ವಿಶಾಖಪಟ್ಟಣಂನ ACA-VDCA ಸ್ಟೇಡಿಯಂನಲ್ಲಿ ಅಕ್ಟೋಬರ್ 9, 2025 ರಂದು ನಡೆದ ರೋಚಕ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಭಾರತವನ್ನು 3 ವಿಕೆಟ್ಗಳಿಂದ ಸೋಲಿಸಿ, 252 ರನ್ಗಳ ಕಠಿಣ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ನಾಡಿನ್ ಡಿ ಕ್ಲರ್ಕ್‌ರ ವಿಸ್ಫೋಟಕ, ಅಜೇಯ 84 ರನ್ಗಳ (54 ಎಸೆತಗಳಲ್ಲಿ) ಪ್ರದರ್ಶನ, ಭಾರತದ ರಿಚಾ ಘೋಷ್‌ರ 94 ರನ್ಗಳನ್ನು ಮೀರಿಸಿ, ಆತಿಥೇಯರಿಗೆ ಟೂರ್ನಮೆಂಟ್ನ ಮೊದಲ ಸೋಲಿನ ರುಚಿಯನ್ನು ತೋರಿಸಿತು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat
102 ಕ್ಕೆ 6 ವಿಕಟ್: ಅಬ್ಬರಿಸಿದ ರಿಚಾ ಘೋಷ್;
ಭಾರತ 102ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಂಷ್ಟಕ್ಕೆ ಸಿಲುಕ್ಕಿತ್ತು ಆಗ 8ನೇ ವಿಕೆಟ್ ಆಗಿ ಕ್ರಿಜ್‌ಗೆ ಇಳಿದ ರಿಚಾ ಸೌತ್ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದರು. 11 ಪೋರ್ ಮತ್ತು 06 ಸಿಕ್ಸ್ ಪೇರಿಸಿ ಮನರಂಜಿಸಿದರು ಮತ್ತು ತಂಡಕ್ಕೆ ಆಸರೆಯಾದರು. ಓಪನರ್ ಬ್ಯಾಟರ್ಸ್‌ಗಳಾದ ಮಂಧಾನ ಮತ್ತು ರಾವಲ್ ಉತ್ತಮ ಓಪನಿಂಗ್ ನೀಡಿದರು.ಇದನ್ನು ಓದಿ: ಖಾಸಗಿ ಬಸ್ - ಲಾರಿ ಮುಖಾಮುಖಿ ಡಿಕ್ಕಿ. ಸ್ಥಳದಲ್ಲೇ 3 ಜನ ದುರ್ಮರಣ
ರಿಚಾ ಘೋಷ್- 94 (77), ಸ್ನೇಹ್ ರಾಣಾ 33 (24), ಸ್ಮೃತಿ ಮಂಧಾನ 23 (32)
ಒಟ್ಟು: 251/10 (49.5 ಓವರ್)
ನಂ. 8 ರ ಹೋರಾಟ: ಡಿ ಕ್ಲರ್ಕ್‌ರ ಜಯ:
ನಂ. 8ರಲ್ಲಿ ರಿಚಾ ಘೋಷ್‌ರ ಶಕ್ತಿಯುತ ಬ್ಯಾಟಿಂಗ್ ಭಾರತಕ್ಕೆ ಗೌರವಾನ್ವಿತ ಸ್ಕೋರ್ ತಂದಿತಾದರೂ, ಡಿ ಕ್ಲರ್ಕ್‌ರ ಒತ್ತಡದಲ್ಲಿ ಮಿಂಚಿದ ಆಟ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದಿತು. ವೊಲ್ವಾರ್ಡ್(ನಾಯಕಿ) ಹೇಳಿದಂತೆ, "ನಾನು ನನ್ನ ವೃತ್ತಿಜೀವನದಲ್ಲಿ ಇಂತಹದ್ದನ್ನು ನೋಡಿಲ್ಲ ಎಂದರು." ಡಿ ಕ್ಲರ್ಕ್, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು, "ನನಗೆ ಒತ್ತಡದಲ್ಲಿ ಆಡುವುದು ಮತ್ತು ವಿಶ್ವಕಪ್‌ನಲ್ಲಿ ಆಡುವುದು ಇಷ್ಟ" ಎಂದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಸ್ಕೋರ್‌ಕಾರ್ಡ್ ಮುಖ್ಯಾಂಶಗಳು:
ನಾಡಿನ್ ಡಿ ಕ್ಲರ್ಕ್-84* (54), ಲಾರಾ ವೊಲ್ವಾರ್ಡ್ 70 (111), ಕ್ಲೋಯ್ ಟ್ರಯಾನ್49 (66).
ಒಟ್ಟು- 252/7 (48.5 ಓವರ್)
ಒಟ್ಟಾರೆ ಪಂದ್ಯ ಬಲು ರೋಚಕವಾಗಿತ್ತು, ಆರಂಭದಲ್ಲಿ ಭಾರತದ ರಿಚಾ ಸಿಕ್ಸ್ ಮತ್ತು ಫೋರ್‌ಗಳಿಂದ ಮನರಂಜಿಸಿದರೆ ಚೇಸಿಂಗ್‌ನಲ್ಲಿ ಡಿ ಕ್ಲರ್ಕ್ ಅದ್ಭುತ ಆಟವಾಡಿ ರಂಜಿಸಿ ಗೆಲುವನ್ನು ಭಾರತದಿಂದ ಕಸಿದುಕೊಂಡರು.