Skip to main content
ವಿಡಿಯೋ
1/3
politics

ಬಿಹಾರ: RJDಗೆ ಸೇರ್ಪಡೆಯಾದ JDU ಸಂಸದರ ಮಗ; ತೇಜಸ್ವಿ ಯಾದವ್ ‘ನನ್ನ ಅಣ್ಣನಂತೆʼ ಎಂದ ರಂಜನ್

By Gireesh Vasishta
ಬಿಹಾರ: RJDಗೆ ಸೇರ್ಪಡೆಯಾದ JDU ಸಂಸದರ ಮಗ; ತೇಜಸ್ವಿ ಯಾದವ್ ‘ನನ್ನ ಅಣ್ಣನಂತೆʼ ಎಂದ ರಂಜನ್

ಆರ್‌ಜೆಡಿಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ರಂಜನ್, ತೇಜಸ್ವಿಯವರನ್ನು “ನನ್ನ ಅಣ್ಣನಂತೆ” ಎಂದು ವರ್ಣಿಸಿ, ತಮ್ಮ ನಿರ್ಧಾರಕ್ಕೆ ವೈಯಕ್ತಿಕ ಬಾಂಧವ್ಯವೂ ಕಾರಣವೆಂದು ಸೂಚಿಸಿದರು.

ಪಾಟ್ನಾ, ಅಕ್ಟೋಬರ್ 10, 2025ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಪಕ್ಷಕ್ಕೆ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ದೊಡ್ಡ ಹಿನ್ನಡೆಯಾಗಿ, ಬಂಕಾ ಕ್ಷೇತ್ರದ ಜೆಡಿಯು ಸಂಸದ ಗಿರಿಧಾರಿ ಯಾದವ್(MP Giridhari Yadav) ಅವರ ಮಗ ಚಾಣಕ್ಯ ಪ್ರಕಾಶ್ ರಂಜನ್ ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ಗೆ ಸೇರಿದ್ದಾರೆ. ಆರ್ಜೆಡಿ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ರಂಜನ್ರನ್ನು ಸ್ವಾಗತಿಸಿದರು.BULLMER Striped Textured Printed Polo Neck Fullsleeve T-Shirt with Rib for Men

ಆರ್ಜೆಡಿಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ರಂಜನ್, ತೇಜಸ್ವಿಯವರನ್ನುನನ್ನ ಅಣ್ಣನಂತೆಎಂದು ವರ್ಣಿಸಿ, ತಮ್ಮ ನಿರ್ಧಾರಕ್ಕೆ ವೈಯಕ್ತಿಕ ಬಾಂಧವ್ಯವೂ ಕಾರಣವೆಂದು ಸೂಚಿಸಿದರು. ಅವರೊಂದಿಗೆ ಮಾಜಿ ಜೆಡಿಯು ಸಂಸದ ಸಂತೋಷ್ ಕುಶ್ವಾಹ (ಪುರ್ನಿಯಾ), ಮಾಜಿ ಜೆಡಿಯು ಶಾಸಕ ರಾಹುಲ್ ಶರ್ಮ (ಘೋಸಿ), ಮತ್ತು ವೈಶಾಲಿಯ ಮಾಜಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಅಭ್ಯರ್ಥಿ ಅಜಯ್ ಕುಶ್ವಾಹ ಸೇರಿದ್ದಾರೆ. ಸಾವಿರಾರು ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಘಟನೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ.ಇದನ್ನು ಓದಿ: ನನಗೇ ನೊಬೆಲ್‌ ಕೊಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ; ಪ್ರಶಸ್ತಿ ಕೈತಪ್ಪಿದ ಬೆನ್ನಲ್ಲೇ ಉಲ್ಟಾ ಹೊಡೆದ ಟ್ರಂಪ್‌

ಸೇರ್ಪಡೆಯ ಪ್ರಮುಖ ವಿವರಗಳು:

ಚಾಣಕ್ಯ ಪ್ರಕಾಶ್ ರಂಜನ್: ಜೆಡಿಯು ಸಂಸದ ಗಿರಿಧಾರಿ ಯಾದವ್ ಅವರ ಮಗನಾಗಿರುವ ರಂಜನ್ ಅವರ ಸೇರ್ಪಡೆ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ತೋರಿಸುತ್ತದೆ. ಆರ್ಜೆಡಿ ರಂಜನ್ರನ್ನು ಮುಂಬರುವ ಚುನಾವಣೆಯಲ್ಲಿ ಬಂಕಾದಿಂದ ಅಥವಾ ಇನ್ನೊಂದು ಪ್ರಮುಖ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಬಹುದೆಂದು ಊಹಾಪೋಹಗಳಿವೆ.

ತೇಜಸ್ವಿ ಯಾದವ್ ಪ್ರತಿಕ್ರಿಯೆ:

ತೇಜಸ್ವಿ, ಇವರನ್ನು ಆರ್ಜೆಡಿಗೆಮೌಲ್ಯಯುತ ಸೇರ್ಪಡೆಎಂದು ಕರೆದು, ಸಾಮಾಜಿಕ ನ್ಯಾಯಕ್ಕೆ ಪಕ್ಷವನ್ನು ಬಲಪಡಿಸುವ ಶಕ್ತಿ ಇದ್ದಂತೆ ಎಂದು ಹೇಳಿದರು. ನಿತೀಶ್ ಕುಮಾರ್ರನ್ನು ತೀವ್ರವಾಗಿ ಟೀಕಿಸಿದ ಅವರು, ಜೆಡಿಯು ಮುಖ್ಯಸ್ಥರುತಮ್ಮ ಬುದ್ದಿಯನ್ನು ಕಳೆದುಕೊಂಡಿದ್ದಾರೆಮತ್ತು ಬಿಜೆಪಿಯ ಸಹವಾಸದಿಂದ  ಪಕ್ಷ ನೀತಿಯನ್ನು ಕಳೆದುಕೊಂಡಿದೆ ಎಂದಿದ್ದಾರೆ.. “ಜೆಡಿಯುವನ್ನು ಬೆಳೆಸಿದವರಿಗೆ ಈಗ ಗೌರವವಿಲ್ಲ... ನನ್ನ ಚಿಕ್ಕಪ್ಪ [ನಿತೀಶ್] ಅವರನ್ನು ಹೈಜಾಕ್ ಮಾಡಲಾಗಿದೆಎಂದು ತೇಜಸ್ವಿ, ಹಿಂದಿನ ಮೈತ್ರಿಯ ಬಗ್ಗೆ ಹೇಳಿದ್ದಾರೆ. ಒಟ್ಟಾರೆ  ಚಾಣಕ್ಯ ಪ್ರಕಾಶ್ ರಂಜನ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಹಾಗೂ ಇವರು ನನ್ನ ಅಣ್ಣನಂತೆ ಎಂದು ಹೇಳಿದ್ದಾರೆ.