Skip to main content
ವಿಡಿಯೋ
1/3
cinema

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಕುದುರೆ ಮಾರಾಟಕ್ಕಿದ್ಯಂತೆ..ನಿಜನಾ?

By Ram Chethan
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಕುದುರೆ ಮಾರಾಟಕ್ಕಿದ್ಯಂತೆ..ನಿಜನಾ?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ಜೈಲಿನಲ್ಲಿ ಇರುವ ನಟ ದರ್ಶನ್ ಕುರಿತು ಹೊಸ ಚರ್ಚೆ – ಫಾರ್ಮ್‌ಹೌಸ್‌ನ ಕುದುರೆಗಳ ಮಾರಾಟದ ವದಂತಿಗೆ ಆಪ್ತ ಸುನೀಲ್ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ.

ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕಾರಣ, ಅವರ ಆಪ್ತ ವಲಯದಲ್ಲಿ ನಿರಾಸೆ ಮನೆ ಮಾಡಿದೆ. ದರ್ಶನ್ ಅವರ ಫಾರ್ಮ್‌ಹೌಸ್‌ನಲ್ಲಿರುವ ಕುದುರೆಗಳ ಮಾರಾಟದ ಬಗ್ಗೆ ಇತ್ತೀಚೆಗೆ ಹರಿದಾಡಿದ ವದಂತಿಗಳಿಗೆ ಸಂಬಂಧಿಸಿದಂತೆ, ಅವರ ಆಪ್ತ ಸುನೀಲ್ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ದರ್ಶನ್ ಅವರ ಫಾರ್ಮ್‌ಹೌಸ್ ನಿರ್ವಹಣೆ ಮತ್ತು ಕುದುರೆಗಳ ಆರೈಕೆಯನ್ನು ಸುನೀಲ್ ಅವರೇ ನೋಡಿಕೊಳ್ಳುತ್ತಿದ್ದಾರೆ. "ದರ್ಶನ್ ತಮ್ಮ ಕುದುರೆಗಳನ್ನು ಮಾರಾಟ ಮಾಡುತ್ತಾರೆ" ಎಂಬ ಮಾಧ್ಯಮಗಳ ವರದಿಗಳನ್ನು ಸುನೀಲ್ ತಳ್ಳಿಹಾಕಿದ್ದಾರೆ.Levi's Men's 512 Slim Tapered Fit Mid Rise Black Jeans

ಒಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುನೀಲ್, "ಕುದುರೆ ಮಾರಾಟಕ್ಕಿದೆ ಎಂಬ ಬೋರ್ಡ್ ಅಲ್ಲಿರುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅನೇಕರಿಗೆ ಕುದುರೆಗಳನ್ನು ಖರೀದಿಸುವ ಆಸೆ ಇರುತ್ತದೆ, ಆದರೆ ಎಲ್ಲಿ ಖರೀದಿಸಬೇಕು ಎಂಬುದು ತಿಳಿದಿರುವುದಿಲ್ಲ. ಅಂತಹವರಿಗೆ ನಮ್ಮ ಫಾರ್ಮ್‌ಹೌಸ್ ಸಹಕಾರಿಯಾಗಲಿದೆ" ಎಂದು ತಿಳಿಸಿದ್ದಾರೆ.

ಕುದುರೆಗಳ ಬಗ್ಗೆ ಜ್ಞಾನವಿಲ್ಲದ ಮತ್ತು ಅವುಗಳನ್ನು ಎಲ್ಲಿ ಖರೀದಿಸಬೇಕು ಎಂದು ತಿಳಿಯದ ಆಸಕ್ತರು ಇಲ್ಲಿಗೆ ಬಂದು ಮಾಹಿತಿ ಪಡೆದು ಕುದುರೆಗಳನ್ನು ಖರೀದಿಸಬಹುದು. ಕುದುರೆಗಳನ್ನು ಸಾಕಲು ಆಸಕ್ತಿ ಇರುವವರಿಗೆ ಸಹಾಯ ಮಾಡುವುದೇ ಇದರ ಮುಖ್ಯ ಉದ್ದೇಶ ಎಂದು ಸುನೀಲ್ ವಿವರಿಸಿದ್ದಾರೆ.ಕಾಕ್ರೋಚ್ ಸುಧೀರ್ ಮನೆಯಿಂದ ಹೊರ ಕಳಿಸಲು ಡೋರ್ ಓಪನ್ ಮಾಡಿಸಿದ ಸುದೀಪ್! ಅಷ್ಟಕ್ಕೂ ಆದ ತಪ್ಪೇನು?

ಪ್ರಸ್ತುತ ಜೈಲಿನಲ್ಲಿರುವ ದರ್ಶನ್ ದಿಂಬು ಮತ್ತು ಹಾಸಿಗೆಗಳಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಸಹ ಕಷ್ಟಪಡುತ್ತಿದ್ದಾರೆ. ಇದರ ನಡುವೆ, ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರತಂಡದ ಮಾಹಿತಿ ಪ್ರಕಾರ, 'ಡೆವಿಲ್' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ. ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ.