Skip to main content
ವಿಡಿಯೋ
1/2
health

ರೋಗಿಗಳಿದ್ದ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ: 6 ಮಂದಿ ಸಾ**ವು, ಐವರ ಸ್ಥಿತಿ ಗಂಭೀರ.! ನಿರ್ಲಕ್ಷ್ಯಕ್ಕೆ ಕಾರಣವೇನು ಗೊತ್ತಾ?

By Shravanthi R
ರೋಗಿಗಳಿದ್ದ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ: 6 ಮಂದಿ ಸಾ**ವು, ಐವರ ಸ್ಥಿತಿ ಗಂಭೀರ.! ನಿರ್ಲಕ್ಷ್ಯಕ್ಕೆ ಕಾರಣವೇನು ಗೊತ್ತಾ?

ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಐಸಿಯುವಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಬೆಂಕಿ ಕಾಣಿಸಿಕೊಂಡು ಆರು ರೋಗಿಗಳು ಸಾವನ್ನಪ್ಪಿದ್ದು, ಐದು ಮಂದಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಕಾರಿ ಅನಿಲಗಳಿಂದ ಅಪಾಯ ಹೆಚ್ಚಾದ ಕಾರಣ 24 ರೋಗಿಗಳನ್ನು ತುರ್ತುವಾಗಿ ಸ್ಥಳಾಂತರಿಸಲಾಗಿದ್ದು, ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ತಿಳಿಸಿದೆ.

ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯ ತೀವ್ರ ನಿಗಾ ಘಟಕ (ICU)ದಲ್ಲಿ ಭಾನುವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಈ ದುರಂತದಲ್ಲಿ ಆರು ರೋಗಿಗಳು ಮೃತಪಟ್ಟಿರುವ ಮತ್ತು ಐದು ಜನರ ಸ್ಥಿತಿ ಗಂಭೀರವಾಗಿರುವ ದಾರಣ ಘಟನೆ ನಡೆದಿದೆ. ಬೆಂಕಿ ತೀವ್ರವಾಗಿ ಹರಡಿ, ವಿಷಕಾರಿ ಅನಿಲಗಳು ಹೊರಬಂದಿದ್ದರಿಂದ 24 ರೋಗಿಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಎಸ್‌ಎಂಎಸ್ ಆಸ್ಪತ್ರೆಯ ಟ್ರಾಮಾ ಸೆಂಟರ್‌ನ ಎರಡನೇ ಮಹಡಿಯಲ್ಲಿ ಎರಡು ತೀವ್ರ ನಿಗಾ ಘಟಕಗಳಿವೆ ಎನ್ನಲಾಗಿದೆ. ಒಂದು ಟ್ರಾಮಾ ಐಸಿಯು ಮತ್ತು ಇನ್ನೊಂದು ಸೆಮಿ-ಐಸಿಯು. ಒಟ್ಟು 24 ರೋಗಿಗಳಿದ್ದರು, ಇವರಲ್ಲಿ 11 ಜನ ಟ್ರಾಮಾ ಐಸಿಯುನಲ್ಲಿದ್ದರು ಮತ್ತು 13 ಜನ ಸೆಮಿ-ಐಸಿಯುನಲ್ಲಿದ್ದರು. ಟ್ರಾಮಾ ಐಸಿಯುನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿದೆ ಎಂದು ಟ್ರಾಮಾ ಸೆಂಟರ್ ಉಸ್ತುವಾರಿ ಅನುರಾಗ್ ಧಾಕಡ್ ಎಂಬುವವರು ತಿಳಿಸಿದ್ದಾರೆ. boAt Storm Call 3 w/TBT Navigation, Daily Activity Tracker, DIY Watch Face Studio,700+ Active Modes, 1.83" (4.6 cm) HD Display Fitness Smart Watch for Men & Women(Active Black)

ರಕ್ಷಣಾ ಕಾರ್ಯಾಚರಣೆ -

ಬೆಂಕಿ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯ ಸಿಬ್ಬಂದಿ, ನರ್ಸ್‌ಗಳು ಮತ್ತು ವಾರ್ಡ್ ಸಿಬ್ಬಂದಿ ರೋಗಿಗಳನ್ನು ಟ್ರಾಲಿಗಳಲ್ಲಿ ಕೊಂಡೊಯ್ದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ, ಆರು ರೋಗಿಗಳ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (ಸಿಪಿಆರ್)  ಮೂಲಕ ಅವರನ್ನು ಉಳಿಸಲು ಯತ್ನಿಸಲಾಗಿದ್ದರೂ, ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಆರು ಜನರಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ಕು ಜನ ಪುರುಷರಾಗಿದ್ದಾರೆ. ಘಟನೆ ಬಳಿಕ ಪೋಲಿಸ್‌ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಮತ್ತು ಶೋಧಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉತ್ತರ ಬಂಗಾಳದಲ್ಲಿ ಪ್ರವಾಹ: ಪ್ರವಾಸಿ ತಾಣಗಳು ಅತಂತ್ರ, ಮಿರಿಕ್ ಪಟ್ಟಣ ತೀವ್ರ ಹಾನಿ.!