Skip to main content
ವಿಡಿಯೋ
1/2
general

ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

By Pavitra Ganapathi Baradavalli
ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ರಾಯಾ ಬುಜುರ್ಗ್ ಗ್ರಾಮದಲ್ಲಿ ಮುಸ್ಲಿಮ್ ಸಮುದಾಯದವರೇ ಗೌಸುಲ್ಬರಾ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ್ದಾರೆ. ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಈ ಮಸೀದಿಯನ್ನು ತೆರವುಗೊಳಿಸಲು ಜಿಲ್ಲಾಡಳಿತವು 4 ದಿನಗಳ ಗಡುವು ನೀಡಿತ್ತು.

ಲಕ್ನೋ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ರಾಯಾ ಬುಜುರ್ಗ್ ಗ್ರಾಮದಲ್ಲಿ ಮುಸ್ಲಿಮ್ ಸಮುದಾಯದವರೇ ಗೌಸುಲ್ಬರಾ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ್ದಾರೆ. ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಈ ಮಸೀದಿಯನ್ನು ತೆರವುಗೊಳಿಸಲು ಜಿಲ್ಲಾಡಳಿತವು 4 ದಿನಗಳ ಗಡುವು ನೀಡಿತ್ತು.ಇದನ್ನೂ ಓದಿ: ಬಿಹಾರ ಚುನಾವಣೆ: 17 ಹೊಸ ಉಪಕ್ರಮಗಳೊಂದಿಗೆ ಚುನಾವಣಾ ಆಯೋಗದ ಕ್ರಾಂತಿಕಾರಿ ಹೆಜ್ಜೆ


ಈ ಗಡುವು ಮುಗಿಯುತ್ತಿದ್ದಂತೆ, ಮಸೀದಿ ಸಮಿತಿಯ ಸದಸ್ಯರು ಸ್ವತಃ ಮಸೀದಿಯನ್ನು ಭಾನುವಾರ ನೆಲಸಮ ಮಾಡಿದ್ದಾರೆ.ಜಿಲ್ಲಾಡಳಿತವು ಮಸೀದಿಯನ್ನು ಕೆಡವಲು ಮುಂದಾಗಿತ್ತು. ಆದರೆ, ಮಸೀದಿ ಸಮಿತಿಯ ಸದಸ್ಯರು, ನಾವೇ ಈ ಕೆಲಸ ಮಾಡುತ್ತೇವೆ, 4 ದಿನಗಳ ಸಮಯ ನೀಡಿ ಎಂದು ಕೋರಿದ್ದರು. ಅಧಿಕಾರಿಗಳು ಒಪ್ಪಿಗೆ ನೀಡಿದ ನಂತರ, ಮುಸ್ಲಿಮರು ಸ್ವಯಂಪ್ರೇರಿತವಾಗಿ ಈ ಕಾರ್ಯವನ್ನು ನಿರ್ವಹಿಸಿದರು.
ಇದನ್ನೂ ಓದಿ: ಬಿಹಾರ ಚುನಾವಣೆ ನಂತರ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ: ಬಿಜೆಪಿ ಅಧ್ಯಕ್ಷ ವಿಜಯೇಂದ್ರ..!


ಇದಕ್ಕೂ ಮುಂಚೆ, ಅಕ್ಟೋಬರ್ 2ರಂದು ಇದೇ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಮದುವೆ ಮಂಟಪವನ್ನು ಪೊಲೀಸರ ಸಮ್ಮುಖದಲ್ಲಿ ಜಿಲ್ಲಾಡಳಿತ ಕೆಡವಿತ್ತು.ಈ ಘಟನೆಯು ಗ್ರಾಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸ್ಥಳೀಯರು ಧಾರ್ಮಿಕ ಸಾಮರಸ್ಯ ಕಾಪಾಡುವಂತೆ ಕರೆ ನೀಡಿದ್ದಾರೆ. ಮಸೀದಿ ಕೆಡವಿಕೆಯಿಂದ ಯಾವುದೇ ಕಾನೂನು ಸುವ್ಯವಸ್ಥೆ ಭಂಗವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕ್ರಮವು ರಾಜ್ಯದಲ್ಲಿ ಅನಧಿಕೃತ ನಿರ್ಮಾಣಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
SIRIL Women's Shimmer Chiffon Sequence Embroidery Saree With Unstitched Blouse Piece for Wedding and Parties