Skip to main content
ವಿಡಿಯೋ
1/2
general

ಮೈಸೂರಿನಲ್ಲಿ ಸಾಲು ಸಾಲು ಅಪರಾಧಗಳು..ಸರ್ಕಾರದ ಆಡಳಿತದ ಬಗ್ಗೆ ಸಂಸದ ಯದುವೀರ್ ಒಡೆಯರ್ ಖಂಡನೆ!

By Vinutha U
ಮೈಸೂರಿನಲ್ಲಿ ಸಾಲು ಸಾಲು ಅಪರಾಧಗಳು..ಸರ್ಕಾರದ ಆಡಳಿತದ ಬಗ್ಗೆ ಸಂಸದ ಯದುವೀರ್ ಒಡೆಯರ್ ಖಂಡನೆ!

ದಸರಾ ಹಬ್ಬಕ್ಕೂ ಮುನ್ನ ನಗರದ ಹೃದಯಭಾಗದಲ್ಲಿ ನಡೆದ ಕೊಲೆ, ಅತ್ಯಾಚಾರ ಮತ್ತು ₹340 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣ ಮೈಸೂರಿನ ಕಾನೂನು ಸುವ್ಯವಸ್ಥೆ ಕುಸಿತವನ್ನೆಲ್ಲೆತ್ತಿದ್ದು, ಸಂಸದ ಯದುವೀರ್ ಸರ್ಕಾರದ ನಿರ್ಲಕ್ಷ್ಯಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸರಣಿ ಗಂಭೀರ ಅಪರಾಧಗಳ ಹಿನ್ನೆಲೆಯಲ್ಲಿ, ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಅವರು ಆರೋಪಿಸಿದ್ದಾರೆ.

ದಸರಾ ಹಬ್ಬದ ಸಂಭ್ರಮ ಇನ್ನೂ ಮಾಸುವ ಮುನ್ನವೇ ನಡೆದ ಕೊಲೆ ಮತ್ತು ಅತ್ಯಾಚಾರದಂತಹ ಘಟನೆಗಳು ಮೈಸೂರಿನ ಭದ್ರತಾ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸ್ವಚ್ಛತೆ, ಶಿಸ್ತು ಮತ್ತು ಉತ್ತಮ ಆಡಳಿತಕ್ಕೆ ಹೆಸರುವಾಸಿಯಾದ ಮೈಸೂರಿನ ಘನತೆಗೆ ಇಂತಹ ಘಟನೆಗಳು ಧಕ್ಕೆ ತರುತ್ತಿವೆ ಎಂದು ಯದುವೀರ್ ಒಡೆಯರ್ ಕಳವಳ ವ್ಯಕ್ತಪಡಿಸಿದರು. Invicta Analogue Black Dial Men's Watch-26970

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯದುವೀರ್, ಮೈಸೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ₹340 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಪ್ರಕರಣಗಳು ರಾಜ್ಯದ ಕಾನೂನು ಜಾರಿ ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತವೆ, ಎಂದು ಟೀಕಿಸಿದರು. ಡ್ರಗ್ಸ್ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿರುವುದು ರಾಜ್ಯದ ಅಸಮರ್ಥತೆಗೆ ಸಾಕ್ಷಿ ಎಂದರು.

ಅರಮನೆಯ ಮುಂಭಾಗದಲ್ಲಿ ನಡೆದ ಕೊಲೆ ಮತ್ತು ಚಿಕ್ಕ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಘಟನೆಗಳು ಮನ ಕಲಕುವಂತಿವೆ. ಬಲೂನ್ ಮಾರಾಟ ಮಾಡುವ ಆ ಮಗುವಿಗೆ ನಡೆದ ಈ ಘೋರ ಕೃತ್ಯ ಮೈಸೂರಿನ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಘಟನೆಯಾಗಿದೆ. ನಗರದ ಹೃದಯಭಾಗದಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಭದ್ರತಾ ಲೋಪವನ್ನು ಸ್ಪಷ್ಟಪಡಿಸುತ್ತವೆ. ಕಿಡಿಗೇಡಿಗಳಲ್ಲಿ ಯಾವುದೇ ಭಯ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಗಿರೀಶ್ ಮಟ್ಟಣ್ಣವರ್ ವಿರುದ್ಧ ಪ್ರಶಾಂತ್ ಸಂಬರಗಿ ಗಂಭೀರ ಆರೋಪ...'ಶಾಸಕರ ಭವನ ಸ್ಪೋಟದಿಂದ ಧರ್ಮಸ್ಥಳದವರೆಗೆ ಟಾರ್ಗೆಟ್?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಸಮಯದಲ್ಲಿ "ಮೈಸೂರು ನನ್ನ ತವರು" ಎಂದು ಹೇಳಿದ್ದನ್ನು ಯದುವೀರ್ ನೆನಪಿಸಿದರು. "ತಮ್ಮ ತವರು ಊರಿನಲ್ಲಿ ಇಂತಹ ಅಹಿತಕರ ಘಟನೆಗಳನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಥ ಆಡಳಿತದ ಸ್ಪಷ್ಟ ಸೂಚಕ," ಎಂದು ಅವರು ದೂರಿದರು.