ಪಾಕಿಸ್ತಾನದ Inter-Services Intelligence (ISI) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಂಗತ್ ಸಿಂಗ್ ಎಂಬ ಆರೋಪಿಯನ್ನು ರಾಜಸ್ಥಾನ ಗುಪ್ತಚರ ಇಲಾಖೆಯು ಬಂಧಿಸಿದೆ. 1923 ರ ಅಧಿಕೃತ ರಹಸ್ಯ ಕಾಯ್ದೆಯಡಿ ಅಲ್ವಾರ್ ಜಿಲ್ಲೆಯ ಗೋವಿಂದಗಢ ನಿವಾಸಿಯಾದ ಆತನನ್ನು ಬೇಹುಗಾರಿಕೆ ಎಂದರೆ ರಹಸ್ಯ ಅಥವಾ ಗುಪ್ತಚರ ಮಾಹಿತಿಯ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಪಾಕಿಸ್ತಾನದ ಐಎಸ್ಐಗೆ ರಹಸ್ಯ ಸಂದೇಶಗಳನ್ನು ತಿಳಿಸಲಾಗಿದೆ ಎನ್ನುವ ಹುನ್ನಾರ ಈತ ನಡೆಸಿದ್ದ ಎನ್ನಲಾಗಿದೆ. ಜೊತೆಗೆ ಪಾಕಿಸ್ತಾನಿ ಮಹಿಳೆಯೊಟ್ಟಿಗೆ ಜೊತೆಗೂಡಿ ಹನಿಟ್ರ್ಯಾಫ್ ಹಣವರ್ಗಾವಣೆ ವ್ಯವಹಾರಗಳನ್ನು ನಡೆಸಿದ್ದ ಎನ್ನಲಾಗಿದೆ. ಈ ಕುರಿತು ರಾಜಸ್ಥಾನ ಅಧಿಕಾರಿಗಳು ಮಾಹಿತಿ ಪಡೆದು ಆತನನ್ನು ಯಶಸ್ವಿಯಾಗಿ ಬಂಧಿಸಿದಿರುವುದಾಗಿ ತಿಳಿದುಬಂದಿದೆ. Fujifilm Instax Square 10 Exposures Instant Film (White)
ಅಲ್ವಾರ್ ಕಂಟೋನ್ಮೆಂಟ್ ಪ್ರದೇಶದ ಬಳಿ ಕಾರ್ಯಾಚರಣೆಯ ಸಮಯದಲ್ಲಿ ಪರಿಶೀಲನೆ ನಡೆಸಿದ ಕಣ್ಗಾವಲಿನ ಸಹಾಯದಿಂದ ಆತನ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಿಳಿದು ಬಂದಿದೆ. ಆತನು ಇಶಾ ಶರ್ಮ ಎಂಬ ಪಾಕಿಸ್ತಾನಿ ಮಹಿಳೆ ಜೊತೆ ಸಂಪರ್ಕದಲ್ಲಿದ್ದು, ಮಾಹಿತಿ ರವಾನೆ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು ರಾಜಸ್ಥಾನದ ಜೈಪುರದ ವಿಶೇಷ ಪೊಲೀಸ್ ಠಾಣೆಯಲ್ಲಿ ಸಿಐಡಿ ಗುಪ್ತಚರ ಇಲಾಖೆ ಆತನನ್ನು ಬಂಧಿಸಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ನೆಚ್ಚಿಕೊಂಡ ಗ್ರಾಹಕ : ಯುಪಿಐ ಬಳಕೆ 49%ಕ್ಕೆ ಏರಿಕೆ!