Skip to main content
ವಿಡಿಯೋ
1/2
general

ನಮ್ಮ ಮೆಟ್ರೊಗೆ ‘ಬಸವ ಮೆಟ್ರೊ’ ನಾಮಕರಣ: ಸಿಎಂ ಶಿಫಾರಸು..!

By Sushmitha R
ನಮ್ಮ ಮೆಟ್ರೊಗೆ ‘ಬಸವ ಮೆಟ್ರೊ’ ನಾಮಕರಣ: ಸಿಎಂ ಶಿಫಾರಸು..!

ಬೆಂಗಳೂರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ನಮ್ಮ ಮೆಟ್ರೊಗೆ ವಿಶ್ವಗುರು ಬಸವಣ್ಣನವರ ಹೆಸರು ಇಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ನಮ್ಮ ಮೆಟ್ರೊಗೆ ವಿಶ್ವಗುರು ಬಸವಣ್ಣನವರ ಹೆಸರು ಇಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ. ಬಸವ ಸಂಸ್ಕೃತಿ ಅಭಿಯಾನ-2025ರ ಸಮಾರೋಪ ಸಮಾರಂಭದಲ್ಲಿ, ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ವರ್ಷಾಚರಣೆಯ ಸಂದರ್ಭದಲ್ಲಿ 301 ಶರಣರು, ಗುರುಗಳು ಮತ್ತು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಇದನ್ನು ಓದಿ:ವಾಷಿಂಗ್ಟನ್: ಆಂಥ್ರೊಪಿಕ್‌ನ ಹೊಸ ಸಿಟಿಒ ಆಗಿ ಬಾಗಲಕೋಟೆಯ ರಾಹುಲ್‌ ಪಾಟೀಲ್‌ ನೇಮಕ..!!

ನಾನು ಬಸವಣ್ಣನವರ ತತ್ವಗಳ ಅಭಿಮಾನಿ. ಅವರ ತತ್ವಗಳಲ್ಲಿ ನಂಬಿಕೆ ಮತ್ತು ಬದ್ಧತೆ ಇಟ್ಟಿದ್ದೇನೆ. ಬಸವ ತತ್ವ ಶಾಶ್ವತವಾಗಿದ್ದು, ಯಾವಾಗಲೂ ಪ್ರಸ್ತುತವಾಗಿರುತ್ತದೆ. ಸಹಬಾಳ್ವೆ ಮತ್ತು ಸಹಿಷ್ಣುತೆಯನ್ನು ಬಸವಣ್ಣನವರು ಜೀವನಪೂರ್ತಿ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ, ಎಂದು ಸಿದ್ದರಾಮಯ್ಯ ಹೇಳಿದರು. Hisense 80 cm (32 inches) E5Q Series HD Ready Smart QLED Google TV 32E5Q

ಬಸವ ಜಯಂತಿಯಂದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸಲು ಭಾಗ್ಯ ಯೋಜನೆಗಳು ಮತ್ತು ಗ್ಯಾರಂಟಿಗಳ ಮೂಲಕ ಕೆಲಸ ಮಾಡಿದ್ದಾರೆ ಎಂದರು. ಜಾತಿಯಿಂದ ಯಾರೂ ಶ್ರೇಷ್ಠರಲ್ಲ. ಪ್ರತಿಭೆ ಮತ್ತು ಜ್ಞಾನ ಯಾವುದೇ ಜಾತಿಯ ಸ್ವತ್ತಲ್ಲ.

ಬಸವಣ್ಣನವರ ಜಾತಿ-ವರ್ಗ ರಹಿತ ಸಮಾಜದ ಕನಸನ್ನು ಸರ್ಕಾರ ಗೌರವಿಸಿದೆ. ನಾವೆಲ್ಲರೂ ಮೊದಲು ಮನುಷ್ಯರು, ಆನಂತರ ಭಾರತೀಯರು. ಜಾತಿ, ಧರ್ಮದ ತಾರತಮ್ಯವನ್ನು ಸಹಿಸಬಾರದು, ಎಂದು ಕರೆ ನೀಡಿದರು.ಇದನ್ನು ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಫಾಕ್ಸ್‌ಕಾನ್ ಮುಖ್ಯಸ್ಥ ರಾಬರ್ಟ್‌ ವೂ ಭೇಟಿ!

ಸಂವಿಧಾನ ಮತ್ತು ಶರಣ ಸಂಸ್ಕೃತಿಯ ಆಶಯಗಳು ಒಂದೇ ಎಂದು ಒತ್ತಿ ಹೇಳಿದ ಸಿದ್ದರಾಮಯ್ಯ, ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗಿನಿಂದ ಬಸವಣ್ಣನವರ ಅನುಯಾಯಿಯಾಗಿದ್ದೇನೆ. ಅಂಬೇಡ್ಕರ್ ಅವರ ಸಂವಿಧಾನವೂ ಬಸವ ತತ್ವಗಳನ್ನೇ ಪ್ರತಿಬಿಂಬಿಸುತ್ತದೆ, ಎಂದರು.

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದು, ಈ ತತ್ವಗಳಿಗೆ ಗೌರವ ಸೂಚಿಸಲು ಎಂದು ತಿಳಿಸಿದರು. ನಮ್ಮ ಮೆಟ್ರೊಗೆ ‘ಬಸವ ಮೆಟ್ರೊ’ ಎಂದು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವೆವು. ಇದು ರಾಜ್ಯದ ಯೋಜನೆಯಾಗಿದ್ದರೆ ಇವತ್ತೇ ಘೋಷಿಸುತ್ತಿದ್ದೆ, ಎಂದು ಹೇಳಿದರು.ಇದನ್ನು ಓದಿ: ಮಣಿಪುರದಲ್ಲಿ ಆರು ಉಗ್ರರ ಬಂಧನ: ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಜಪ್ತಿ..!