Skip to main content
ವಿಡಿಯೋ
1/2
general

ಪೋಕ್ಸೋ ಪ್ರಕರಣ: ಬಿ.ಎಸ್. ಯಡಿಯೂರಪ್ಪ ಕೇಸ್‌ ರದ್ದು ಅರ್ಜಿ ಹಿನ್ನಡೆ - ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್!

By Shravanthi R
ಪೋಕ್ಸೋ ಪ್ರಕರಣ: ಬಿ.ಎಸ್. ಯಡಿಯೂರಪ್ಪ ಕೇಸ್‌ ರದ್ದು ಅರ್ಜಿ ಹಿನ್ನಡೆ - ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್!

ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಕೇಸ್‌ ರದ್ದು ಅರ್ಜಿಗೆ ಹಿನ್ನಡೆಯಾಗಿದ್ದು, ವಿಚಾರಣೆಯನ್ನು ಅಕ್ಟೋಬರ್ 23 ಕ್ಕೆ ಮುಂದೂಡಿದೆ. ಯಡಿಯೂರಪ್ಪ ಪರ ವಾದ ಮಂಡಿಸಿದ ವಕೀಲರು ಸ್ಪಷ್ಟವಾದ ಅಂಶಗಳನ್ನು ಸಮರ್ಪಕವಾಗಿ ಮಂಡಿಸದಿರುವ ಹಿನ್ನೆಲೆಯಲ್ಲಿ, ಕೋರ್ಟ್ ಮುಂದಿನ ವಿಚಾರಣೆಯಲ್ಲಿ ಸ್ಪಷ್ಟ ಉತ್ತರಗಳನ್ನು ನೀಡಲು ಸೂಚಿಸಿದೆ.

ಪೋಕ್ಸೋ ಕಾಯ್ದೆಯಡಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (ಬಿಎಸ್‌ವೈ) ಅವರ ವಿರುದ್ಧದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಮಹತ್ವದ ಸೂಚನೆ ನೀಡಿದೆ. ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿಲ್ಲ ಎಂದು ಅವರು ಸಲ್ಲಿಸಿದ ಅರ್ಜಿ ಎರಡನೇ ಬಾರಿಗೆ ಹಿನ್ನಡೆಯಾಗಿದ್ದು, ಅರ್ಜಿ ಪುರಸ್ಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೋರ್ಟ್‌ ಮೌಖಿಕವಾಗಿ ಹೇಳಿತು. 

ಈ ಪ್ರಕರಣದ ವಿಚಾರಣೆ ಪರಿಗಣಿಸಿ ಎರಡನೇ ಬಾರಿ ಅಧೀನ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಅವರು ಸಲ್ಲಿಸಿದ ಅರ್ಜಿ ಪುರಸ್ಕರಿಸುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಏಕಸದಸ್ಯ ಪೀಠ ಪ್ರಕರಣದ ಸಹ ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿತು.

ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರ ಹೇಳಿಕೆ ಮತ್ತು ಪ್ರತಿ ಹೇಳಿಕೆಯನ್ನು ನ್ಯಾಯಾಲಯ ಪರಿಗಣಿಸಬೇಕಿತ್ತು ಎಂಬ ವಿಚಾರಕ್ಕೆ ಸೀಮಿತವಾಗಿ ವಾದಿಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಹಾಜರಿದ್ದವರು ಮತ್ತು ಸಂತ್ರಸ್ತೆಯ ಹೇಳಿಕೆಯ ಸುತ್ತಲೂ ಅವರ ವಾದಗಳು ಕೇಂದ್ರೀಕೃತವಾಗಿವೆ. ಆದರೆ, ಇನ್ನಿತರ ವಿಚಾರಗಳ ಕುರಿತು ನಿರ್ದಿಷ್ಟವಾಗಿ ವಾದಿಸಿಲ್ಲ. ಈ ಕುರಿತು ಉತ್ತರಿಸಲು ಅವರನ್ನು ಕರೆತನ್ನಿ ಎಂದು ಯಡಿಯೂರಪ್ಪ ಪರ ವಾದಿಸಲು ಹಾಜರಿದ್ದ ವಕೀಲೆ ಸ್ವಾಮಿನಿ ಗಣೇಶ್‌ ಅವರಿಗೆ ಕೋರ್ಟ್‌ ಸೂಚಿಸಿದೆ ಎನ್ನಲಾಗಿದೆ. Fujifilm Instax Camera Mini 99 Premium Edition Pack with 20 Shots

ಬಿಎಸ್‌ ಯಡಿಯೂರಪ್ಪ ಅವರು ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಒಪ್ಪಿಕೊಂಡಿಲ್ಲ. ಸಂತ್ರಸ್ತೆಯ ಹೇಳಿಕೆಯನ್ನು ಮಾತ್ರ ಆಧರಿಸಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಕಾನೂನುಬಾಹಿರ ಎಂದು ವಕೀಲ ನಾಗೇಶ್‌ ಅವರು ಹೈಕೋರ್ಟ್‌ ವಾದ ಮಂಡಿಸಿದ್ದರು.

ಪ್ರಕರಣದ ಫಲಿತಾಂಶಗಳು ಮತ್ತು ಮುಂದಿನ ಹಂತಗಳು ಏನೆಂಬುದರ ಬಗೆ ವಿಚಾರಣೆಯನ್ನು ಅಕ್ಟೋಬರ್ 23 ಕ್ಕೆ ಮುಂದೂಡಲಾಗಿದ್ದು, ಹಿರಿಯ ವಕೀಲ ಸಿ.ವಿ. ನಾಗೇಶ್ ಅವರಿಂದ ಉತ್ತರ ಪಡೆಯಲು ಅವಕಾಶ ನೀಡಲಾಗಿದೆ. ನಿರ್ದಿಷ್ಟ ವಾದಗಳು ಮಂಡಿತವಾಗದಿದ್ದರೆ, ಅರ್ಜಿ ತಿರಸ್ಕರಿಸಲ್ಪಡಬಹುದು ಎನ್ನಲಾಗಿದೆ. ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿ ಬಂಧಿತರಾಗಿದ್ದ 6 ಮಂದಿಗೆ ಜಾಮೀನು!