Skip to main content
ವಿಡಿಯೋ
1/3
politics

ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್ ಚುನಾವಣೆಯಲ್ಲಿ ಗೆದ್ದು ಬೀಗಿದ JDS ಅಭ್ಯರ್ಥಿ ನರಸಿಂಹ ಗಂಧದಮನೆ: ನಗರ ಜೆಡಿಎಸ್ ಅಧ್ಯಕ್ಷ ಶ್ರೀ ದೀಪಕ್ ಸಿಂಗ್‌ರ ಶ್ರಮಕ್ಕೆ ಹಿಡಿದ ಗೆಲುವಿನ ಕನ್ನಡಿ

By Gireesh Vasishta
ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್ ಚುನಾವಣೆಯಲ್ಲಿ ಗೆದ್ದು ಬೀಗಿದ JDS ಅಭ್ಯರ್ಥಿ ನರಸಿಂಹ ಗಂಧದಮನೆ: ನಗರ ಜೆಡಿಎಸ್ ಅಧ್ಯಕ್ಷ ಶ್ರೀ ದೀಪಕ್ ಸಿಂಗ್‌ರ ಶ್ರಮಕ್ಕೆ ಹಿಡಿದ ಗೆಲುವಿನ ಕನ್ನಡಿ

ಜಿಲ್ಲಾ ಮಟ್ಟದ ಈ ಚುನಾವಣೆಯಲ್ಲಿ ಜೆಡಿಎಸ್ ಪ್ರಮುಖರು ನರಸಿಂಹ ರವರ ಗೆಲುವಿಗಾಗಿ ಎಲ್ಲಾ ರೀತಿಯಲ್ಲೂ ಶ್ರಮಿಸಿದ್ದಾರೆ. ವಿಶೇಷವಾಗಿ, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ಶ್ರೀ ದೀಪಕ್ ಸಿಂಗ್ ರವರ ನೇತೃತ್ವದಲ್ಲಿ ರೂಪಿಸಲ್ಪಟ್ಟ ಚುನಾವಣಾ ಕಾರ್ಯತಂತ್ರ ಅದ್ಭುತವಾಗಿ ಯಶಸ್ವಿಯಾಗಿದೆ.

ಶಿವಮೊಗ್ಗ, ಅಕ್ಟೋಬರ್ 12: ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕರ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಜೆಡಿಎಸ್ ಅಭ್ಯರ್ಥಿ ಶ್ರೀ ನರಸಿಂಹ ಗಂಧದಮನೆ ರವರು ಅತ್ಯಂತ ಹೆಚ್ಚು ಮತಗಳ ಮೂಲಕ ಜಯಶೀಲರಾಗಿ ಹೊರಹೊಮ್ಮಿದ್ದಾರೆ. ಈ ಗೆಲುವು ಸಹಕಾರಿ ಕ್ಷೇತ್ರದಲ್ಲಿ ಶಿವಮೊಗ್ಗ ನಗರ ಜೆಡಿಎಸ್‌ಗೆ ಐತಿಹಾಸಿಕ ಸಾಧನೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ನಡುವೆ ನೇರಾ-ನೇರ ಸ್ಪರ್ಧೆಯಾಗಿ ಕಂಡುಬಂದಿದ್ದ ಈ ಚುನಾವಣೆಯನ್ನು ಭಾರೀ ಅಂತರದಿಂದ ಗೆಲ್ಲಿಸಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ಉಲ್ಲಾಸದ ತಂಗಾಳಿಯನ್ನು ಹರಡಿದೆ.TIMEX Classics Analog Watch for Men with Round Dial & Water Resistant Man's Wrist Watches

ಜಿಲ್ಲಾ ಮಟ್ಟದ ಈ ಚುನಾವಣೆಯಲ್ಲಿ ಜೆಡಿಎಸ್ ಪ್ರಮುಖರು ನರಸಿಂಹ ರವರ ಗೆಲುವಿಗಾಗಿ ಎಲ್ಲಾ ರೀತಿಯಲ್ಲೂ ಶ್ರಮಿಸಿದ್ದಾರೆ. ವಿಶೇಷವಾಗಿ, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ಶ್ರೀ ದೀಪಕ್ ಸಿಂಗ್ ರವರ ನೇತೃತ್ವದಲ್ಲಿ ರೂಪಿಸಲ್ಪಟ್ಟ ಚುನಾವಣಾ ಕಾರ್ಯತಂತ್ರ ಅದ್ಭುತವಾಗಿ ಯಶಸ್ವಿಯಾಗಿದೆ. ಅವರ ವಿಶೇಷ ಎಲೆಕ್ಷನ್ ಟೀಮ್ ಸ್ಥಾಪನೆಯ ಮೂಲಕ ನಡೆಸಿದ ಕಾರ್ಯಗಳು ಈ ಗೆಲುವಿನ ಮೂಲ ಶಕ್ತಿಯಾಗಿವೆ. ನರಸಿಂಹ ರವರ ಗೆಲುವು ಕೇವಲ ವೈಯಕ್ತಿಕವಲ್ಲ, ಬದಲಿಗೆ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟಿನ ಮತ್ತು ರಣನೀತಿಯ ಗೆಲುವು ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಜೆಡಿಎಸ್-ಬಿಜೆಪಿ ಮೈತ್ರಿಯ ಸದುಪಯೋಗವು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಶಾಸಕರಾದ ಶ್ರೀಮತಿ ಶಾರದಾ ಪೂರಿಯ ನಾಯಕ್, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಭದ್ರಾವತಿ ವಿಧಾನಸಭಾ ಕ್ಷೇತ್ರದ ನಾಯಕರಾದ ಶ್ರೀಮತಿ ಶಾರದಾ ಅಪ್ಪಾಜಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್ ಸೇರಿದಂತೆ ಅನೇಕ ಪ್ರಮುಖರು ಸಹಕಾರ ಭಾರತಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದಾರೆ. ನಗರ ಶಾಸಕ ಚನ್ನಬಸಪ್ಪ, ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಮತ್ತು ಬಿಜೆಪಿ ಪಕ್ಷದ ಹಲವು ಜನಪ್ರಿಯ ನಾಯಕರು ಕೈಜೋಡಿಸಿ ಈ ಗೆಲುವುಗೆ ಬೆಂಬಲ ನೀಡಿದ್ದಾರೆ.ಇದನ್ನು ಓದಿ: ಮಹಿಳಾ ವಿಶ್ವಕಪ್ 2025: ಭಾರತ vs ಆಸ್ಟ್ರೇಲಿಯಾ: ಕಳಪೆ ಬೌಲಿಂಗ್‌, ಭಾರತಕ್ಕೆ ಹೀನಾಯ ಸೋಲು

"ಈ ಗೆಲುವು ನಮ್ಮ ಪಕ್ಷದ ಕೆಲಸಕ್ಕೆ ಸಂದ ಗೌರವ ಮತ್ತು ಮೈತ್ರಿಯ ಸಾಕ್ಷಿ. ಸಹಕಾರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಭಾವ ಹೆಚ್ಚುತ್ತಿದೆ" ಎಂದು ದೀಪಕ್ ಸಿಂಗ್ ರವರು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರದ ಹೊರತಾಗಿಯೂ, ಇಂತಹ ಶ್ಲಾಘನೀಯ ಯಶಸ್ಸು ಜೆಡಿಎಸ್‌ನ ಭವಿಷ್ಯದ ರಾಜಕೀಯಕ್ಕೆ ಆಶಾಕಿರಣವಾಗಿದೆ. ನರಸಿಂಹ ಗಂಧದಮನೆ ರವರು ನಿರ್ದೇಶಕರಾಗಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡು ಯಶಸ್ವಿಯಾಗಿ ನಿರ್ವಹಿಸುವುದನ್ನು ನಿರೀಕ್ಷಿಸಲಾಗಿದೆ.

ಈ ಗೆಲುವು ಶಿವಮೊಗ್ಗ ಜಿಲ್ಲೆಯ ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಬದಲಾವಣೆಯ ಸೂಚನೆಯಾಗಿದ್ದು, ಭವಿಷ್ಯದ ಚುನಾವಣೆಗಳಲ್ಲಿ ಜೆಡಿಎಸ್‌ನ ಚಟುವಟಿಕೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.