Skip to main content
ವಿಡಿಯೋ
1/2
general

ಖಾಸಗಿ ಬಸ್ - ಲಾರಿ ಮುಖಾಮುಖಿ ಡಿಕ್ಕಿ. ಸ್ಥಳದಲ್ಲೇ 3 ಜನ ದುರ್ಮರಣ

By Gireesh Vasishta
ಖಾಸಗಿ ಬಸ್ - ಲಾರಿ ಮುಖಾಮುಖಿ ಡಿಕ್ಕಿ. ಸ್ಥಳದಲ್ಲೇ 3 ಜನ ದುರ್ಮರಣ

ಘಟನೆಯ ಭೀಕರತೆಗೆ ಲಾರಿಯಲ್ಲಿದ್ದ ಸಿಮೆಂಟ್ ಮೂಟೆಗಳು ರಸ್ತೆಗೆ ಬಿದ್ದು ರಸ್ತೆಯ ತುಂಬೆಲ್ಲ ಹರಡಿದೆ. ಇದನ್ನು ನೋಡಲು ಸಾರ್ವಜನಿಕರ ದಂಡೆ ಕಿಕ್ಕಿರಿದು ನಿಂತಿತ್ತು.

ಹುಣಸೂರು: ಬೆಳಗಿನಜಾವದ ಚಾಲನೆ ಚಾಲಕರಿಗೆ ಬಲು ಕಷ್ಟದ ಚಾಲನೆ ಆಗಿರುತ್ತದೆ ಏಕೆಂದರೆ ಒಂದು ಕಡೆ ನಿದ್ದೆಯ ಸಮಯ ಮತ್ತೊಂದು ಕಡೆ ಸುತ್ತ ಬರಿ ಕತ್ತಲು ಮತ್ತು ಹಿಮ. ಹೀಗಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹುಣಸೂರು ತಾಲೂಕಿನ ಮಧುಗಿರಿ ಕೊಪ್ಪಲ್ ಗೇಟಿನ ಬಳಿ ಇದೆ ಕಾರಣಕ್ಕೆ ಅಪಘಾತ ನಡೆದಿದ್ದು ಮೂವರು ಸಾವನಪ್ಪಿದ್ದಾರೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women


ಹುಣಸೂರು ತಾಲೂಕಿನ ಮಧುಗಿರಿ ಕೊಪ್ಪಲ್ ಗೇಟಿನ ಬಳಿ ಈ ಘಟನೆ ನಡೆದಿದ್ದು ಬೆಳಗಿನ ಜಾವ ನಾಲ್ಕು ಮೂವತ್ತರ ರಲ್ಲಿ ನಡೆದ ಘಟನೆಯಾಗಿದೆ. ಮೈಸೂರಿನಿಂದ ಹುಣಸೂರಿನ ಕಡೆಗೆ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಹಾಗೂ ಕೇರಳದ ಕ್ಯಾಲಿಕಟ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಬಸ್ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅನೇಕರಿಗೆ ಗಂಭೀರ ಗಾಯವಾಗಿದೆ ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನು ಓದಿ: 14 ಎಕರೆ, 350 ಕೋಟಿ ಮೌಲ್ಯದ ನೈಸ್ ಜಮೀನಿನ ಕಬಳಿಕೆ: ಅಧಿಕಾರಿಗಳ ಶಾಮೀಲು?

 

ಘಟನೆಯ ಭೀಕರತೆಗೆ ಲಾರಿಯಲ್ಲಿದ್ದ ಸಿಮೆಂಟ್ ಮೂಟೆಗಳು ರಸ್ತೆಗೆ ಬಿದ್ದು ರಸ್ತೆಯ ತುಂಬೆಲ್ಲ ಹರಡಿದೆ. ಇದನ್ನು ನೋಡಲು ಸಾರ್ವಜನಿಕರ ದಂಡೆ ಕಿಕ್ಕಿರಿದು ನಿಂತಿತ್ತು.