Skip to main content
ವಿಡಿಯೋ
1/3
cinema

'ಕಾಂತಾರ ಚಾಪ್ಟರ್ 1' ಚಿತ್ರ ವೀಕ್ಷಣೆ ವೇಳೆ 'ದೈವ ಅವಾಹನೆ' ನಡೆಸಿದರೆ ಕ್ರಮ: ಚಿತ್ರತಂಡ ಎಚ್ಚರಿಕೆ

By Gireesh Vasishta
'ಕಾಂತಾರ ಚಾಪ್ಟರ್ 1' ಚಿತ್ರ ವೀಕ್ಷಣೆ ವೇಳೆ 'ದೈವ ಅವಾಹನೆ' ನಡೆಸಿದರೆ ಕ್ರಮ: ಚಿತ್ರತಂಡ ಎಚ್ಚರಿಕೆ

ಅದಕ್ಕೆ ಸಂಬಂಧಿಸಿದಂತೆ ಒಂದು ಚಿತ್ರಮಂದಿರಲ್ಲಿ ಒಬ್ಬ ವ್ಯಕ್ತಿ ದೈವದ ವೇಷಧರಿಸಿ ಓಡಾಡಿದ್ದ ನಂತರ ಮತ್ತೊಬ್ಬ ವ್ಯಕ್ತಿ ದೈವದ ಆಹ್ವಾಹನೆ ಮಾಡಿದ್ದ ಇದರಿಂದ ದೈವಾರಾಧನೆ ನಡೆಸುವ ಸ್ಥಳಗಳ ಮುಖಂಡರು ರಿಷಭ್‌ ಅವರಿಗೆ ಪತ್ರ ಬರೆದಿದ್ದರು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಈ ತಿರ್ಮಾನ ಮಾಡಿದೆ ಎನ್ನಲಾಗಿದೆ.

ಬೆಂಗಳೂರು (.07): ಕಾಂತಾರ ಚಿತ್ರ ದೇಶಾದ್ಯಂತ ಭರ್ಜರಿ ಯಶಸ್ಸುಗಳಿಸಿ ಮುನ್ನುಗ್ಗುತ್ತಿರುವ ಸಂಧರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ತೋರುತ್ತಿರುವ ಅತಿಯಾದ ವರ್ತನೆ ನೋಡಿ ಚಿತ್ರತಂಡ ಗಂಭೀರ ಎಚ್ಚರಿಕೆ ನೀಡಿದೆ. ದೈವ ಅವಾಹನೆ  ರೀತಿಯ ದೃಶ್ಯಗಳನ್ನು ಅನುಕರಿಸುವ ಮೂಲಕ ಕೆಲವರು ಹುಚ್ಚಾಟ ನಡೆಸಿರುವುದು ಚಿತ್ರತಂಡದ ಗಮನಕ್ಕೆ ಬಂದಿದ್ದು, ಇದು 'ನಂಬಿಕೆಗೆ ಮಾಡುವ ಅಪಚಾರವಾಗಿದೆ' ಎಂದು ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.WEET Cotton T-Shirt and Pyjama Set for Men,Night Wear for Men,Men's Pyjama Set 122

ಅದಕ್ಕೆ ಸಂಬಂಧಿಸಿದಂತೆ ಒಂದು ಚಿತ್ರಮಂದಿರಲ್ಲಿ ಒಬ್ಬ ವ್ಯಕ್ತಿ ದೈವದ ವೇಷಧರಿಸಿ ಓಡಾಡಿದ್ದ ನಂತರ ಮತ್ತೊಬ್ಬ ವ್ಯಕ್ತಿ ದೈವದ ಆಹ್ವಾಹನೆ ಮಾಡಿದ್ದ ಇದರಿಂದ ದೈವಾರಾಧನೆ ನಡೆಸುವ ಸ್ಥಳಗಳ ಮುಖಂಡರು ರಿಷಭ್‌ ಅವರಿಗೆ ಪತ್ರ ಬರೆದಿದ್ದರು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಈ ತಿರ್ಮಾನ ಮಾಡಿದೆ ಎನ್ನಲಾಗಿದೆ.ಇದನ್ನು ಓದಿ: ಮೋರಿ ವಿಚಾರದಲ್ಲಿ ಕಿರಿಕ್: ಲಾಯರ್ ಜಗದೀಶ್ ಮೇಲೆ ಮತ್ತೊಂದು FIR

ಚಿತ್ರತಂಡದಿಂದ ಜಾಲತಾಣದಲ್ಲಿ ಮನವಿ:

ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚಿತ್ರತಂಡವು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಪೋಸ್ಟರ್ ಮೂಲಕ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದೆ. 'ಪ್ರೇಕ್ಷಕರೇ... ಅವಾಹನೆ ಮಾಡಿಕೊಳ್ಳುವುದನ್ನು ಬಿಡಿ' ಎಂಬ ಶೀರ್ಷಿಕೆಯಡಿ ಈ ಮನವಿಯನ್ನು ಪ್ರಕಟಿಸಲಾಗಿದೆ. ಈ ಮನವಿಯಲ್ಲಿ, 'ದೈವಾರಾಧನೆ ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವದ ಬಗ್ಗೆಗಿನ ಗೌರವ ಮತ್ತು ಅದರ ಪೂಜೆ ಮತ್ತು ಆರಾಧನೆಗೆ ಚ್ಯುತಿ ಬಾರದಂತೆ ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ಕಾಂತಾರ ಸಿನಿಮಾದಲ್ಲಿ ತೋರಿಸಿದ್ದೇವೆ' ಎಂದು ಸ್ಪಷ್ಟಪಡಿಸಲಾಗಿದೆ.

ಕ್ರಮದ ಸ್ಪಷ್ಟ ಎಚ್ಚರಿಕೆ:

ಬೆಂಗಳೂರು ತುಳುಕೂಟದಂತಹ ಸಂಘಟನೆಗಳು ಕೂಡ ಅಭಿಮಾನಿಗಳಿಗೆ ಬುದ್ಧಿ ಹೇಳುವಂತೆ ಚಿತ್ರತಂಡಕ್ಕೆ ಮನವಿ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಚಿತ್ರತಂಡ ತಕ್ಷಣ ಕ್ರಮಕ್ಕೆ ಮುಂದಾಗಿದೆ. ರಿಷಬ್ ಶೆಟ್ಟಿಯವರ ಪರವಾಗಿ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಈ ಕುರಿತು ಅಂತಿಮ ಎಚ್ಚರಿಕೆ ನೀಡಿದ್ದು, 'ಇನ್ನು ಮುಂದೆ ಸೇರಿ ಇತರ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ ಯಾರಾದರೂ ದೈವಗಳನ್ನ ಅನುಕರಿಸಿದರೆ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಸ್ಪಷ್ಟವಾಗಿ ಘೋಷಣೆ ಮಾಡಿದೆ. ಅಭಿಮಾನಿಗಳ ಹುಚ್ಚಾಟ ಇನ್ನುಮುಂದಾದರು ನಿಲ್ಲುತ್ತದೆಯೇ ನೋಡಬೇಕಿದೆ.