆ.ಸಾಮಾನ್ಯ ಜನರಲ್ಲದೆ, ರಾಜಕೀಯ ಕ್ಷೇತ್ರದವರೂ 'ಕಾಂತಾರ: ಚಾಪ್ಟರ್ 1' ಬಗ್ಗೆ ಆಸಕ್ತಿ ತೋರಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಚಿತ್ರಮಂದಿರವೊಂದರ ಎಲ್ಲಾ ಟಿಕೆಟ್‌ಗಳನ್ನು ಬುಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.