ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆದು ಭಕ್ತಾದಿಗಳಿಗೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ನೆನ್ನೆ ತೆರೆದಿದ್ದು ಸಾರ್ವಜನಿಕರಿಗೆ ದರ್ಶನದ ಅವಕಾಶ ದೊರಕಿದೆ. ಬೆಳಿಗ್ಗೆ ಆರು ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಾರ್ವಜನಿಕರಿಗೆ ದರ್ಶನಕ್ಕಾಗಿ ವ್ಯವಸ್ಥೆಯಿದೆ. ಸರದಿ ಸಾಲು ಆರು ಗಂಟೆಗೆ ಮೊದಲೇ ಆರಂಭವಾಗುತ್ತದೆ. ಸಂಜೆ ನಾಲ್ಕು ಗಂಟೆಗೆ ಸರತಿ ಸಾಲಿಗೆ ನಿಲ್ಲುವುದನ್ನು ಬಂದ್ ಮಾಡಲಾಗುತ್ತದೆ. ಸಂಜೆ ಏಳು ಗಂಟೆಯವರೆಗೂ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.Monte Carlo Mens Solid Lace Up Genuine Leather Casual Shoes (201803FW)
ಗುರುವಾರ ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಸಮೇತ ಮುಖ್ಯ ಅರ್ಚಕರಾದ ನಾಗರಾಜು ಅವರ ನೇತೃತ್ವದಲ್ಲಿ ದೇಗುಲದ ಬಾಗಿಲನ್ನು ತೆರೆಯಲಾಯಿತು. ಅರ್ಚಕರಿಂದ ಪೂಜೆ ನೆರವೇರಿದ ಬಳಿಕ ಗರ್ಭಗುಡಿ ಬಾಗಿಲು ತೆರೆದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ಹಾಗೂ ಹಾಸನದ ನೂತನ ಸಂಸದರಾದ ಶ್ರೇಯಸ್ ಪಟೇಲ್ ಡಿಸಿ ಹಾಗೂ ಎಸಿಪಿ ಹಾಜರಿದ್ದರು.ಇದನ್ನು ಓದಿ: ಮಹಿಳಾ ವಿಶ್ವಕಪ್ 2025: ಭಾರತ vs ದಕ್ಷಿಣ ಆಫ್ರಿಕಾ: ಭಾರತ 102ಕ್ಕೆ 6 ವಿಕೆಟ್; ಅಬ್ಬರಿಸಿದ ರಿಚಾ ಘೋಷ್(94 ರನ್)
ಅಕ್ಟೋಬರ್ 23ರ ವರೆಗೆ ಹಾಸನಾಂಬೆ ದೇವಿ ಜಾತ್ರೆ ನಡೆಯಲಿದೆ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹಾಸನ ಡಿಸಿ ಕಚೇರಿಯ ಮಂಡಳಿ ಮಾಹಿತಿ ನೀಡಿದೆ.
ಭಕ್ತಾದಿಗಳು ದರ್ಶನವನ್ನು ಪಡೆದು ಹಿಂದಿರುಗುವಾಗ ಅವರಿಗೆ ವಿಶೇಷ ಅನುಭವವಿರಲಿ ಎಂದು ಸಂಜೆ 6:00ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6:30 ರಿಂದ ರಾತ್ರಿ 10:37 ವರೆಗೂ ಹೇಮಾವತಿ ಪ್ರತಿಮೆ ಆವರಣದಲ್ಲಿ ಜಾನಪದ ಕಾರ್ಯಕ್ರಮ, ಸಂಗೀತ, ಸಾಹಿತ್ಯ, ನೃತ್ಯ ಸಾಂಸ್ಕೃತಿಕ, ಕಾರ್ಯಕ್ರಮಗಳ ನಡೆಯಲಿದೆ.
ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ:
ಗರ್ಭಗುಡುಗಿ ಪ್ರವೇಶಿಸಲು ಪುರುಷರು ಪಂಚೆ, ದೋತಿ ಅಂತಹ ಅಥವಾ ಪೈಜಾಮದಂತಹ ಹಾಗೂ ಮಹಿಳೆಯರು ಸೀರೆ ಮತ್ತು ಚೂಡಿದಾರ ದಂತಹ ಸಾಂಪ್ರದಾಯಿಕ ಉಡುಗೆಯಲ್ಲಿ ದರ್ಶನ ಪಡೆಯಬೇಕು. ಕರ್ತವ್ಯ ನಿರತ ಸಿಬ್ಬಂದಿಗಳು ಸಮವಸ್ತ್ರ ಸಹಿತವಾಗಿ ಗರ್ಭಗುಡಿ ಪ್ರವೇಶಿಸಲು ಅವಕಾಶವಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸೂಚಿಸುತ್ತಾರೆ.