ಮೈಸೂರು: ಬಿಹಾರ ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕದ ರಾಜಕಾರಣದಲ್ಲಿ ಗೊಂದಲ ಮತ್ತು ಬದಲಾವಣೆ ಖಚಿತ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು. ಭಾನುವಾರ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್‌ನಿಂದ ನಾಯಕತ್ವ ಬದಲಾವಣೆಯ ಕುರಿತು ಯಾವುದೇ ನಿಷೇಧವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ವರಿಷ್ಠರು ಹೇಳಿದ್ದಾರೆ.ಹೈಕಮಾಂಡ್ ತೀರ್ಮಾನಿಸುತ್ತದೆ ಎಂದಿರುವುದರಿಂದ ಬದಲಾವಣೆ ಸ್ಪಷ್ಟವಾಗಿದೆ, ಎಂದರು.“ರಾಜ್ಯದ ರಾಜಕೀಯ ಕ್ರಾಂತಿಗೆ ಜಾತಿವಾರು ಸಮೀಕ್ಷೆಯೂ ಕಾರಣವಾಗಿರಬಹುದು ಎಂದು ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಇತ್ತೀ