Skip to main content
ವಿಡಿಯೋ
1/2
politics

ಜಾತಿಗಣತಿ ಸರ್ವೇನಲ್ಲಿ ಕುರಿ, ಕೋಳಿ, ಚಿನ್ನ, ವಾಚ್‌ ಬಗ್ಗೆ ಕೇಳಬೇಡಿ: ಡಿಕೆ ಶಿವಕುಮಾರ್‌...!!

By Pavitra Ganapathi Baradavalli
ಜಾತಿಗಣತಿ ಸರ್ವೇನಲ್ಲಿ ಕುರಿ, ಕೋಳಿ, ಚಿನ್ನ, ವಾಚ್‌ ಬಗ್ಗೆ ಕೇಳಬೇಡಿ: ಡಿಕೆ ಶಿವಕುಮಾರ್‌...!!

ಜಾತಿಗಣತಿ ಸರ್ವೇ (Caste Census) ಸಂದರ್ಭದಲ್ಲಿ ಕುರಿ, ಕೋಳಿ, ಚಿನ್ನ, ವಾಚ್‌ ಅಥವಾ ಫ್ರಿಡ್ಜ್‌ನಂತಹ ವೈಯಕ್ತಿಕ ವಿಷಯಗಳ ಬಗ್ಗೆ ಪ್ರಶ್ನಿಸಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಜಾತಿಗಣತಿ ಸರ್ವೇ (Caste Census) ಸಂದರ್ಭದಲ್ಲಿ ಕುರಿ, ಕೋಳಿ, ಚಿನ್ನ, ವಾಚ್‌ ಅಥವಾ ಫ್ರಿಡ್ಜ್‌ನಂತಹ ವೈಯಕ್ತಿಕ ವಿಷಯಗಳ ಬಗ್ಗೆ ಪ್ರಶ್ನಿಸಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಮಗೆ ಯಾವ ಮಾಹಿತಿಯನ್ನು ನೀಡಬೇಕೆನಿಸುತ್ತದೆಯೋ ಅದನ್ನು ಮಾತ್ರ ನೀಡಿ.ಇದನ್ನೂ ಓದಿ:ಭಾರತದಲ್ಲಿ ಚಿನ್ನದ ಬೆಲೆ ಸ್ಥಿರತೆ ಕಂಡಿದೆ: ಹೂಡಿಕೆ ಏರುಮುಖವಾಗುವ ಸಾಧ್ಯತೆ!


ಕೊಡಬಾರದೆಂದು ತೋರುವ ವಿಷಯಗಳನ್ನು ಬಿಟ್ಟುಬಿಡಿ. ಎಷ್ಟು ವಾಚ್, ಎಷ್ಟು ಚಿನ್ನ, ಎಷ್ಟು ಫ್ರಿಡ್ಜ್ ಇದೆ ಎಂಬಂತಹ ವೈಯಕ್ತಿಕ ವಿಷಯಗಳನ್ನು ಕೇಳಬೇಡಿ. ಇವೆಲ್ಲ ಅವರ ಖಾಸಗಿ ವಿಷಯಗಳು, ಅವನ್ನು ಬಿಟ್ಟುಬಿಡಿ ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ, ಎಂದು ತಿಳಿಸಿದರು.ಯಾರೇ ಏನೇ ಆಕ್ಷೇಪ ವ್ಯಕ್ತಪಡಿಸಿದರೂ, ಕೋರ್ಟ್‌ನ ಸೂಚನೆಯಂತೆ ಗಣತಿಗೆ ಅಗತ್ಯವಾದ ಮಾಹಿತಿಯನ್ನು ಮಾತ್ರ ನೀಡಿ.
ಇದನ್ನೂ ಓದಿ: ಇಸ್ರೇಲ್‌ vs ಹಮಾಸ್‌: ಟ್ರಂಪ್‌ರ ಶಾಂತಿ ಯೋಜನೆಯ ಕೆಲವು ಭಾಗಗಳನ್ನು ಒಪ್ಪಿಕೊಂಡ ಹಮಾಸ್‌


ಆದರೆ, ಸಮೀಕ್ಷೆಯನ್ನು ವಿರೋಧಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಎಲ್ಲರೂ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಇಲಾಖೆಯವರು ತಮ್ಮ ಕೆಲಸವನ್ನು ಮಾಡಲಿ, ಆದರೆ ಎಲ್ಲರೂ ಸರ್ವೇನಲ್ಲಿ ಸಹಕರಿಸಬೇಕು, ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದರು.
C J Enterprise Womens Pure Banarasi Soft Silk Saree Kanjivaram Style Sarees With Blouse Piece For Wedding (KeriGola-51)