Skip to main content
ವಿಡಿಯೋ
1/2
general

ಗಾಜಾ ಯುದ್ಧ ಅಂತ್ಯ ಎಂದು ಘೋಷಿಸಿದ ಟ್ರಂಪ್: ಇಸ್ರೇಲ್‌ಗೆ ಭೇಟಿ ಮೊದಲು ಮಹತ್ವದ ಘೋಷಣೆ!

By Vinutha U
ಗಾಜಾ ಯುದ್ಧ ಅಂತ್ಯ ಎಂದು ಘೋಷಿಸಿದ ಟ್ರಂಪ್: ಇಸ್ರೇಲ್‌ಗೆ ಭೇಟಿ ಮೊದಲು ಮಹತ್ವದ ಘೋಷಣೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಜಾ ಯುದ್ಧ ಅಂತ್ಯಗೊಂಡಿದೆ ಎಂದು ಘೋಷಿಸಿ, ಇಸ್ರೇಲ್‌ಗೆ ಭೇಟಿ ನೀಡುವ ಮೊದಲು ಶಾಂತಿಯ ಸಂದೇಶ ನೀಡಿದರು. ನೆತನ್ಯಾಹು, ಕತಾರ್ ಮತ್ತು ಈಜಿಪ್ಟ್ ನಾಯಕರಿಗೆ ಪ್ರಶಂಸೆ ಸಲ್ಲಿಸಿದ ಟ್ರಂಪ್, ಗಾಜಾದ ಪುನರ್ನಿರ್ಮಾಣಕ್ಕೆ ಶಾಂತಿ ಮಂಡಳಿ ರಚಿಸುವುದಾಗಿ ಘೋಷಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಜಾ ಯುದ್ಧ ಅಂತ್ಯಗೊಂಡಿದೆ ಎಂದು ಘೋಷಿಸಿದ್ದು, ಇಸ್ರೇಲ್‌ಗೆ ಭೇಟಿ ನೀಡುವ ಮೊದಲು ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮದ ನಂತರ ಇದು ಅವರ ಮೊದಲ ಭೇಟಿಯಾಗಿದೆ. ಈ ಭೇಟಿಯಲ್ಲಿ ಅವರು ನೆಸೆಟ್‌ನಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಮತ್ತು ಈಜಿಪ್ಟ್‌ನಲ್ಲಿ ಉನ್ನತ ಮಟ್ಟದ ಶಾಂತಿ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.

ಗಾಜಾ ಈಗ ಧ್ವಂಸಗೊಂಡ ಸ್ಥಳ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಕೆಲವು ಒತ್ತೆಯಾಳುಗಳನ್ನು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿ ಬಿಡುಗಡೆ ಮಾಡಬಹುದು ಎಂದು ಅವರು ಸೂಚಿಸಿದರು. ಗಾಜಾದ ಪುನರ್ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಶಾಂತಿ ಮಂಡಳಿ ಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಟ್ರಂಪ್ ಘೋಷಿಸಿದರು. Marc Loire Women's Slip on Casual Solid Pumps Heels

ರಾಯಿಟರ್ಸ್ ವರದಿಯ ಪ್ರಕಾರ, ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡಿ, ಯುದ್ಧ ಮುಗಿದಿದೆ, ಅದು ನಿಮಗೆ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರದೇಶದ ಭವಿಷ್ಯದ ಬಗ್ಗೆ ಕೇಳಿದಾಗ, ಅವರು "ಇದು ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ. ಏರ್ ಫೋರ್ಸ್ ಒನ್ ವಿಮಾನದಲ್ಲಿ ಮಾತನಾಡಿದ ಟ್ರಂಪ್, ಇಸ್ರೇಲ್-ಹಮಾಸ್ ಕದನ ವಿರಾಮಕ್ಕೆ ನೆರವು ನೀಡಿದ ಕತಾರ್‌ಗೆ ಪ್ರಶಂಸೆ ಸಲ್ಲಿಸಿದರು ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅತ್ಯುತ್ತಮ ಕೆಲಸವನ್ನು ಶ್ಲಾಘಿಸಿದರು.

ಟ್ರಂಪ್ ತಮ್ಮ ಹೇಳಿಕೆಯಲ್ಲಿ, ಯಹೂದಿ, ಮುಸ್ಲಿಂ ಅಥವಾ ಅರಬ್ ದೇಶಗಳಿರಲಿ, ಎಲ್ಲರೂ ಸಂತೋಷವಾಗಿದ್ದಾರೆ. ಇಸ್ರೇಲ್ ನಂತರ ನಾವು ಈಜಿಪ್ಟ್‌ಗೆ ಹೋಗುತ್ತಿದ್ದೇವೆ. ಅಲ್ಲಿ ನಾವು ಎಲ್ಲಾ ಪ್ರಬಲ ಮತ್ತು ದೊಡ್ಡ ಹಾಗೂ ಶ್ರೀಮಂತ ದೇಶಗಳ ನಾಯಕರನ್ನು ಭೇಟಿಯಾಗುತ್ತೇವೆ. ಅವರೆಲ್ಲರೂ ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಮಹಿಳಾ ವಿಶ್ವಕಪ್ 2025: ಭಾರತ vs ಆಸ್ಟ್ರೇಲಿಯಾ: ಕಳಪೆ ಬೌಲಿಂಗ್‌, ಭಾರತಕ್ಕೆ ಹೀನಾಯ ಸೋಲು

ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಮೂರನೇ ದಿನವೂ ಕದನ ವಿರಾಮ ಜಾರಿಯಲ್ಲಿದ್ದಾಗ ಈ ಘೋಷಣೆ ಬಂದಿದೆ. ಅಮೆರಿಕ, ಈಜಿಪ್ಟ್, ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ನಡೆದ ಈ ಕದನ ವಿರಾಮವು ಅಕ್ಟೋಬರ್ 7, 2023 ರಂದು ಹಮಾಸ್‌ನ ಆಶ್ಚರ್ಯಕರ ದಾಳಿಯೊಂದಿಗೆ ಪ್ರಾರಂಭವಾದ ಸಂಘರ್ಷಕ್ಕೆ ಅಂತ್ಯ ಹಾಡಲಿದೆ ಎಂಬ ಭರವಸೆಯನ್ನು ಮೂಡಿಸಿದೆ.