Skip to main content
ವಿಡಿಯೋ
1/2
general

ಚಾರ್ಜಿಂಗ್‌ಗೆ ಹಾಕಿದ್ದ EV ಬೈಕ್‌ ಬೆಂಕಿಗಾಹುತಿ: EV ಬೈಕ್‌, ಸ್ಕೂಟರ್‌ಗಳು ಎಷ್ಟು ಸೇಫ್‌?

By Gireesh Vasishta
ಚಾರ್ಜಿಂಗ್‌ಗೆ ಹಾಕಿದ್ದ EV ಬೈಕ್‌ ಬೆಂಕಿಗಾಹುತಿ: EV ಬೈಕ್‌, ಸ್ಕೂಟರ್‌ಗಳು ಎಷ್ಟು ಸೇಫ್‌?

ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಹಳ್ಳಿಯಲ್ಲಿ ಘಟನೆ ನಡೆದಿದ್ದು ಮನೆಯ ಬೇಸ್‌ಮೆಂಟ್ ನಲ್ಲಿ ಇವಿ ಬೈಕನ್ನು ಚಾರ್ಜಿಂಗ್‌ಗೆ ಹಾಕಲಾಗಿದೆ ಮುಕೇಶ್ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ರಾತ್ರಿ 11:00 ಗಂಟೆ ಸುಮಾರಿಗೆ ನಡೆದಿರುವ ಘಟನೆ.

ಬೆಂಗಳೂರು: ಈಗಂತೂ ಎಲ್ಲಿ ನೋಡಿದರು ಎಲೆಕ್ಟ್ರಿಕ್ ಬೈಕ್‌ಗಳ ಹಾವಳಿ. ಸವಾರರು ಪೆಟ್ರೋಲ್ ಬೈಕ್, ಸ್ಕೂಟರ್ಗಿಂತ ಎಲೆಕ್ಟ್ರಿಕ್ ಬೈಕ್‌ಗಳನ್ನು ಹೆಚ್ಚು ಆಸಕ್ತರಾಗಿ ಕೊಂಡುಕೊಳ್ಳುತ್ತಿದ್ದಾರೆ. ಆದರೆ ಕೆಲವೊಂದು ಕಂಪನಿಯ ಬೈಕ್ ಮತ್ತು ಸ್ಕೂಟರ್ಗಳು ಅಲ್ಲಲ್ಲಿ ಬೆಂಕಿಗಾಹುತಿಯಾಗುತ್ತಿದೆ. ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.

ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಹಳ್ಳಿಯಲ್ಲಿ ಘಟನೆ ನಡೆದಿದ್ದು ಮನೆಯ ಬೇಸ್‌ಮೆಂಟ್ ನಲ್ಲಿ ಇವಿ ಬೈಕನ್ನು ಚಾರ್ಜಿಂಗ್‌ಗೆ ಹಾಕಲಾಗಿದೆ ಮುಕೇಶ್ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ರಾತ್ರಿ 11:00 ಗಂಟೆ ಸುಮಾರಿಗೆ ನಡೆದಿರುವ ಘಟನೆ.ಇದನ್ನು ಓದಿ: ಗಡಿ ಲಾಂಚ್‌ಪ್ಯಾಡ್‌ಗಳಲ್ಲಿ ಭಯೋತ್ಪಾದಕರು ಸಕ್ರಿಯ: ಚಳಿಗಾಲದಲ್ಲಿ ಕಾಶ್ಮೀರ ಗಡಿಗೆ ಭದ್ರತೆ ತೀವ್ರ!


 ಪಕ್ಕದಲ್ಲಿದ್ದ ಸೈಕಲ್ ಕೂಡ ಬೆಂಕಿಗೆ ಆಹುತಿಯಾಗಿದ್ದು ಮನೆಗೆ ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಬೈಕನ್ನು ಎಳೆದು ಹೊರಗಡೆ ಹಾಕಿದ್ದಾರೆ. ನಂತರ ರಾಜಾಜಿನಗರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ವರದಿಯಾಗಿದೆ. ಹೀಗಾಗಿ ev ಬೈಕ್‌ ಮತ್ತು ಸ್ಕೂಟರ್‌ಗಳು ಎಷ್ಟು ಸೇಫ್‌ ಎಂಬುವುದರ ಚರ್ಚೆ ಎಲ್ಲಡೆ ಉಂಟಾಗುತ್ತಿದೆ.BULLMER Striped Textured Printed Polo Neck Fullsleeve T-Shirt with Rib for Men

ಸದ್ಯಾ ಬೈಕ್‌ ಅಥವಾ ಸ್ಕೂಟರ್‌ ಯಾವ ಕಂಪನಿಯದ್ದು ಎಂಬ ಮಾಹಿತಿಯಲ್ಲ, ಆದರೂ ಕಡಿಮೆ ಖರ್ಚಿನ ಪ್ರಯಾಣವೆಂದು ಸಾಕಷ್ಟು ಜನರು ಖರೀದಿಮಾಡುತ್ತಿದ್ದಾರೆ. ಈಗ ಇಂತಹ ಉದಾಹರಣೆಯನ್ನು ನೋಡಿದ ಮೇಲೆ ಯೋಚಿಸಬೇಕಾಗಿರುವುದು ಸತ್ಯ.