ಇಂದು ಬೆಳಿಗ್ಗೆ 10 ರಿಂದ ರಾತ್ರಿ 11 ಗಂಟೆಯವರೆಗೆ ವಿಕಸಿತ ಭಾರತ ಅಭಿಯಾನ ಕೈಗೊಳ್ಳಲಾಗಿದೆ. ಈ ರಾಷ್ಟ್ರದ ಯುವಜನತೆಗೆ ಪಾಲ್ಗೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಕರೆ ನೀಡಿದ್ದಾರೆ. ನ್ಯಾಷನಲ್ ಎಜುಕೇಶನ್ ಪಾಲಿಸಿ 2020 ರ ಭಾಗವಾಗಿ ತಂತ್ರಜ್ಞಾನ ಅಳವಡಿಕೆ ಮುಖಾಂತರ ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಮಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಎಐ ಭಾಷಾಂತರಿಸಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಕನ್ನಡ ಸೇರಿದಂತೆ ಹತ್ತು ಸಂದೇಶಗಳನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ.
ಇಷ್ಟಕ್ಕೂ ವಿಕಸಿತ್ ಭಾರತ್ ಬಿಲ್ಡಥಾನ್ ಎಂದರೇನು?
ದೇಶದಾದ್ಯಂತ ಮೂರು ಲಕ್ಷ ಪ್ರೌಢಶಾಲೆ ಹಾಗೂ ಐದು ಕೋಟಿಗೂ ಅಧಿಕ ಮಕ್ಕಳು ತಮ್ಮ ಪ್ರಾಯೋಗಿಕ ಪ್ರತಿಭೆಗಳನ್ನು ತೋರ್ಪಡಿಸಲು ಇರುವ ಅವಕಾಶವಾಗಿದೆ. ತಮ್ಮ ಪೋಷಕರು ಹಾಗೂ ಶಿಕ್ಷಕರ ನೆರವಿನಿಂದ ಅಭಿಯಾನಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ. ಇದು ʻಭಾರತದ ಅತಿದೊಡ್ಡ ಸ್ಕೂಲ್ ಇನ್ನೋವೆಶನ್ ಹ್ಯಾಕಥಾನ್ʼ ಆಗಿದ್ದು, ಸ್ವಾವಲಂಬಿ ಭಾರತ, ಸ್ವದೇಶಿ, ವೋಕಲ್ ಫಾರ್ ಲೋಕಲ್, ಸಮೃದ್ದ್ ಭಾರತ್ ಈ ನಾಲ್ಕು ಥೀಮ್‌ಗಳಿಗೆ ರಾಷ್ಟ್ರ ನಿರ್ಮಾಣಕ್ಕೆ ನೆರವಾಗುವಂತಹ ತಮ್ಮ ಐಡಿಯಾಗಳಿದ್ದರೆ ಅದನ್ನು ಪ್ರಸ್ತುತಿ ಪಡಿಸಬಹುದಾಗಿದೆ ಎನ್ನಲಾಗಿದೆ. iQOO Z10x 5G (Titanium, 8GB RAM, 256GB Storage) | 6500 mAh Large Capacity Battery | Dimensity 7300 Processor | Military-Grade Durability
ಕೇಂದ್ರ ಶಿಕ್ಷಣ ಸಚಿವಾಲಯವು ಅಟಲ್ ಇನ್ನೋವೇಶನ್ ಮಿಷನ್, ಹಾಗೂ ನೀತಿ ಆಯೋಗದ ಸಹಯೋಗದೊಂದಿಗೆ, ದೇಶಾದ್ಯಂತ ಸುಮಾರು 2.5 ಲಕ್ಷ ಶಾಲೆಗಳ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು, ರಾಷ್ಟ್ರವ್ಯಾಪಿ ನಾವೀನ್ಯತೆ ಆಂದೋಲನವಾದ ವಿಕಸಿತ ಭಾರತ ಬಿಲ್ಡಥಾನ್ 2025 ಎಂಬ ವಿನೂತನ ಕಾರ್ಯಕ್ರಮವಿದಾಗಿದೆ. ಇದೆರ ನೊಂದಣಿಗಾಗಿ ಅಧಿಕೃತ vbb.mic.gov.in or schoolinnovationmarathon.org/registration. ವೆಬ್‌ಸೈಟ್‌ಗಳನ್ನು ಪರಿಶೀಲಿಸಬಹುದಾಗಿದೆ. ಈ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರವನ್ನು ಶಕ್ತವಾಗಿಸುವುದು ಇದರ ಪ್ರಾಮುಖ್ಯತೆ ಎನ್ನಲಾಗಿದೆ .
ಇದರಲ್ಲಿ ವಿಜೇತರಾದ ಹತ್ತು ಮಂದಿಗೆ ಉನ್ನತ ಬಹುಮಾನ ನೀಡಲಿದೆ ಎನ್ನಲಾಗಿದೆ. ರಾಷ್ಟ್ರ ಹಾಗೂ ಜಗತ್ತಿಗೆ ತನ್ಮೂಲಕ ಭಾರತದ ಯುವಶಕ್ತಿಯನ್ನು ಪರಿಚಯಿಸುವ ಈ ಅಭಿಯಾನವು ಭಾರತದ ಅತಿದೊಡ್ಡ ವಿದ್ಯಾರ್ಥಿ ನಾವೀನ್ಯತೆ ಉಪಕ್ರಮ ಮತ್ತು ವಿಕಸಿತ ಭಾರತ @2047 ರ ದೃಷ್ಟಿಕೋನದತ್ತ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಜನರನ್ನು ತಲುಪುವ ಸಾಧನವಾಗಿ ಸರ್ಕಾರವು ವಿವಿಧ ಭಾಷೆಗಳಲ್ಲಿ ಎಐಅನ್ನು ಶಿಕ್ಷಣ, ತಂತ್ರಜ್ಞಾನ ಹಾಗೂ ಭಾಷಾವೈವಿಧ್ಯತೆಗೆ ಇದು ಅನುಕೂಲವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಮಹಿಳಾ ವಿಶ್ವಕಪ್ 2025: ಭಾರತ vs ಆಸ್ಟ್ರೇಲಿಯಾ: ಕಳಪೆ ಬೌಲಿಂಗ್, ಭಾರತಕ್ಕೆ ಹೀನಾಯ ಸೋಲು