Skip to main content
ವಿಡಿಯೋ
1/3
crime

ಲಾಡ್ಜ್‌ನಲ್ಲಿ ಯುವಕ ಯುವತಿ ಕೊಲೆ ಕೇಸ್‌ಗೆ ಟ್ವಿಸ್ಟ್‌…!!

By Pavitra Ganapathi Baradavalli
ಲಾಡ್ಜ್‌ನಲ್ಲಿ ಯುವಕ ಯುವತಿ ಕೊಲೆ ಕೇಸ್‌ಗೆ ಟ್ವಿಸ್ಟ್‌…!!

ಲಾಡ್ಜ್‌ನಲ್ಲಿ ಯುವಕ ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸ್‌ ತನಿಖೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಲಾಡ್ಜ್‌ನಲ್ಲಿ ಕೊಲೆಯಾದ ಯುವತಿಗೆ ಈಗಾಗಲೇ ಮದುವೆಯಾಗಿದೆ ಅಲ್ಲದೇ ಇಬ್ಬರು ಮಕ್ಕಳು ಸಹ ಇದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಬೆಂಗಳೂರು:ಲಾಡ್ಜ್‌ನಲ್ಲಿ ಯುವಕ ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸ್‌ ತನಿಖೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಲಾಡ್ಜ್‌ನಲ್ಲಿ ಕೊಲೆಯಾದ ಯುವತಿಗೆ ಈಗಾಗಲೇ ಮದುವೆಯಾಗಿದೆ ಅಲ್ಲದೇ ಇಬ್ಬರು ಮಕ್ಕಳು ಸಹ ಇದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಪತಿ ಹಾಗೂ ಮಕ್ಕಳನ್ನು ಬಿಟ್ಟು ಕೆಲಸಕ್ಕೆಂದು ಬೆಂಗಳೂರಿಗೆ ಬಂದಿರುತ್ತಾರೆ.ಇದನ್ನೂ ಓದಿ: ಈ ಕಾರಣದಿಂದಲೇ ಕೆಲವು ಚಿತ್ರಗಳಿಂದ ಹಿಂದೆ ಸರಿದ ದೀಪಿಕಾ ಪಡುಕೋಣೆ...ಅಷ್ಟಕ್ಕೂ ಏನದು?

ಗದಗ ಮೂಲದ ರಮೇಶ್‌ ಜೊತೆಯಿರುವಾಗ ಈ ಕಾವೇರಿ ಸಾವನ್ನಪ್ಪಿದ್ದಾರೆ.  ರಮೇಶ್‌ ಜೊತೆ ಕಾವೇರಿ ಅನೈತಿಕ ಸಂಬಂಧ ಹೊಂದಿದ್ದರ ಬಗ್ಗೆ ಶಂಕೆ ಮೂಡಿಬರುತ್ತಿದೆ. ಮದುವೆ ವಿಚಾರಕ್ಕೆ ರಮೇಶ್‌ ಕಾವೇರಿಗೆ ಒತ್ತಡ ಹೇರುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ.ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ 'ದಿ ಡೆವಿಲ್' ಚಿತ್ರದ 2ನೇ ಹಾಡು 'ಒಂದೆ ಒಂದು ಸಲ' ನಾಳೆ ಬಿಡುಗಡೆ!

 


ಕಾವೇರಿ ಮದುವೆಗೆ ಒಪ್ಪದೇ ಇದ್ದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದ ಎಂಬ ವಿಷಯ ತನಿಖೆ ವೇಳೆ ತಿಳಿದುಬಂದಿದೆ. ಆದರೆ ಕಾವೇರಿ ಒಪ್ಪದೇ ಇದ್ದಾಗ ಬಲವಂತದಿಂದ ಎಳೆ ತಂದು ಬೆಂಕಿ ಹಾಕಿಯೇ ಬಿಟ್ಟಿದ್ದಾನೆ. ಆದರೆ ಕೊನೆಯಲ್ಲಿ ಇಬ್ಬರೂ ಬೆಂಕಿಯಲ್ಲಿ ಆಹುತಿಯಾಗಿದ್ದಾರೆ. ಸತ್ತೋಗಿರುವ ಯುವಕ ಬರೋಕಿಂತ ಮುಂಚೆ ಆಕೆಯ ಸಹೋದರ ಅಂತ ಹೇಳಿಕೊಂಡು ಮತ್ತೊಬ್ಬ ಲಾಡ್ಜ್‌ ರೂಂಗೆ ಎಂಟ್ರಿ ಕೊಟ್ಟಿದ್ದನಂತೆ ಎಂಬ ವಿಷಯ ಸಹ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಜಂಟಿ ಆಯುಕ್ತ ರಮೇಶ್‌ ಬಾನೋತ್‌ ಹೇಳಿಕೆಯನ್ನು ಕೊಟಿದ್ದಾರೆ.SIRIL Women's Shimmer Chiffon Sequence Embroidery Scalloped Border Saree With Unstitched Blouse Piece