ನವದೆಹಲಿ: ಸುಮಾರು 4.5 ಲಕ್ಷ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ನೀಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ರಸ್ತುತ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ದೇಶಾದ್ಯಾಂತ ಜೈಲುಗಳಲ್ಲಿ ಇರುವ ವಿಚಾರಣಾಧೀನ ಕೈದಿಗಳ ಹಕ್ಕುಗಳು ಈಗ ಹೊಸ ಚರ್ಚೆಗೆ ಕಾರಣವಾಗಿವೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಪೀಠವು ವಕೀಲ ಪ್ರಶಾಂತ್ ಭೂಷಣ್ ಅವರ ವಾದಗಳನ್ನು ಆಲಿಸಿದೆ. ಅವರು 1951ರ ಜನಪ್ರತಿನಿಧಿ ಕಾಯ್ದೆ (RPA) ಸೆಕ್ಷನ್ 62(5) ಅಡಿಯಲ್ಲಿ ಪ್ರಸ್ತುತ ಇರುವ ಸಂಪೂರ್ಣ ನಿಷೇಧವು ಸಂವಿಧಾನಬದ್ಧ ಖಾತರಿಗಳು ಮತ್ತು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಮಾನದಂಡಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದ್ದಾರೆ. ಅರ್ಜಿಯಲ್ಲಿನ ವಿನಂತಿಯ ಪ್ರಕಾರ, ಕೈದಿಗಳ ಮತದಾನದ ಹಕ್ಕನ್ನು ನಿರ್ಬಂಧಿಸುವಂತೆ ಸೂಕ್ತ ಷರತ್ತುಗಳನ್ನು ರೂಪಿಸಲು ಕೋರಲಾಗಿದೆ.ಧರ್ಮಸ್ಥಳ ಪ್ರಕರಣ: ಗೃಹ ಇಲಾಖೆ, ಐಟಿ, ಇಡಿ, ಎಸ್‌ಐಟಿ ಸೇರಿದಂತೆ ಅಗ್ರ ಅಧಿಕಾರಿಗಳಿಗೆ ನೋಟಿಸ್ ಜಾರಿ!
ಅರ್ಜಿದಾರರು ಪ್ರಸ್ತುತ ಸಂಪೂರ್ಣ ನಿಷೇಧವು ದೊಡ್ಡ ಜನಸಮೂಹವನ್ನು ಮತದಾನದಿಂದ ವಂಚಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 1997ರಲ್ಲಿ ‘ಅನುಕುಲ್ ಕುಮಾರ್ ಪ್ರಧಾನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಸೆಕ್ಷನ್ 62(5) ಅನ್ನು ಶಾಸನಬದ್ಧ ಹಕ್ಕಾಗಿ ಪರಿಗಣಿಸಿತ್ತು. ಆದರೆ ಈಗಿನ ಅರ್ಜಿಯು ‘ಅನೂಪ್ ಬರ್ನವಾಲ್’ ಪ್ರಕರಣದ ತೀರ್ಪನ್ನು ಆಧರಿಸಿದ್ದು, ಮತದಾನದ ಹಕ್ಕು ಸಂವಿಧಾನಬದ್ಧ ಹಕ್ಕು ಎಂದು ದೃಢಪಡಿಸಿದೆ.